ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ವಿಕೆಟ್ ಕೀಪಿಂಗ್‌ ಬಗ್ಗೆ ಕಾಮೆಂಟ್ ಮಾಡಿದ ಎಂಎಸ್‌ಕೆ ಪ್ರಸಾದ್

ಎಂಎಸ್ ಧೋನಿ ವಿಕೆಟ್ ಕೀಪಿಂಗ್‌ ಬಗ್ಗೆ ಕಾಮೆಂಟ್ ಮಾಡಿದ ಎಂಎಸ್‌ಕೆ ಪ್ರಸಾದ್ | Oneindia Kannada
MS Dhoni still the best keeper, others work-in-progress: MSK Prasad

ನವದೆಹಲಿ, ಆಗಸ್ಟ್ 1: ಬಹುಶಃ ಎಂಎಸ್ ಧೋನಿ ಅವರು ಕ್ರಿಕೆಟ್ ವೃತ್ತಿ ಜೀವನದ ಕೊನೇ ಘಟ್ಟದಲ್ಲಿದ್ದಾರೆ. ಆದರೆ ಈ ಸೀಸನ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಧೋನಿ ಇಂದಿಗೂ ದೇಶದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾ

ವಿಶ್ವಕಪ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಬಿಸಿಸಿಐ ತಂಡಗಳನ್ನು ಪ್ರಕಟಿಸುವುದಕ್ಕೂ ಮುನ್ನ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಶುರುವಾಗಿದ್ದವು. ಧೋನಿ ಬದಲು ರಿಷಬ್ ಪಂತ್‌ಗೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅವಕಾಶ ಲಭಿಸಿದ್ದರೆ ಭವಿಷ್ಯದ ದಿನಗಳಲ್ಲಿ ತಂಡಕ್ಕೆ ಇನ್ನೊಬ್ಬ ಉತ್ತಮ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್‌ನ ಉದಯಕ್ಕೆ ಅನುಕೂಲವಾಗುತ್ತಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ರಿಷಬ್ ಪಂತ್ ಐಪಿಎಲ್ ರನ್ನಿಗೂ ಟಿ20ಐ ಸ್ಕೋರಿಗೂ ಅಜಗಜಾಂತರ ವ್ಯತ್ಯಾಸ!ರಿಷಬ್ ಪಂತ್ ಐಪಿಎಲ್ ರನ್ನಿಗೂ ಟಿ20ಐ ಸ್ಕೋರಿಗೂ ಅಜಗಜಾಂತರ ವ್ಯತ್ಯಾಸ!

ಅದರಂತೆ ಧೋನಿ ವಿಂಡೀಸ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರವಾಸ ಸರಣಿಯಿಂದ ಹೊರಗುಳಿಯುವ ನಿರ್ಧಾರವನ್ನು ಸ್ವತಃ ಧೋನಿಯೇ ಪ್ರಕಟಿಸಿದ್ದರು. ಆದರೆ ಧೋನಿ ತಂಡದಲ್ಲಿದ್ದರೆ ಏನೆಲ್ಲ ಅನುಕೂಲ ಅನ್ನೋದನ್ನು ಎಂಎಸ್‌ಕೆ ವಿವರಿಸಿದ್ದಾರೆ.

ಪಂತ್‌ಗೆ ಕೀಪಿಂಗ್ ಜವಾಬ್ದಾರಿ

ಪಂತ್‌ಗೆ ಕೀಪಿಂಗ್ ಜವಾಬ್ದಾರಿ

ಕ್ರಿಕೆಟ್‌ ವಲಯದಲ್ಲಿ ಧೋನಿ ಬಗ್ಗೆ ನಿರ್ಲಕ್ಷ್ಯದ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಧೋನಿಯೂ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ವಿಂಡೀಸ್ ಸರಣಿಗೆ ಬದಲಾಗಿ ಭಾರತೀಯ ಆರ್ಮಿಯಲ್ಲಿ 2 ತಿಂಗಳ ಕಾಲ ಸೇವೆ ಸಲ್ಲಿಸುವುದಾಗಿ ಕೂಲ್ ಕ್ಯಾಪ್ಟನ್ ತಿಳಿಸಿದ್ದರು. ವಿಂಡೀಸ್ ಸರಣಿಯ ಏಕದಿನ ಮತ್ತು ಟಿ20 ಎರಡಕ್ಕೂ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದೆ.

ಧೋನಿ ಶ್ಲಾಘಿಸಲ್ಪಡುತ್ತಿದ್ದರು

ಧೋನಿ ಶ್ಲಾಘಿಸಲ್ಪಡುತ್ತಿದ್ದರು

ಪಿಟಿಐ ಸಂದರ್ಶನವೊಂದರಲ್ಲಿ ಮಾತನಾಡಿದ ಎಂಎಸ್‌ಕೆ ಪ್ರಸಾದ್, 'ಟಾಪ್ ಆರ್ಡರ್ ಬ್ಯಾಟ್ಸ್ಮನ್‌ಗಳು ವಿಫಲಗೊಂಡ ಬಳಿಕವೂ ನಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದಿದ್ದರೆ, ಜಡೇಜಾ ಮತ್ತು ಧೋನಿಯ ಬ್ಯಾಟಿಂಗ್, ಸದಾ ನೆನಪಿನಲಲ್ಲಿ ಉಳಿಯುವ ಬ್ಯಾಟಿಂಗ್ ಆಗಿ ಶ್ಲಾಘಿಸಲ್ಪಡುತ್ತಿತ್ತು,' ಎಂದು ಎಂಎಸ್‌ಕೆ ಹೇಳಿದ್ದಾರೆ.

ಈಗಲೂ ಅತ್ಯುತ್ತಮ ಗ್ಲೌಸ್‌ಮೆನ್

ಈಗಲೂ ಅತ್ಯುತ್ತಮ ಗ್ಲೌಸ್‌ಮೆನ್

'ಚುಟುಕು ಕ್ರಿಕೆಟ್ ಮಾದರಿಯಲ್ಲಿ ಎಂಎಸ್ ಧೋನಿ ಈಗಲೂ ಅತ್ಯುತ್ತಮ ಗ್ಲೌಸ್‌ಮೆನ್‌ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಇನ್ನುಳಿದವರು ಅದರತ್ತ ಮುಂದುವರೆಯುತ್ತಿದ್ದಾರಷ್ಟೆ. ವಿಶ್ವಕಪ್‌ನಲ್ಲಿ ಎಂಎಸ್ ಅವರು ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಎರಡೂ ರೀತಿಯಲ್ಲೂ ಭಾರತ ತಂಡದ ಶಕ್ತಿಯಾಗಬಲ್ಲರು,' ಎಂದು ಪ್ರಸಾದ್ ಹೇಳಿದ್ದಾರೆ.

ನಾಯಕನಿಗೆ ನೆರವು

ನಾಯಕನಿಗೆ ನೆರವು

ಇಷ್ಟೇ ಅಲ್ಲದೆ ಮೈದಾನದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಧೋನಿ ತನ್ನ ಅನುಭವಗಳ ಮೂಲಕ ನಾಯಕನಿಗೆ ನೆರವಾಗುತ್ತಲೂ ಇದ್ದಾರೆ,' ಎಂದು ಎಂಎಸ್‌ಕೆ ಪ್ರಸಾದ್ ವಿವರಿಸಿದ್ದಾರೆ. ಧೋನಿ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗಿದ್ದು, ಭಾರತೀಯ ಸೇನೆಯ ಪರ ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 15ರ ವರೆಗೂ ಧೋನಿ ಈ ಕರ್ತವ್ಯದಲ್ಲಿ ಮುಂದುವರೆಯಲಿದ್ದಾರೆ.

Story first published: Thursday, August 1, 2019, 11:13 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X