ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs GT: ಮುಂಬೈ ತಂಡದ ಗೆಲುವಿನೊಂದಿಗೆ ಕುಣಿದು ಕುಪ್ಪಳಿಸಿದ ನಟ ರಣವೀರ್ ಸಿಂಗ್

MI vs GT: Actor Ranveer Singh Celebrates in His Style For Mumbai Indians Team Won

ಶುಕ್ರವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯ 51ನೇ ಪಂದ್ಯವು ಭಾರೀ ಹೈಡ್ರಾಮಾಗೆ ಸಾಕ್ಷಿಯಾಯಿತು. ಕೊನೆಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಓವರ್‌ನಲ್ಲಿ ರೋಚಕವಾಗಿ ಮೇಲುಗೈ ಸಾಧಿಸಿ ಗೆಲುವು ಕಂಡಿತು.

ವೇಗಿ ಡೇನಿಯಲ್ ಸ್ಯಾಮ್ಸ್ ಅವರು ಎಸೆದ ಅಂತಿಮ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 9 ರನ್‌ಗಳ ಅವಶ್ಯಕತೆ ಇತ್ತು. ಆದರೆ ಸ್ಯಾಮ್ಸ್ ಆ ಓವರ್‌ ಅನ್ನು ಸಂಪೂರ್ಣ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು ಮತ್ತು ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಐದು ರನ್‌ಗಳ ಜಯ ತಂದಿತ್ತರು. ಗೆಲುವಿನ ನಂತರ, ಇಡೀ ಮುಂಬೈ ಇಂಡಿಯನ್ಸ್ ಪಾಳಯ ಅದ್ಧೂರಿಯಾಗಿ ಗೆಲುವಿನ ಕೇಕೆ ಹಾಕಿತು ಮತ್ತು ನಾಯಕ ರೋಹಿತ್ ಶರ್ಮಾ ಸಂತಸದಿಂದ ಕುಣಿದಾಡಿದರು.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಹಾಜರಾಗಿದ್ದರು. ಪಂದ್ಯದ ಅಂತಿಮ ಓವರ್‌ನ ಅಂತಿಮ ಬಾಲ್‌ನಲ್ಲಿ ಮುಂಬೈ ವಿಜಯದ ನಂತರ ರಣವೀರ್ ಸಿಂಗ್ ಸಖತ್ ಸ್ಟೈಲ್‌ನಲ್ಲಿ ಸಂಭ್ರಮಿಸಿದರು. ಅಂತಿಮ ಎಸೆತದಲ್ಲಿ ಗುಜರಾತ್ ಟೈಟನ್ಸ್‌ಗೆ ಸಿಕ್ಸರ್‌ನ ಅಗತ್ಯವಿತ್ತು. ಆದರೆ ಡೇನಿಯಲ್ ಸ್ಯಾಮ್ಸ್ ಮಾಡಿದ ನಿಧಾನಗತಿಯ ಬೌಲ್ ಡೇವಿಡ್ ಮಿಲ್ಲರ್ ಅವರನ್ನು ವಂಚಿಸಿ ಕೀಪರ್ ಕೈ ಸೇರಿತು.

MI vs GT: Actor Ranveer Singh Celebrates in His Style For Mumbai Indians Team Won

ಮುಂಬೈ ಗೆಲುವಿನ ನಂತರ, ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಡೀ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ನಟ ರಣವೀರ್ ಸಿಂಗ್ ಏನೂ ಭಿನ್ನವಾಗಿರಲಿಲ್ಲ. ನಿಮಗೆ ಗೊತ್ತಿರದ ಅಚ್ಚರಿಯ ವಿಷಯವೆನೆಂದರೆ ರಣವೀರ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಕಟ್ಟಾ ಅಭಿಮಾನಿಯಾಗಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಜಿ ಚಾಂಪಿಯನ್ ಮುಂಬೈ 20 ಓವರ್‌ಗಳಲ್ಲಿ 177/6 ಗಳಿಸಿದರು. ಇದರಲ್ಲಿ ಇಶಾನ್ ಕಿಶನ್ (45), ರೋಹಿತ್ ಶರ್ಮಾ (43) ಮತ್ತು ಟಿಮ್ ಡೇವಿಡ್ (ಅಜೇಯ 44) ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು.

MI vs GT: Actor Ranveer Singh Celebrates in His Style For Mumbai Indians Team Won

178 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಒಂದು ಹಂತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 106 ರನ್‌ಗಳ ಜೊತೆಯಾಟವಾಡಿದರು. ಆದಾಗ್ಯೂ, ಮುರುಗನ್ ಅಶ್ವಿನ್ ಎಸೆದ 13ನೇ ಓವರ್ ಅವರು ಗಿಲ್ ಮತ್ತು ಸಹಾ ಇಬ್ಬರನ್ನೂ ಔಟ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಾವಣೆ ಮಾಡಿದರು.

ಅಲ್ಲಿಂದ ಡೇನಿಯಲ್ ಸ್ಯಾಮ್ಸ್ ಮತ್ತು ರಿಲೆ ಮೆರೆಡಿತ್ ಬಿಗಿಯಾದ ಓವರ್‌ಗಳನ್ನು ಎಸೆದರು ಮತ್ತು ಅಂತಿಮವಾಗಿ ಗುಜರಾತ್ ಟೈಟನ್ಸ್ ಐದು ರನ್‌ಗಳ ಸೋಲು ಅನುಭವಿಸಿತು.

ಪ್ರಸ್ತುತ ಮುಂಬೈ ಇಂಡಿಯನ್ಸ್ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಗುಜರಾತ್ 16 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

Story first published: Saturday, May 7, 2022, 11:21 [IST]
Other articles published on May 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X