ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಕಲ್ ವಾನ್‌ರನ್ನು ಟ್ವಿಟರ್‌ನಿಂದ ಬ್ಲಾಕ್ ಮಾಡಿದ ಸಂಜಯ್ ಮಂಜ್ರೇಕರ್!

Michael Vaughan responds after being blocked by Sanjay Manjrekar

ಲಂಡನ್, ಜುಲೈ 10: ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್, ಈಗಿನ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸುವ ವಿಚಾರವಾಗಿ ಇಬ್ಬರ ಮಧ್ಯೆ ಟ್ವೀಟ್ ಸಮರ ಶುರುವಾಗಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸಂಜಯ್ ಮಂಜ್ರೇಕರ್ ಅವರು ರವೀಂದ್ರ ಜಡೇಜಾ ಅವರ ಬಗ್ಗೆ 'ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್; (ಕಾಂಜಿಪೀಂಜಿ ಆಟಗಾರ ಎಂಬರ್ಥ) ಎಂದು ಕಾಮೆಂಟ್ ಮಾಡಿದ್ದರು. ಜುಲೈ 6ರ ಶ್ರೀಲಂಕಾ-ಭಾರತ ಪಂದ್ಯದ ವೇಳೆ ಜಡೇಜಾ ಕುರಿತ ಕಾಮೆಂಟ್ ವಿವಾದ ಶುರುವಾಗಿತ್ತು.

ರಾಯುಡು ಮುಂದಿರಿಸಿ ಧೋನಿಗೆ ಜರಿದ ಯುವರಾಜ್‌ ಸಿಂಗ್‌ ತಂದೆರಾಯುಡು ಮುಂದಿರಿಸಿ ಧೋನಿಗೆ ಜರಿದ ಯುವರಾಜ್‌ ಸಿಂಗ್‌ ತಂದೆ

ಸಂಜಯ್ ಮಂಜ್ರೇಕರ್, ಮೈಕಲ್ ವಾನ್, ರವೀಂದ್ರ ಜಡೇಜಾ ವಿವಾದ ಬಗೆಗಿನ ಸಂಕ್ಷಿಪ್ತ ವಿವರ ಇಲ್ಲಿದೆ.

ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್‌

ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್‌

ಜುಲೈ 6ರಂದು ಶ್ರೀಲಂಕಾ-ಭಾರತ ಪಂದ್ಯದಲ್ಲಿ ಜಡೇಜಾ ಆಡಿದ್ದರಿಂದ ಅಂದು ಟ್ವೀಟ್ ಮಾಡಿದ್ದ ವಾನ್, 'ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್‌ನಲ್ಲೇ ತಂಡದಲ್ಲಿ ಆರಿಸಿದ್ದನ್ನು ನೋಡಿದೆ' ಎಂದು ತಮಾಷೆಯಾಗಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು. ಅದೇ ದಿನ ರಾತ್ರಿ ಪ್ರತಿಕ್ರಿಯಿಸಿದ್ದ ಮಂಜ್ರೇಕರ್, 'ಅದು ನನ್ನ ಊಹೆಯ ತಂಡ, ನನ್ನ ತಂಡವಲ್ಲ ವಾನ್' ಎಂದಿದ್ದರು. (ಮಂಜ್ರೇಕರ್ ಟ್ವಿಟರ್ ನಲ್ಲಿ ತನ್ನನ್ನು ಬ್ಲಾಕ್ ಮಾಡಿದ ಬಳಿಕ ವಾನ್, 'ನನ್ನ ಬದುಕೀಗ ಮುರಿದಿದೆ' ಎಂಬಂತೆ ಟ್ವೀಟ್ ಮಾಡಿದ್ದರು).

ಸೆಮಿಫೈನಲ್‌ನಲ್ಲಿ ಜಡೇಜಾ

ಸೆಮಿಫೈನಲ್‌ನಲ್ಲಿ ಜಡೇಜಾ

ರವೀಂದ್ರ ಜಡೇಜಾ ಬಗ್ಗೆ ಮಂಜ್ರೇಕರ್ ವಿವಾದಾತ್ಮಕ ಕಾಮೆಂಟ್ ಮಾಡಿದ ಬಳಿಕವೂ ಅಂದರೆ ಮಂಗಳವಾರ (ಜುಲೈ 9) ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಜಡೇಜಾ ಅವರು ಭಾರತದ ಆಡುವ XI ತಂಡಲ್ಲಿ ಕಾಣಿಸಿಕೊಂಡಿದ್ದರು. ಆಗ ವಾನ್‌ಗೆ ಮಂಜ್ರೇಕರ್ ಕೆಣಕಲು ಪ್ರಬಲ ಅಸ್ತ್ರ ಸಿಕ್ಕಂತಾಗಿತ್ತು.

ಸ್ಪಿನ್ ಬೌಲಿಂಗ್ ಮೂಲಕ ಔಟ್

ಸ್ಪಿನ್ ಬೌಲಿಂಗ್ ಮೂಲಕ ಔಟ್

ಜುಲೈ 9ರ ಭಾರತ-ಕಿವೀಸ್ ಸೆಮಿಫೈನಲ್ ವೇಳೆ ವಾನ್, 'ಇದು ಬಿಟ್ಸ್ ಆ್ಯಂಡ್ ಪೀಸಸ್ ಕಾಲ' ಎಂದು ಟ್ವೀಟ್ ಮಾಡಿದ್ದರು. ಜಡೇಜಾ ಅವರು ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಸ್ಪಿನ್ ಬೌಲಿಂಗ್ ಮೂಲಕ ಬೌಲ್ಡ್ ಮಾಡಿದಾಗಲೂ ಮೈಕಲ್, 'ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್ ಸ್ಪಿನ್ ಮೂಲಕ ಔಟ್ ಮಾಡಿಬಿಟ್ಟ' ಎಂದು ಬರೆದುಕೊಂಡಿದ್ದರು.

ಟ್ವಿಟರ್ ನಲ್ಲಿ ಬ್ಲಾಕ್

ಟ್ವಿಟರ್ ನಲ್ಲಿ ಬ್ಲಾಕ್

ಜಡೇಜಾ ಉತ್ತಮ ಪ್ರದರ್ಶನವನ್ನು ನೀಡುತ್ತಿರೋದರಿಂದ ಜಡೇಜಾ ಅವರನ್ನು ಕೆಣಕಿ ತಾನು ಇಕ್ಕಟ್ಟಿಗೆ ಸಿಲುಕಿದೆ ಎಂದು ಮಂಜ್ರೇಕರ್‌ಗೆ ಅನ್ನಿಸಿರಬೇಕು. ಇದಲ್ಲದೆ ವಾನ್ ಟ್ವೀಟ್‌ಗೆ ಇನ್ನು ಆಹಾರವಾಗೋದೂ ಬೇಡ ಎಂದೋ ಏನೋ ಮಂಜ್ರೇಕರ್, ವಾನ್ ಅವರನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ.

Story first published: Wednesday, July 10, 2019, 11:49 [IST]
Other articles published on Jul 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X