ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಮಿ ಸೇವೆಯಲ್ಲಿರುವ ಧೋನಿಗೆ ರಕ್ಷಣೆ: ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ!

ಧೋನಿಗೆ ರಕ್ಷಣೆ ಕೊಡುವ ಅವಶ್ಯಕತೆ ಇಲ್ಲ..? | MS Dhoni | Oneindia Kannada
MS Dhoni doesn’t need to be protected, says Indian Army chief Bipin Rawat

ನವದೆಹಲಿ, ಜುಲೈ 26: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಭಾರತೀಯ ಸೇನೆಯ ಪರ ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಸದ್ಯ ಸೇನಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವ ಧೋನಿಗೆ ಕರ್ತವ್ಯದ ವೇಳೆಯೂ ರಕ್ಷಣೆಯ ಅಗತ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!

ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯನ್ನು ಕೈ ಬಿಟ್ಟು ಧೋನಿ, 2 ತಿಂಗಳ ಕಾಲ ಆರ್ಮಿ ಸೇವೆಯಲ್ಲಿ ತೊಡಗಿಕೊಳ್ಳುವ ನಿರ್ಧಾರ ತಾಳಿದ್ದರು. ಸೇವೆ ಸಲ್ಲಿಸಲು ಧೋನಿಗೆ ಸೇನಾ ಮೂಖ್ಯ ಕಚೇರಿಯಿಂದ ಅನುಮತಿಯೂ ಲಭಿಸಿದೆ. ಜುಲೈ 31ರಿಂದ ಆಗಸ್ಟ್ 15ರ ವರೆಗೆ ಧೋನಿ ಕರ್ತವ್ಯದಲ್ಲಿ ತೊಡಗಲಿದ್ದಾರೆ.

ಗ್ಲೋಬಲ್ ಟಿ20: ಔಟಾಗದೆಯೂ ಮೈದಾನದಿಂದ ನಡೆದ ಯುವಿ-ವಿಡಿಯೋಗ್ಲೋಬಲ್ ಟಿ20: ಔಟಾಗದೆಯೂ ಮೈದಾನದಿಂದ ನಡೆದ ಯುವಿ-ವಿಡಿಯೋ

ಆದರೆ ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ಸೇನಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವ ಧೋನಿಗೆ ಮುನ್ನೆಚ್ಚರಿಕೆಯಾಗಿ ರಕ್ಷಣೆ ಒದಗಿಸಲಾಗಿತ್ತು. ಈ ಬಗ್ಗೆ ಜನರಲ್ ಬಿಪಿನ್ ರಾವತ್ ಪ್ರತಿಕ್ರಿಯಿಸಿದ್ದಾರೆ.

ಧೋನಿಗೆ ರಕ್ಷಣೆ ಬೇಕಿಲ್ಲ

ಧೋನಿಗೆ ರಕ್ಷಣೆ ಬೇಕಿಲ್ಲ

'ಜನರನ್ನು ರಕ್ಷಿಸುವ, ನಾಡನ್ನು ಕಾಯುವ ಜವಾಬ್ದಾರಿ ಧೋನಿಗೆ ನೀಡಿರುವುದರಿಂದ ಅವರಿಗೇ ರಕ್ಷಣೆ ನೀಡಬೇಕಾದ ಅಗತ್ಯವಿದೆ ಅಂತ ನನಗನ್ನಿಸುತ್ತಿಲ್ಲ,' ಎಂದು ಎನ್‌ಡಿಟಿವಿ ಜೊತೆ ಮಾತನಾಡುತ್ತ ಜನರಲ್ ರಾವತ್ ಹೇಳಿಕೊಂಡಿದ್ದಾರೆ. ಧೋನಿಯವರು ಸೇನಾ ಅಭ್ಯಾಸಕ್ಕಾಗಿ ಓಡಾಡುವಾಗ ಅವರ ಜೊತೆ ಇನ್ನಿತರ ಜವಾನರು ರಕ್ಷಣಾ ನಿಟ್ಟಿನಲ್ಲಿ ಕಾಣಿಸಿದ್ದರು. ಇದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗಿತ್ತು.

ವಿಂಡೀಸ್ ಪ್ರವಾಸ ಸರಣಿಗಿಲ್ಲ

ವಿಂಡೀಸ್ ಪ್ರವಾಸ ಸರಣಿಗಿಲ್ಲ

38ರ ಹರೆಯದ ಧೋನಿ ಭಾರತೀಯ ಸೇನೆಯಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಟೆರಿಟೊರಿಯಲ್ ಆರ್ಮಿ ಯುನಿಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಬಿಸಿಸಿಐ ತಂಡಗಳನ್ನು ಪ್ರಕಟಿಸುವ ಮುನ್ನವೇ ಧೋನಿ, ತಾನು ಪ್ರವಾಸ ಸರಣಿಗೆ ಬದಲಾಗಿ ಸೇನಾ ಸೇವೆಯಲ್ಲಿ ತೊಡಗುವ ನಿರ್ಧಾರ ಪ್ರಕಟಿಸಿದ್ದರು.

ಧೋನಿ ಸಮರ್ಥರಿದ್ದಾರೆ

ಧೋನಿ ಸಮರ್ಥರಿದ್ದಾರೆ

'ಭಾರತೀಯ ಸೇನಾ ಸಮವಸ್ತ್ರ ಧರಿಸಬೇಕು ಅಂತ ಬಯಸುವ ಪ್ರತಿಯೊಬ್ಬನೂ ಆಯಾ ಯೂನಿಫಾರ್ಮ್‌ಗೆ ವಹಿಸಿಕೊಟ್ಟ ಕೆಲಸವನ್ನು ಪೂರೈಸಲು ತಯಾರಾಗಿಯೇ ಇರುತ್ತಾರೆ. ಧೋನಿ ಈಗಾಗಲೇ ಅವರ ಮೂಲ ತರಬೇತಿ ಮುಗಿಸಿದ್ದಾರೆ. ಅವರಿಗೆ ವಹಿಸಿಕೊಟ್ಟ ಕೆಲಸ ನಿರ್ವಹಿಸಲು ಅವರು ಅಮರ್ಥರಿದ್ದಾರೆ ಎಂಬುದು ನಮಗೆ ಗೊತ್ತಿದೆ,' ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಧೋನಿಯದ್ದು ಅದ್ಭುತ ನಿಲುವು

ಧೋನಿಯದ್ದು ಅದ್ಭುತ ನಿಲುವು

'ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ನಿರ್ಧರಿಸಿದ ಧೋನಿಯದ್ದು ಅದ್ಭುತ ನಿಲುವು. ಸೇನಾ ಸಮವಸ್ತ್ರ ಧರಿಸಲು ಬಯಸೋದಾದ್ರೆ ಧೋನಿ ಸೇನೆಯಲ್ಲಿ ಸಮಯ ಕಳೆಯಬೇಕು ಎಂದು ಈ ಹಿಂದೆ ನಾನು ಸಾಕಷ್ಟು ಬಾರಿ ಹೇಳಿದ್ದೆ. ಧೋನಿ ಈಗ ಸೇನೆಗೆ ಸೇವೆ ಸಲ್ಲಿಸಲು ಮುಂದಾಗಿರುವುದು ಅವರ ಬದ್ಧತೆಗೆ ಸಾಕ್ಷಿ ಹೇಳುತ್ತಿದೆ' ಎಂದು ಎಬಿಪಿ ನ್ಯೂಸ್‌ ಜೊತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.

Story first published: Friday, July 26, 2019, 18:42 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X