ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

28ರ ಹರೆಯದಲ್ಲಿ ನಿವೃತ್ತಿ ಹೇಳಲು ಅವರಿಬ್ಬರು ಕಾರಣ: ಪಾಕ್ ದಿಗ್ಗಜರ ಬಗ್ಗೆ ಆಮಿರ್ ಕೆಂಡ

ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಆಮಿರ್ ಕಳೆದೆರಡು ದಿನಗಳ ಹಿಂದೆಯಷ್ಟೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದಾರೆ. ಕೇವಲ 28ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಹೇಳುವ ಮೂಲಕ ಆಮಿರ್ ಅಚ್ಚರಿಗೆ ಕಾರಣರಾಗಿದ್ದರು. ತನ್ನ ಈ ನಿರ್ಧಾರಕ್ಕೆ ಆಮಿರ್ ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್‌ಅನ್ನು ದೂರಿದ್ದಾರೆ.

ಮೊಹಮ್ಮದ್ ಆಮಿರ್ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ವಾಕರ್ ಯೂನಿಸ್ ಮೇಲೆ ನೇರವಾದ ಆರೋಪವನ್ನು ಮಾಡಿದ್ದಾರೆ. ಈ ಇಬ್ಬರು ತನ್ನ ಮೇಲೆ ಮಸಿ ಬಳಿಯುವ ಯತ್ನ ನಡೆಸಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.

ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!

ಹಾಗಾದರೆ ಮೊಹಮ್ಮದ್ ಆಮೀರ್ ಪಾಕಿಸ್ತಾನದ ಮ್ಯಾನೇಜ್‌ಮೆಂಟ್ ಮೇಲೆ ಮಾಡಿದ ಆರೋಪವೇನು? ಏನೆಲ್ಲಾ ಮಾತುಗಳನ್ನು ಆಮಿರ್ ಹೇಳಿದ್ದಾರೆ ಮುಂದೆ ಓದಿ..

ಯೂಟ್ಯೂಬ್ ಚಾನೆಲ್‌ನಲ್ಲಿ ಆಮಿರ್ ಮಾತು

ಯೂಟ್ಯೂಬ್ ಚಾನೆಲ್‌ನಲ್ಲಿ ಆಮಿರ್ ಮಾತು

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಆಮಿರ್ ಪಾಕಿಸ್ತಾನದ ಕೋಚ್ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ಯೂನಿಸ್ ಖಾನ್ ತನಗೆ ತೊಂದರೆಯನ್ನು ನೀಡಿದರು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಆಮಿರ್ ನಿವೃತ್ತಿ ಬಗ್ಗೆ ಎದ್ದಿದ್ದ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದರು

ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದರು

ಆ ಇಬ್ಬರು ನನಗೆ ಟೆಸ್ಟ್ ತಂಡದಲ್ಲಿ ಆಡಲು ಇಷ್ಟವಿಲ್ಲ. ಕೇವಲ ಹಣಕ್ಕಾಗಿ ಕ್ರಿಕೆಟ್ ಲೀಗ್‌ಗಳಲ್ಲಿ ಮಾತ್ರವೇ ಆಡಲು ಬಯಸುತ್ತೇನೆ ಎಂದು ಪದೇ ಪದೇ ಪದೆ ಹೇಳಿ ಜನರಲ್ಲಿ ಅಭಿಪ್ರಾಯ ತುಂಬಿಸುತ್ತಿದ್ದರು. ತಂಡದ ಬಲಕ್ಕಾಗಿ ನಾನು ಸಾಕಷ್ಟು ಪರಿಶ್ರಮವಹಿಸಿದ ಹೊರತಾಗಿಯೂ ನಾನು ತಂಡವನ್ನು ನಿರಾಸೆಗೊಳಿಸಿದ್ದೇನೆ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದರು" ಎಂದು ಮಿಸ್ಬಾ ಉಲ್ ಹಕ್ ಹಾಗೂ ವಾಕರ್ ಯೂನಿಸ್ ಬಗ್ಗೆ ನೇರವಾಗಿಯೇ ವಾಗ್ಧಾಳಿಯನ್ನು ನಡೆಸಿದ್ದಾರೆ.

"ಎಲ್ಲರಿಗೂ ಇದು ಗೊತ್ತಾಗಲಿ"

"ಅವರು ನನ್ನ ಹೆಸರಿಗೆ ಮಸಿ ಬಳಿಯುವ ಯತ್ನವನ್ನು ನಡೆಸಿದರು. ಈ ಹಂತಕ್ಕೆ ಬರಲು ನಾನು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದೇನೆ. ಈ ನಿರ್ಧಾರ ನನಗೆ ಅತ್ಯಂತ ಕಠಿಣವಾಗಿತ್ತು. ಆದರೆ ಈಗ ಮಾತನಾಡುವ ಸಮಯ ಬಂದಿದೆ. ಈ ವಿಚಾರ ಎಲ್ಲರಿಗೂ ತಿಳಿಯಲಿ. ಏನಾಗುತ್ತಿದೆ ಎಂಬುದರ ಅರಿವು ಎಲ್ಲರಿಗೂ ಆಗಲಿ ಎಂಬ ಕಾರಣಕ್ಕೇ ಈ ನಿರ್ಧಾರವನ್ನು ತೆಗೆದುಕೊಂಡೆ" ಎಂದು ಮೊಹಮ್ಮದ್ ಆಮಿರ್ ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಆಯ್ಕೆಯಾಗದಿದ್ದಾಗ ನೋವಾಯಿತು

ಆಯ್ಕೆಯಾಗದಿದ್ದಾಗ ನೋವಾಯಿತು

"ನ್ಯೂಜಿಲೆಂಡ್ ವಿರುದ್ಧದ ಸರಣಿಗೆ 35 ಸದಸ್ಯರ ತಂಡದಲ್ಲಿ ಆಯ್ಕೆ ಮಾಡದಿರುವಾಗ ಖಂಡಿತಾ ನನಗೆ ನೋವಾಯಿತು. ನಾನು ಕೇವಲ ಲೀಗ್‌ ಕ್ರಿಕೆಟ್‌ಗಳಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದರೆ ಈ ಸಂಗತಿ ನನಗೆ ನೋವಾಗುತ್ತಿರಲಿಲ್ಲ. ಅಥವಾ ನಾನು ಅದಕ್ಕಾಗಿ ಪ್ರತಿಕ್ರಿಯಿಸುತ್ತಲೂ ಇರಲಿಲ್ಲ" ಎಂದು ತಂಡಕ್ಕೆ ಆಯ್ಕೆಯಾಗದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Story first published: Sunday, December 20, 2020, 15:30 [IST]
Other articles published on Dec 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X