Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ ಟಿ20 ಆಟ ನಿಲ್ಲಿಸಿದ ಮಾಜಿ ನಾಯಕಿ ಮಿಥಾಲಿ ರಾಜ್

ಟಿ20 ಆಟ ನಿಲ್ಲಿಸಿದ ಮಾಜಿ ನಾಯಕಿ ಮಿಥಾಲಿ ರಾಜ್ | Mithali Raj | Oneindia Kannada
Mithali Raj announces retirement from T20 Internationals

ನವದೆಹಲಿ, ಸೆಪ್ಟೆಂಬರ್ 3: ಭಾರತದ ಮಹಿಳಾ ಟಿ20 ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್, ಮಂಗಳವಾರ (ಸೆಪ್ಟೆಂಬರ್ 3) ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಮಿಥಾಲಿ ಅಂತಾರಾಷ್ಟ್ರೀಯ ಚುಟುಕು ಮಾದರಿಯ ಕ್ರಿಕೆಟ್‌ ಆಟ ನಿಲ್ಲಿಸಿರುವುದನ್ನು ಬಿಸಿಸಿಐ ಖಾತರಿಪಡಿಸಿದೆ.

ಭಾರತದ ಮಹಿಳಾ ಏಕದಿನ ತಂಡಕ್ಕೆ ನಾಯಕಿಯಾಗಿ ಮುಂದುವರೆಯಲಿರುವ ಮಿಥಾಲಿ ರಾಜ್, ಈ ವರ್ಷ ಮಾರ್ಚ್‌ನಲ್ಲಿ ಭಾರತದ ಗುವಾಹಟಿಯಲ್ಲಿ ನಡೆದಿದ್ದ, ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಟಿ20ಯಲ್ಲಿ ಕಡೇಯಸಾರಿ ಪಂದ್ಯವನ್ನಾಡಿದ್ದರು.

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವ ಕಪ್‌ನಲ್ಲಿ ಯುವ ಆಟಗಾರ್ತಿಯರಿಗೆ ಅವಕಾಶ ನೀಡುವತ್ತ ಆಯ್ಕೆ ಸಮಿತಿ ಯೋಚಿಸುತ್ತಿದೆ. ಹೀಗಾಗಿ ಮುಂಬರಲಿರುವ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಯಲ್ಲಿ ಮಿಥಾಲಿಯನ್ನು ಪರಿಗಣಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿಯಿದೆ. ಈ ಗೊಂದಲಕ್ಕೆ ಎಡೆ ಮಾಡಿ ಕೊಡದೆ ಮಿಥಾಲಿ ತಾನೇ ಸರಣಿಗೆ ಅಲಭ್ಯರಾಗುತ್ತಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

ಮಿಥಾಲಿ ರಾಜ್ ಒಟ್ಟು 32 ಟಿ20ಐ ಪಂದ್ಯಗಳಲ್ಲಿ ಭಾರತದ ಮಾಹಿಳಾ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ ಶ್ರೀಲಂಕಾದಲ್ಲಿ 2012ರಲ್ಲಿ ನಡೆದಿದ್ದ, ಬಾಂಗ್ಲಾದೇಶದಲ್ಲಿ 2014ರಲ್ಲಿ ನಡೆದಿದ್ದ, 2016ರಲ್ಲಿ ಭಾರತದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳೂ ಸೇರಿವೆ.

2006ರಲ್ಲಿ ಇಂಗ್ಲೆಂಡ್‌ನ ಡರ್ಬಿಯಲ್ಲಿ ಭಾರತದ ಮಹಿಳಾ ತಂಡ ಚೊಚ್ಚಲ ಬಾರಿಗೆ ಆಡಿದ್ದಾಗಲೂ ಮಿಥಾಲಿ ತಂಡದ ನಾಯಕಿಯಾಗಿದ್ದರು. 89 ಟಿ20ಐ ಪಂದ್ಯಗಳಲ್ಲಿ ಮಿಥಾಲಿ 37.52ರ ಸರಾಸರಿಯಲ್ಲಿ 2364 ರನ್ ಬಾರಿಸಿದ್ದಾರೆ. ಇದರಲ್ಲಿ 17 ಅರ್ಧಶತಕಗಳೂ ಸೇರಿವೆ. ಟಿ20ಐನಲ್ಲಿ 2000 ರನ್‌ ಬಾರಿಸಿದ ಮೊದಲ ಭಾರತೀಯೆ ಹೆಗ್ಗಳಿಕೆಗೂ ಮಿಥಾಲಿ ಪಾತ್ರರಾಗಿದ್ದಾರೆ.

Story first published: Tuesday, September 3, 2019, 15:29 [IST]
Other articles published on Sep 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+