ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಬೀಸದಿದ್ದರೆ ಬ್ಯಾಟು, ಮುಂದಿನ ವಿಶ್ವಕಪ್‌ನಲ್ಲಿ ಆಡುವುದು ಡೌಟು

MS Dhoni must perform well in Asia cup

ಬೆಂಗಳೂರು, ಸೆಪ್ಟೆಂಬರ್ 17: ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಮಹೇಂದ್ರ ಸಿಂಗ್ ಧೋನಿ ಮುಂದಿನ ವಿಶ್ವಕಪ್‌ನಲ್ಲಿ ಭಾರತದ ಪರ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಪ್ರಾರಂಭವಾಗಿದೆ.

ಗೇಮ್ ಫಿನಿಷರ್ ಎನಿಸಿಕೊಂಡಿದ್ದ ಧೋನಿ ಅವರ ಇತ್ತೀಚಿನ ಕಳಪೆ ಫಾರ್ಮ್‌ ಈ ಚಿಂತೆಗೆ ಮೂಲ ಕಾರಣ ಅವರು ಉತ್ತಮ ಇನ್ನಿಂಗ್ಸ್‌ ಒಂದನ್ನು ಕಟ್ಟಿ ಬಹುತೇಕ ವರ್ಷವೇ ಆಯಿತೇನೋ.

ಏಷ್ಯಾಕಪ್‌ನಲ್ಲಿ ಎಂಎಸ್‌ ಧೋನಿಯೇ ಕಿಂಗ್, ಅಂಕಿ-ಅಂಶ ನೋಡಿ ಏಷ್ಯಾಕಪ್‌ನಲ್ಲಿ ಎಂಎಸ್‌ ಧೋನಿಯೇ ಕಿಂಗ್, ಅಂಕಿ-ಅಂಶ ನೋಡಿ

ಆದರೆ ಈಗ ಮತ್ತೊಂದು ಸುವರ್ಣಾವಕಾಶ ಧೋನಿ ಅವರನ್ನು ಹುಡುಕಿಕೊಂಡು ಬಂದಿದೆ. ಏಷ್ಯಾಕಪ್‌ನಲ್ಲಿ ಧೋನಿ ಆಡುತ್ತಿದ್ದಾರೆ. ಇಲ್ಲಿ ಉತ್ತಮವಾಗಿ ಆಡಿದಲ್ಲಿ ಧೋನಿ ಅವರಿಗೆ ವಿಶ್ವಕಪ್ ನ ಟಿಕೆಟ್ ಸಿಗಲಿದೆ. ಕಳಪೆ ಫಾರ್ಮ್‌ ಮುಂದುವರೆದರೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಲ್ಲಿ ಧೋನಿ ಮನೆಯಿಂದ ಪಂದ್ಯ ನೋಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

9 ಪಂದ್ಯದಲ್ಲಿ 148 ರನ್ ಗಳಿಸಿದ್ದಾರೆ

9 ಪಂದ್ಯದಲ್ಲಿ 148 ರನ್ ಗಳಿಸಿದ್ದಾರೆ

ಧೋನಿ ಈ ವರ್ಷ ಆಡಿರುವ 9 ಪಂದ್ಯಗಳಲ್ಲಿ ಗಳಿಸಿರುವುದು 148 ರನ್ ಮಾತ್ರ. ಅದರಲ್ಲಿ ಒಂದೇ ಒಂದು ಅರ್ಧ ಶತಕವೂ ಇಲ್ಲ. ಕೆಲವು ವರ್ಷಗಳ ಹಿಂದೆ ಯಾರ್ಕರ್‌ ಬಾಲನ್ನೂ ಹೆಲಿಕಾಪ್ಟರ್ ಶಾಟ್ ಮೂಲಕ ಅನಾಯಾಸವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದ ಧೋನಿಯ ಬ್ಯಾಟು ಇತ್ತೀಚೆಗೆ ರನ್‌ಗಳ ಕೊರತೆಯಿಂದ ಬಡವಾಗಿದೆ.

ಏಷ್ಯಾಕಪ್‌ನಲ್ಲಿ ಧೋನಿ ಉತ್ತಮ ಸರಾಸರಿ

ಏಷ್ಯಾಕಪ್‌ನಲ್ಲಿ ಧೋನಿ ಉತ್ತಮ ಸರಾಸರಿ

ಆದರೆ ಏಷ್ಯಾಕಪ್‌ನಲ್ಲಿ ಧೋನಿ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. ಇಲ್ಲಿ ಅವರ ಸರಾಸರಿ ಬರೋಬ್ಬರಿ 95.16 ಇದೆ. ಹಾಗಾಗಿ ಏಷ್ಯಾಕಪ್‌ನಲ್ಲಿ ಧೋನಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂಬ ವಿಶ್ವಾಸವಿದೆ. ಧೋನಿ ಸ್ಟ್ರೈಕ್ ರೇಟ್ 215 ಕ್ಕೂ ಹೆಚ್ಚಿದೆ ಏಷ್ಯಾಕಪ್‌ನಲ್ಲಿ. ಹಾಗಾಗಿ ಈ ಸರಣಿಯಲ್ಲಿ ಧೋನಿ ಉತ್ತಮವಾಗಿ ಆಡುವ ವಿಶ್ವಾಸ ಅವರ ಅಭಿಮಾನಿಗಳದ್ದು.

ಕ್ರಿಕೆಟ್ : ಏಷ್ಯಾಕಪ್ ಇತಿಹಾಸ 1984ರಿಂದ ಇಲ್ಲಿತನಕದ ವಿಜೇತರು

ಎಚ್ಚರಿಕೆ ಕೊಟ್ಟಿರುವ ಬಿಸಿಸಿಐ

ಎಚ್ಚರಿಕೆ ಕೊಟ್ಟಿರುವ ಬಿಸಿಸಿಐ

ಈಗಾಗಲೇ ಬಿಸಿಸಿಐ ಹಿರಿಯ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಉತ್ತಮವಾಗಿ ಆಡದಿದ್ದರೆ ಸ್ಥಾನ ಕಳೆದುಬೇಕಾಗುತ್ತದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್ ಹೇಳಿದ್ದಾರೆ. ಧೋನಿ ಸೇರಿದಂತೆ ಶಿಖರ್ ಧವನ್ ಅವರಿಗೂ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.

ರಿಷಬ್ ಪಂತ್ ತುಂಬಲಿದ್ದಾರೆ ಸ್ಥಾನ?

ರಿಷಬ್ ಪಂತ್ ತುಂಬಲಿದ್ದಾರೆ ಸ್ಥಾನ?

ಧೋನಿ ಅವರಿಗೆ ಈಗಾಗಲೇ ಟೀಕಾಕಾರರು ಮುಗಿಬಿದಿದ್ದಾರೆ. ಯುವ ಕೀಪರ್ ಕಮ್ ಬ್ಯಾಟ್ಸ್‌ಮನ್ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನ ಟೀಕಾಕಾರರಿಗೆ ಇಂಬು ನೀಡಿದೆ. ಧೋನಿ ಬದಲಿಗೆ ಯುವ ಆಟಗಾರ ರಿಷಬ್ ಪಂತ್‌ಗೆ ಅವಕಾಶ ನೀಡಬೇಕು ಎಂದು ಈಗಾಗಲೇ ಒತ್ತಾಯಗಳು ಕೇಳಿಬರುತ್ತಿವೆ.

ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು

ಧೋನಿಗೆ ವಯಸ್ಸಾಯ್ತಾ?

ಧೋನಿಗೆ ವಯಸ್ಸಾಯ್ತಾ?

ಧೋನಿ ಅವರು ಮುಂಚಿನಂತೆ ನೆಟ್ಸ್‌ನಲ್ಲಿ ಹೆಚ್ಚು ಶ್ರಮ ವಹಿಸುತ್ತಿಲ್ಲ ಎಂಬ ಸುದ್ದಿಯೂ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. 37 ವರ್ಷ ವಯಸ್ಸಿನ ಧೋನಿ ಅವರಿಗೆ ಆಟದಲ್ಲಿ ಮುಂಚಿನ ಚುರುಕು ಕಡಿಮೆಯಾಗಿದೆ ಎಂಬುದು ನಿಜವಾದರೂ ಅವರ ಗೇಮ್‌ ಪ್ಲಾನ್‌ಗೆ ಈಗಲೂ ಯಾರೂ ಸಾಟಿ ನಿಲ್ಲರಾರರು. ಅವರಿಂದ ಬೌಲರ್‌ಗಳು, ನಾಯಕರು ಪಂದ್ಯದ ಎಲ್ಲ ಹಂತಗಳಲ್ಲೂ ಸಲಹೆ ಪಡೆಯುತ್ತಲೇ ಇರುತ್ತಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಗೆದ್ದಿರುವುದೆಷ್ಟು, ಸೋತಿರುದೆಷ್ಟು?

Story first published: Monday, September 17, 2018, 16:11 [IST]
Other articles published on Sep 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X