ಭಾರತದ ಆ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯುವುದು ತುಂಬಾ ಸುಲಭ: ಅಮೀರ್

ಕಳೆದ ಡಿಸೆಂಬರ್ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ವೇಗಿ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ದಿಢೀರ್ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದ್ದರು. ಉತ್ತಮ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿಯೇ ಮೊಹಮ್ಮದ್ ಅಮೀರ್ ಈ ರೀತಿಯ ನಿರ್ಧಾರವನ್ನು ಯಾಕೆ ಕೈಗೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆದಿದ್ದವು.

WTC Final : ನ್ಯೂಜಿಲೆಂಡ್‌ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ ಪೂಜಾರWTC Final : ನ್ಯೂಜಿಲೆಂಡ್‌ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ ಪೂಜಾರ

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅಮೀರ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ನಿವೃತ್ತಿ ಮತ್ತು ಇತರೆ ಆಟಗಾರರ ಕುರಿತು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೀಗೆ ಸಂದರ್ಶನದಲ್ಲಿ ಯಾವ ಸ್ಟಾರ್ ಬ್ಯಾಟ್ಸ್‌ಮನ್ ವಿಕೆಟ್ ಪಡೆಯುವುದು ತೀರಾ ಸುಲಭ ಎಂಬ ಪ್ರಶ್ನೆ ಎದುರಾದಾಗ ಮೊಹಮ್ಮದ್ ಅಮೀರ್ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳ ಹೆಸರನ್ನು ಹೇಳಿದ್ದಾರೆ.

ಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆ

ಮೊಹಮ್ಮದ್ ಅಮೀರ್ ಪ್ರಕಾರ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ತೀರಾ ಸುಲಭವಂತೆ. 'ರೋಹಿತ್ ಶರ್ಮಾ ವಿಕೆಟ್ ಪಡೆಯುವುದು ನನಗೇನೂ ಕಷ್ಟದ ಕೆಲಸ ಎನಿಸಲಿಲ್ಲ. ರೋಹಿತ್ ಶರ್ಮಾ ಎಡಗೈ ವೇಗಿ ಬೌಲಿಂಗ್‌ ಎದುರಿಸಲು ತೀರಾ ಕಷ್ಟ ಪಡುತ್ತಾರೆ, ಅದರಲ್ಲಿಯೂ ಎಡಗೈ ವೇಗಿಯ ಇನ್ ಸ್ವಿಂಗ್ ಎಸೆತವನ್ನು ಎದುರಿಸಲು ರೋಹಿತ್ ಪರದಾಡುತ್ತಾರೆ, ಹೀಗಾಗಿ ರೋಹಿತ್ ಶರ್ಮಾ ವಿಕೆಟ್ ಪಡೆಯುವುದು ಅಷ್ಟೇನು ಕಷ್ಟವಲ್ಲ. ಇನ್ನು ವಿರಾಟ್ ಕೊಹ್ಲಿ ಬೌಲರ್‌ಗಳ ಮೇಲೆ ಒತ್ತಡವನ್ನೇರುತ್ತಾರೆ ಎಂಬುದನ್ನು ಬಿಟ್ಟರೆ ಕೊಹ್ಲಿ ವಿಕೆಟ್ ಪಡೆಯುವುದು ಕೂಡ ಅಷ್ಟೇನೂ ಕಷ್ಟವೇನಲ್ಲ' ಎಂದು ಮೊಹಮ್ಮದ್ ಅಮೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 20, 2021, 17:53 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X