ನಾಯಕನಾಗಿದ್ದರೂ ರನ್‌ಗಳಿಸುವುದೇ ಮೊದಲ ಆದ್ಯತೆಯಾಗಬೇಕು: ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗನ ಸಲಹೆ

ಐಪಿಎಲ್ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲಾ ತಂಡಗಳು ಕೂಡ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಅತ್ಯುತ್ತಮ ಫಾರ್ಮ್‌ಅನ್ನು ಎರಡನೇ ಚರಣದ ಐಪಿಎಲ್ ಪಂದ್ಯಗಳಲ್ಲಿಯೂ ಮುಂದುವರಿಸಿಕೊಂಡು ಹೋಗಬೇಕಿದೆ ಎಂಬ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗ ಸಬಾ ಕರೀಮ್ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳು ಯುಎಇನಲ್ಲಿ ಆರಂಭವಾಗಲಿದೆ.

ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಸಬಾ ಕರೀಮ್ "ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್‌ಅನ್ನು ಉತ್ತಮ ಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಆತನೋರ್ವ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡ ಆತನ ನಾಯಕತ್ವದಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ ಎಂಬುದು ಬೇರೆ ವಿಚಾರ. ಅವರಲ್ಲಿ ಸಾಕಷ್ಟು ಮ್ಯಾಚ್‌ವಿನ್ನರ್‌ಗಳು ಇದ್ದಾರೆ. ಹಾಗಾಗಿ ಇವರ ಬ್ಯಾಟಿಂಗ್ ಹೆಚ್ಚು ಗಮನಸೆಳೆಯುವುದಿಲ್ಲ" ಎಂದು ಸಬಾ ಕರೀಮ್ ಯೂಟ್ಯೂಬ್ ಚಾನೆಲ್‌ವೊಂದರ ಸಂವಾದದ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

"ತಂಡದಲ್ಲಿ ರೋಹಿತ್ ಶರ್ಮಾ ಅವರ ಪ್ರಮುಖ ಪಾತ್ರವೆಂದರೆ ಬ್ಯಾಟ್ಸ್‌ಮನ್. ವಿಚಿತ್ರವೆಂದರೆ ಪ್ರತಿಬಾರಿಯೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅತ್ಯುತ್ತಮ ಫಾರ್ಮ್‌ನೊಂದಿಗೆ ಟೂರ್ನಿಗೆ ತೆರಳುತ್ತಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪ್ರದರ್ಶನವನ್ನು ಐಪಿಎಲ್‌ನಲ್ಲಿ ಮುಂದುವರಿಸಲು ಅವರು ವಿಫಲವಾಗುತ್ತಿದ್ದಾರೆ" ಎಂದು ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ಸಬಾ ಕರೀಮ್ ವಿಶ್ಲೇಷಣೆ ಮಾಡಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಶರ್ಮಾ ಬಳಗ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಣಕ್ಕೆ ಇಳಿಯಲಿದೆ.

"ಕೆಲವೊಮ್ಮೆ ನನಗೆ ಒಬ್ಬ ಆಟಗಾರನು ನಾಯಕತ್ವಕ್ಕೆ ಹೆಚ್ಚು ತನ್ನ ಸಾಮರ್ಥ್ಯವನ್ನು ವ್ಯಯಿಸುತ್ತಾನೆ ಈ ಮೂಲಕ ಆತನ ಗಮನ ಬ್ಯಾಟಿಂಗ್‌ನಿಂದ ವಿಮುಖವಾಗುತ್ತದೆ ಎಂದು ಭಾಸವಾಗುತ್ತದೆ. ನೀವು ಬ್ಯಾಟ್ಸ್‌ಮನ್ ಆಗಿದಗ್ದು ನಾಯಕನಾಗಿದ್ದರೆ ನಿಮ್ಮ ಮೊದಲ ಪಾತ್ರವು ಬ್ಯಾಟಿಂಗ್ ಮೂಲಕ ರನ್ ಗಳಿಸುವುದಾಗಿದೆ. ಬ್ಯಾಟಿಂಗ್‌ನಲ್ಲಿನ ಆತ್ಮವಿಶ್ವಾಸದಿಂದ ನಾಯಕತ್ವ ಕೂಡ ಉತ್ತಮವಾಗುತ್ತದೆ. ಇದು ರೋಹಿತ್ ಶರ್ಮಾ ವಿಚಾರದಲ್ಲೂ ಆಗಬೇಕಿದೆ" ಎಂದು ಸಬಾ ಕರೀಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI ಹೆಸರಿಸಿದ ಶಕೀಬ್: ಗೇಲ್, ಎಬಿಡಿಗೆ ಸ್ಥಾನವಿಲ್ಲಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI ಹೆಸರಿಸಿದ ಶಕೀಬ್: ಗೇಲ್, ಎಬಿಡಿಗೆ ಸ್ಥಾನವಿಲ್ಲ

ನಿಧಾನವಾಗಿ ಟೂರ್ನಿಯನ್ನು ಆರಂಭಿಸುವ ಸಂಪ್ರದಾಯ ಹೊಂದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿಯೂ ಅದನ್ನು ಮುಂದುವರಿಸಿದೆ. ಐದು ಬಾರಿಯ ಚಾಂಪಿಯನ್ ತಂಡವಾಗಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನವನ್ನು ಪಡದುಕೊಂಡಿದೆ. ಮುಂಬರುವ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK), ಕೋಲ್ಕತ್ತಾ ನೈಟ್ ರೈಡರ್ಸ್ (KKR), ಡೆಲ್ಲಿ ಕ್ಯಾಪಿಟಲ್ಸ್ (DC), ರಾಜಸ್ಥಾನ ರಾಯಲ್ಸ್ (RR), ಸನ್‌ರೈಸರ್ಸ್ ಹೈದರಾಬಾದ್ (SRH), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳನ್ನು ಎದುರಿಸಲಿದೆ.

ಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರ

T20 World cup ನಲ್ಲಿ ಭಾರತವನ್ನು ಸೋಲಿಸೋಕೆ ಪಾಕಿಸ್ತಾನದ ಪ್ಲ್ಯಾನ್ ಏನು? | Oneindia Kannada

ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡುಲ್ಕರ್, ಕ್ರಿಸ್ ಲಿನ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಮ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೋಲ್ಟ್, ಯುಧ್ವೀರ್ ಸಿಂಗ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 21:48 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X