ಐಪಿಎಲ್ ಹರಾಜುದಾರನಾಗಿ ಅನುಭವ ಹಂಚಿಕೊಂಡ ರಿಚರ್ಡ್ ಮ್ಯಾಡ್ಲಿ

By Unnikrishnan G

ಬೆಂಗಳೂರು, ಏಪ್ರಿಲ್ 21: 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಹರಾಜುದಾರನಾಗಿ ರಿಚರ್ಡ್ ಮ್ಯಾಡ್ಲಿ ಐಪಿಎಲ್‌ನ ಭಾಗವಾಗೇ ಇದ್ದರು. ಸತತ 10 ಸೀಸನ್‌ಗಳಲ್ಲಿ ಮ್ಯಾಡ್ಲಿ ಐಪಿಎಲ್ ಅಟಗಾರರ ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಅವರು ಹರಾಜು ನಡೆಸಿಕೊಡುವ ರೀತಿ, ಅವರ ಆಳವಾದ ಧ್ವನಿ, ಸುತ್ತಿಗೆ ಬಡಿಯುವ ವೈಖರಿ ಎಲ್ಲವೂ ಚಂದವಿತ್ತು.

ಭಾರತದ ಬೆಸ್ಟ್ ನಾಯಕ, ವಿಶ್ವದ ಬ್ಯಾಟ್ಸ್‌ಮನ್, ಬೌಲರ್ ಹೆಸರಿಸಿದ ಶ್ರೀಶಾಂತ್ಭಾರತದ ಬೆಸ್ಟ್ ನಾಯಕ, ವಿಶ್ವದ ಬ್ಯಾಟ್ಸ್‌ಮನ್, ಬೌಲರ್ ಹೆಸರಿಸಿದ ಶ್ರೀಶಾಂತ್

2018ರಲ್ಲಿ ಐಪಿಎಲ್ ಹರಾಜುದಾರರಾಗಿ ರಿಚರ್ಡ್ ಮ್ಯಾಡ್ಲಿ ಜಾಗಕ್ಕೆ ಹಗ್ ಎಡ್ಮೀಡ್ಸ್ ಬರುವುದಕ್ಕೂ ಮುನ್ನ ಮ್ಯಾಡ್ಲಿ ಅಷ್ಟರ ಮಟ್ಟಿಗೆ ಐಪಿಎಲ್‌ನಲ್ಲಿ ಚಿರಪರಿಚಿತ ಮುಖವಾಗಿದ್ದರು. ಮ್ಯಾಡ್ಲಿ ಐಪಿಎಲ್ ಹರಾಜುದಾರನಾಗಿ ತನ್ನ ಅನುಭವವನ್ನು ಮೈಖೇಲ್ ಜೊತೆ ಹಂಚಿಕೊಂಡಿದ್ದಾರೆ.

1. ಹರಾಜು ಸಭಾಂಗಣದಲ್ಲಿ ನೀವು ಆಕರ್ಷಕ ಮಾತಿನೊಂದಿಗೆ ಐಪಿಎಲ್ ಹರಾಜಿಗೆ ಒಂದು ಅನನ್ಯತೆಯನ್ನು ತಂದಿದ್ದೀರಿ. 2008ರ ಆವೃತ್ತಿಗೆ ಮುಂಚಿತವಾಗಿ ಹರಾಜುದಾರನಾಗಿ ಐಪಿಎಲ್‌ನೊಂದಿಗಿನ ನಿಮ್ಮ ಒಡನಾಟ ಹೇಗೆ ಪ್ರಾರಂಭವಾಯಿತು?
ಉತ್ತರ: ಐಪಿಎಲ್ ಪರಿಕಲ್ಪನೆಯನ್ನು 2007 ರಲ್ಲಿ ದೂರದೃಷ್ಟಿಯ ಲಲಿತ್ ಮೋದಿ ಮತ್ತು ಅತ್ಯಂತ ಗೌರವಾನ್ವಿತ ಐಎಂಜಿ ಕಾರ್ಯನಿರ್ವಾಹಕ ಆಂಡ್ರ್ಯೂ ವೈಲ್ಡ್ಬ್ಲಡ್ ಅಭಿವೃದ್ಧಿಪಡಿಸಿದರು. ಮೂಲಕ ಪರಿಕಲ್ಪನೆಯ ಮಾತು ಬಂದಿದ್ದು ಕ್ರಿಕೆಟ್‌ನಿಂದಲ್ಲ, ಆ ವರ್ಷ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯಿಂದ. ಮತ್ತೆ ಫ್ರಾಂಚೈಸಿ ಟೂರ್ನಿ ಆರಂಭಿಸಲಾಯಿತು. ಆಟಗಾರರ ಹರಾಜನ್ನು ನಡೆಸಲು ನಿರ್ಧರಿಸಿದಾಗ ನನ್ನ ಹಳೆಯ ಸ್ನೇಹಿತ ಆಂಡ್ರ್ಯೂ ನನ್ನನ್ನು ಸಂಪರ್ಕಿಸಿದರು.

2. ನೀವು ಹರಾಜುದಾರನಾಗಿ ಸರಿಸಾಟಿಯಿಲ್ಲದ ಅನುಭವವನ್ನು ಹೊಂದಿದ್ದೀರಿ, ಆದರೆ 2008 ರಲ್ಲಿ ನಡೆದ ಮೊದಲ ಹರಾಜಿಗೆ ನೀವು ಮುಂದಾಗಿದ್ದೀರಾ?
ಉತ್ತರ: ಹರಾಜು ಆರಂಭಕ್ಕೆ ಮೊದಲು ಸೌರವ್ ಗಂಗೂಲಿ ಅಥವಾ ಸಚಿನ್ ತೆಂಡೂಲ್ಕರ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಲು ಬಂದಾಗ ಸಣ್ಣಮಟ್ಟಿನ ಅಂಜಿಕೆ ಕಾಡುತ್ತಲ್ಲ? ಅಂತದ್ದೇ ಅಂಜಿಕೆ ನನ್ನನ್ನು ಕಾಡಿತ್ತು. ಯಾವುದೇ ದೊಡ್ಡ ಕಾರ್ಯ ಆರಂಭಿಸುವಾಗ ಇಂಥ ಅಂಜಿಕೆ ಸಾಮಾನ್ಯ. ಆದರೆ ಈ ಅಂಜಿಕೆಯನ್ನು ನಾವು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. 2008 ಫೆಬ್ರವರಿ 20ರಂದು ಮುಂಬೈಯ ಒಬೆರಾಯ್ ಹಿಲ್ಟನ್ ಹೋಟೆಲ್‌ನಲ್ಲಿ ಹರಾಜಿಗೂ ಮುನ್ನ ನನ್ನ ಎದೆಬಡಿತ ಕೊಂಚ ಜೋರಿತ್ತು.

3. ಮೊದಲ ಹರಾಜಿಗೆ ಮುಂಚಿತವಾಗಿ ನೀವು ಯಾವುದೇ ವಿಶೇಷ ಸಿದ್ಧತೆಗಳನ್ನು ಮಾಡಿದ್ದೀರಾ?
ಉತ್ತರ: ಉದ್ಘಾಟನಾ ಐಪಿಎಲ್ ಸ್ವಲ್ಪ ಭಯ ಜಾಸ್ತಿಯಿತ್ತು ಮತ್ತು ನಂತರದ ವರ್ಷಗಳಲ್ಲಿ ತಯಾರಿಸಲು ನನಗೆ ಹೆಚ್ಚು ಸಮಯ ಇರಲಿಲ್ಲ. ಹರಾಜಿನಲ್ಲಿ ಕೇವಲ 75 ಆಟಗಾರರಿದ್ದರು - ಅವರಲ್ಲಿ ಹಲವರು ಹೆಸರು ಗೊತ್ತಿದ್ದಿದ್ದೆ. ಹರಾಜಿನ ಹಿಂದಿನ ಸಂಜೆ ನಾನು ತಂಡದ ಮಾಲೀಕರಿಗೆ ಹರಾಜು ಪದವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ವಿವರಿಸಿದೆ - ಏರಿಕೆಗಳು, ಆರಂಭಿಕ ಬಿಡ್‌ಗಳು, ವೇಗ, ಕರೆನ್ಸಿ ಮತ್ತು ಶಿಷ್ಟಾಚಾರಗಳನ್ನು ವಿವರಿಸಿದೆ. ಮರುದಿನ ನಾನು ನಿಯಂತ್ರಣದಲ್ಲಿರುವ ಸಾಧ್ಯತೆಯಿದೆ ಎಂದು ತಿಳಿದಾಗ ಕೆಲವು ಮಾಲೀಕರು ಎಷ್ಟು ಶಕ್ತಿಶಾಲಿ ಎಂದು ನನಗೆ ಅಂದಾಜಾಯಿತು. ಆ ರಾತ್ರಿ ನಾನು ನನಗೆ ಸರಿಯಾಗಿ ನಿದ್ರೆ ಬರಲಿಲ್ಲ.

4. ಕೆಲವು ಭಾರತೀಯ ಹೆಸರುಗಳ ಉಚ್ಚಾರಣೆಯನ್ನು ನೀವು ಹೇಗೆ ಕರಗತ ಮಾಡಿಕೊಂಡಿದ್ದೀರಿ?
ಇಂಗ್ಲಿಷ್ ಮಾತನಾಡುವ ವೆಲ್ಷ್‌ಮನ್‌ನಂತೆ ನನಗೆ ಭಾರತೀಯ ಹೆಸರುಗಳನ್ನು ಉಚ್ಚರಿಸುವ ಅನುಭವ ಕಡಿಮೆ. ಕೆಲವು ನೇರವಾದರೂ - ಇನ್ನು ಕೆಲವು ಹೆಸರುಗಳು ಉದ್ದ ಮತ್ತು ಸಂಕೀರ್ಣವಾಗಿದ್ದರು. ಐಪಿಎಲ್ 1 (2008) ತುಲನಾತ್ಮಕವಾಗಿ ನೇರವಾಗಿತ್ತು ಆದರೆ ಕೆಲವು ಭಾರತೀಯ (ಮತ್ತು ಶ್ರೀಲಂಕಾ) ಹೆಸರುಗಳು ನಂತರದ ಹರಾಜಿನಲ್ಲಿ ಖಂಡಿತವಾಗಿಯೂ ನನ್ನ ನಾಲಿಗೆಯನ್ನು ತಿರುಚಿದವು. ಆದ್ದರಿಂದ ನಾನು ಅವರ ಹೆಸರುಗಳನ್ನು ಹರಾಜಿಗೆ ಮುಂಚಿತವಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದೆ ಮತ್ತು ಐಎಂಜಿ ಅಥವಾ ಬಿಸಿಸಿಐನಲ್ಲಿ ನನ್ನ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಲು ಪ್ರಾರಂಭಿಸಿದೆ.

5. ಪಂದ್ಯಾವಳಿಯೊಂದಿಗಿನ ನಿಮ್ಮ ಒಡನಾಟವು ಇಷ್ಟು ದೀರ್ಘಾವಧಿಯವರೆಗೆ ನಡೆದ ಕಾರಣ, ನೀವು ಈವೆಂಟ್‌ನೊಂದಿಗೆ ರಕ್ತಸಂಬಂಧವನ್ನು ಬೆಳೆಸಿದ್ದೀರಾ - ನೆಚ್ಚಿನ ತಂಡ, ನೆಚ್ಚಿನ ಆಟಗಾರ ಇತ್ಯಾದಿ?
ಉತ್ತರ: ನಾನು ಮೊದಲ ಹರಾಜನ್ನು ನಡೆಸಿದಾಗ, ಬಾಲಿವುಡ್ ಜಗತ್ತಿನಲ್ಲಿ ಶಾರುಖ್ ಖಾನ್ ಎಷ್ಟು ಮಹತ್ವದ್ದಾಗಿದ್ದಾನೆ ಮತ್ತು ಅವರ ಉಪಸ್ಥಿತಿಯು ಹರಾಜಿನಲ್ಲಿ ಆಕರ್ಷಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನಗೆ ಶಿಲ್ಪಾ ಶೆಟ್ಟಿ ಬಗ್ಗೆ ತಿಳಿದಿತ್ತು ಆದರೆ ಪ್ರೀತಿ ಜಿಂಟಾ ಮತ್ತು ಹರಾಜಿನ ಶೈಲಿ, ಗ್ಲಾಮರ್ ಮತ್ತು ಪ್ರದರ್ಶನದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಾನು ಹರಾಜಿನಲ್ಲಿ ಮಾಲೀಕರನ್ನು ಭೇಟಿಯಾಗಬೇಕಾಯಿತು ಮತ್ತು ಅವರಲ್ಲಿ ಅನೇಕರೊಂದಿಗೆ ವ್ಯವಹಾರದಂತಹ ಸ್ನೇಹವನ್ನು ಬೆಳೆಸಿದೆ.

6. ಐಪಿಎಲ್ ಹರಾಜುದಾರನಾಗಿ ಅಥವಾ ಇನ್ನಾವುದೇ ರೂಪದಲ್ಲಿ ಎರಡನೇ ಇನ್ನಿಂಗ್ಸ್ ಮಾಡಲು ನೀವು ಬಯಸುವಿರಾ?
ಉತ್ತರ: ನಾನು ಸತತ 10 ಐಪಿಎಲ್ ಹರಾಜನ್ನು ಯಶಸ್ವಿಯಾಗಿ ನಡೆಸಿದ್ದೇನೆ- ಈ ದಾಖಲೆ ಮುರಿಯಲು ಎಂದಿಗೂ ಸಾಧ್ಯತೆಯಿಲ್ಲ. ಆ ಸಮಯದಲ್ಲಿ ನಾನು ಸಾಧಿಸಿದ ಸಾಧನೆ ಮತ್ತು ನಾನು ಸ್ಥಾಪಿಸಿದ ಖ್ಯಾತಿಯ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನನ್ನು ಇನ್ನೂ ಐಪಿಎಲ್ ಹರಾಜುಗಾರ ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ. ಐಪಿಎಲ್ ಮರಳಲು ನಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಇರುತ್ತೇನೆ, ಮುಂದಿನ ಪೀಳಿಗೆಯ ಐಪಿಎಲ್ ಹರಾಜುದಾರರಿಗೆ ತರಬೇತಿ ನೀಡಲು ನಾನು ಅಷ್ಟೇ ಸಂತೋಷಪಡುತ್ತೇನೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 21, 2020, 16:27 [IST]
Other articles published on Apr 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X