ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕ್ರಿಕೆಟ್‌ನ ಬಾನೆತ್ತರದಲ್ಲಿ ಭಾರತೀಯ ಧ್ವಜ ಹಾರಿಸಿದ ಮಿಥಾಲಿ ರಾಜ್‌!

Mithali Raj becomes first Indian woman to score 10,000 runs in international cricket

ಲಕ್ನೋ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಪುರುಷರ ತಂಡವಷ್ಟೇ ಅಲ್ಲ, ಮಹಿಳಾ ತಂಡವೂ ವಿಶ್ವದ ಕ್ರಿಕೆಟ್‌ ಅಭಿಮಾನಿಗಳು ಭಾರತೀಯ ಕ್ರಿಕೆಟ್‌ನತ್ತ ತಿರುಗಿ ನೋಡುವತ್ತ ಸಾಧನೆಗಳನ್ನು ಮಾಡಿದೆ. ಈಚಿನ ದಿನಗಳಲ್ಲಿ ಹರ್ಮನ್‌ಪ್ರೀತ್‌ ಕೌರ್, ಸ್ಮೃತಿ ಮಂಧಾನ, ಯುವ ಆಟಗಾರ್ತಿ ಶೆಫಾಲಿ ವರ್ಮಾ ಮಿನುಗುತ್ತಿದ್ದರೆ, ಭಾರತದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಹಿಂದೆ ಅನೇಕ ಸಾರಿ ಭಾರತೀಯರು ಹೆಮ್ಮೆ ಪಡುವಂಥ ಸಾಧನೆಗಳನ್ನು ಮಾಡಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹಶ್ಮತುಲ್ಲ ಶಾಹಿದಿಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹಶ್ಮತುಲ್ಲ ಶಾಹಿದಿ

ಉತ್ತರ ಪ್ರದೇಶದ ಲಕ್ನೋವಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಯಪೇಯಿ ಸ್ಟೇಡಿಯಂನಲ್ಲಿ ಭಾರತದ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ಮಧ್ಯೆ ಏಕದಿನ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇತ್ತಂಡಗಳ 3ನೇ ಏಕದಿನ ಪಂದ್ಯದಲ್ಲಿ ಮಿಥಾಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಏಕದಿನದಲ್ಲಿ ಅತ್ಯಧಿಕ ರನ್

ಏಕದಿನದಲ್ಲಿ ಅತ್ಯಧಿಕ ರನ್

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ವೃತ್ತಿ ಬದುಕಿನ 212ನೇ ಏಕದಿನ ಪಂದ್ಯ ಆಡಿದ ಭಾರತದ ನಾಯಕಿ ಮಿಥಾಲಿ ರಾಜ್ 50 ಎಸೆತಗಳಲ್ಲಿ 36 ರನ್ ಸೇರಿಸಿದರು. ಇದರೊಂದಿಗೆ ಮಿಥಾಲಿ ಭಾರತೀಯರ ಪರ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆಗೆ ಕಾರಣರಾಗಿದ್ದಾರೆ. ಏಕದಿನದಲ್ಲಿ ಮಿಥಾಲಿ ಹೆಸರಿನಲ್ಲೀಗ ಒಟ್ಟು 6974 ರನ್ ದಾಖಲೆಯಿದೆ.

ವಿಶ್ವದಲ್ಲಿ ಮೊದಲ ಭಾರತೀಯೆ

ವಿಶ್ವದಲ್ಲಿ ಮೊದಲ ಭಾರತೀಯೆ

ಶುಕ್ರವಾರ (ಮಾರ್ಚ್ 12) ಏಕದಿನದಲ್ಲಿ 36 ರನ್ ಬಾರಿಸುವ ಮೂಲಕ ಮಿಥಾಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ಮೊದಲ ಭಾರತೀಯೆ ಎಂಬ ದಾಖಲೆ ಮಿಥಾಲಿ ಹೆಸರಿಗೆ ಸೇರಿದೆ. ಮಿಥಾಲಿ ಸದ್ಯ ಒಟ್ಟಿಗೆ 10,001 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಏಕದಿನದಲ್ಲಿ 6974 ರನ್ ಗಳಿಸಿರುವ ಮಿಥಾಲಿ ಇನ್ನು 26 ರನ್ ಬಾರಿಸಿದರೆ 7000 ರನ್‌ಗಾಗಿ ಇನ್ನೊಂದು ದಾಖಲೆ ನಿರ್ಮಾಣವಾಗಲಿದೆ.

ಷಾರ್ಲೆಟ್ ಎಡ್ವರ್ಡ್ಸ್ ನಂ.1

ಷಾರ್ಲೆಟ್ ಎಡ್ವರ್ಡ್ಸ್ ನಂ.1

ಮಹಿಳಾ ವಿಭಾಗದ ವಿಶ್ವಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ದಾಖಲೆಯಲ್ಲಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ದಂತಕತೆ ಷಾರ್ಲೆಟ್ ಎಡ್ವರ್ಡ್ಸ್ 309 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10273 ರನ್ ಗಳಿಸಿದ್ದಾರೆ. ಇನ್ನು ಭಾರತದ ಮಿಥಾಲಿ ರಾಜ್ (311 ಪಂದ್ಯ, 10001 ರನ್), ನ್ಯೂಜಿಲೆಂಡ್‌ನ ಸೂಝಿ ಬೇಟ್ಸ್‌ (247 ಪಂದ್ಯ, 7849 ರನ್), ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್ (234 ಪಂದ್ಯ, 7816 ರನ್), ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (194 ಪಂದ್ಯ, 6900 ರನ್) ಅನಂತರದ ಸ್ಥಾನಗಳಲ್ಲಿದ್ದಾರೆ.

ಮಿಥಾಲಿ ಸಾಧನೆ ಅಂಕಿ-ಅಂಶಗಳು

ಮಿಥಾಲಿ ಸಾಧನೆ ಅಂಕಿ-ಅಂಶಗಳು

ಈವರೆಗೆ 10 ಟೆಸ್ಟ್ ಪಂದ್ಯಗಳನ್ನಾಡಿರುವ 38ರ ಹರೆಯದ ಮಿಥಾಲಿ, 663 ರನ್, 212 ಏಕದಿನ ಪಂದ್ಯಗಳಲ್ಲಿ 6974 ರನ್ ಮತ್ತು 89 ಟಿ20ಐ ಪಂದ್ಯಗಳಲ್ಲಿ 2364 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 1 ಶತಕ, ಏಕದಿನದಲ್ಲಿ 7 ಶತಕಗಳ ಸಾಧನೆ ಹೊಂದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಮಿಥಾಲಿ, ರಾಜಸ್ಥಾನ್‌ನ ಜೋಧಪುರ್‌ನಲ್ಲಿ ಜನಿಸಿದವರು.

Story first published: Friday, March 12, 2021, 17:17 [IST]
Other articles published on Mar 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X