ದೇಶ ಹಾಗೂ ಕ್ರಿಕೆಟ್ ಎಡೆಗಿನ ನನ್ನ ನಿಷ್ಠೆಯನ್ನೇ ಪ್ರಶ್ನಿಸಲಾಗಿತ್ತು: ಶಮಿ

Posted By:
Mohammed Shami talks about match fixing allegation

ಬೆಂಗಳೂರು, ಮಾರ್ಚ್ 23: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಅವರ ದೇಶಪ್ರೇಮ ಮತ್ತು ಕ್ರಿಕೆಟ್ ಬಗ್ಗೆ ಅವರ ನಿಷ್ಠೆಯ ಬಗ್ಗೆಯೇ ಪ್ರಶ್ನೆಗಳು ಎದ್ದು ಎರಡು ವಾರ ಸತತ ವಿವಾದದ ಬಳಿಕ ನಿನ್ನೆಯಷ್ಟೆ ಬಿಸಿಸಿಐ ಮೊಹಮ್ಮದ್ ಶಮಿ ಅವರ ವಿರುದ್ಧದ ಆರೋಪಗಳನ್ನು ಖುಲಾಸೆ ಮಾಡಿ ಅವರ ಗುತ್ತಿಗೆಯನ್ನು ನವೀಕರಿಸಿತು.

ಮೂರು ವಾರದಿಂದ ಪತ್ನಿ ಹಸಿನ್ ಜಾನ್ ಅವರು ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಿದ್ದರೂ ಸಹ ಎಲ್ಲೂ ತುಟಿ ಬಿಚ್ಚದೆ, ಕೇವಲ ಆತನ ವಿರುದ್ಧ ಮಾಡಲಾದ ತನಿಖೆಗೆ ಶ್ರದ್ಧೆಯಿಂದ ಸಹಕರಿಸಿ ಈಗ ಆರೋಪ ಮುಕ್ತನಾಗಿ ಹೊರಬಂದಿರುವ ಶಮಿ ಮೊದಲ ಬಾರಿಗೆ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಅದೂ ನೋವಿನಿಂದ...

ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ

'ಎರಡು ವಾರದಿಂದ ಮಾನಸಿಕ ಹಿಂಸೆ ಅನುಭವಿಸಿದೆ ಆದರೆ ಸ್ಥಿಮಿತ ಕಳೆದುಕೊಳ್ಳಲಿಲ್ಲ, ಈಗ ಆರೋಪ ಮುಕ್ತನಾಗಿದ್ದೇನೆ, ತಲೆಯ ಮೇಲಿದ್ದ ದೊಡ್ಡ ಭಾರವೊಂದು ಇಳಿದ ನೆಮ್ಮದಿಯ ಭಾವ ಮೂಡಿದೆ' ಎಂದಿದ್ದಾರೆ ಶಮಿ.

'ಕ್ರಿಕೆಟ್ ಮತ್ತು ದೇಶದ ಬಗೆಗಿನ ನನ್ನ ನಿಷ್ಠೆಯನ್ನೇ ಪ್ರಶ್ನೆ ಮಾಡಲಾಗಿತ್ತು, ಇದು ನನ್ನನ್ನು ಬಹಳವಾಗಿ ಕಾಡಿತು, ನೋವು ತರಿಸಿತು ಎಂದು ಭಾವುಕರಾಗಿ ನುಡಿದಿರುವ ಮೊಹಮ್ಮದ್ ಶಮಿ, ಜೀವ ಇರುವವರೆಗೂ ಆ ರೀತಿಯ ಕಾರ್ಯವನ್ನು ನಾನು ಮಾಡಲಾರೆ' ಎಂದಿದ್ದಾರೆ.

'ಬಿಸಿಸಿಐ ನನ್ನ ಗುತ್ತಿಗೆ ನವೀಕರಿಸಿದ್ದು, ಹೊಸ ಉತ್ಸಾಹದಿಂದ ಅಂಗಳಕ್ಕೆ ಇಳಿಯಲಿದ್ದೇನೆ' ಎಂದು ಶಮಿ ಹೇಳಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆರೋಪ ಬಂದ ಕಾರಣ ಮೊಹಮ್ಮದ್ ಶಮಿ ಅವರ ಗುತ್ತಿಗೆಯನ್ನು ಬಿಸಿಸಿಐ ತಡೆ ಹಿಡಿದಿತ್ತು, ಆರೋಪ ಮುಕ್ತವಾದ ಬಳಿಕ ಬಿಸಿಸಿಐ ಶಮಿ ಅವರಿಗೆ 'ಬಿ' ದರ್ಜೆ ಆಟಗಾರನ ಗುತ್ತಿಗೆ ನೀಡಿದೆ.

ಮೊಹಮ್ಮದ್ ಶಮಿ ಜೂನ್‌ನಲ್ಲಿ ಅಪ್ಘಾನಿಸ್ಥಾನದ ವಿರುದ್ಧ ಟೆಸ್ಟ್ ಪಂದ್ಯ ಆಡಲಿದ್ದು, ಅದಕ್ಕೂ ಮುಂಚೆ ಡೆಲ್ಲಿ ಡೇರ್‌ಡೆವಿಲ್ ವಿರುದ್ಧ ಐಪಿಎಲ್ ಆಡಲಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 23, 2018, 12:07 [IST]
Other articles published on Mar 23, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ