ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ Rankingನಲ್ಲಿ ಮೇಲಕ್ಕೇರಿದ ಟೀಮ್ ಇಂಡಿಯಾ, ಎಂಎಸ್ ಧೋನಿ

ಏಕದಿನ ರ್ಯಾಂಕಿಂಗ್ ನಲ್ಲಿ ಮೇಲಕ್ಕೇರಿದ ಟೀಮ್ ಇಂಡಿಯಾ, ಎಂಎಸ್ ಧೋನಿ | Oneindia Kannada
MS Dhoni, Team India rise in latest ICC ODI rankings

ನವದೆಹಲಿ, ಫೆಬ್ರವರಿ 4: ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಸೋಮವಾರ (ಫೆಬ್ರವರಿ 4) ಐಸಿಸಿಯು ಏಕದಿನ ನೂತನ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಪುರುಷರ ತಂಡ ಮತ್ತು ಮಹೇಂದ್ರ ಸಿಂಗ್ ಧೋನಿ ಜಿಗಿತ ಕಂಡಿದ್ದಾರೆ.

ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!

ನೂತನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಆವರಿಸಿಕೊಂಡಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಎರರೂ ಸರಣಿಯಲ್ಲೂ ಉತ್ತಮ ಸಾಧನೆ ತೋರಿದ್ದ ಭಾರತದ ಮಾಜಿ ನಾಯಕ ಧೋನಿ ಮೂರು ಸ್ಥಾನಗಳ ಜಿಗಿತ ಕಂಡಿದ್ದಾರೆ. ಧೋನಿಯೀಗ 17ನೇ ಸ್ಥಾನದಲ್ಲಿದ್ದಾರೆ.

ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ನ್ಯೂಜಿಲ್ಯಾಂಡ್-ಭಾರತ ಏಕದಿನ ಸರಣಿಯಲ್ಲಿ ಒಟ್ಟು 12 ವಿಕೆಟ್‌ಗಳ ಸಾಧನೆ ತೋರಿದ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ 3ನೇ ಸ್ಥಾನಕ್ಕೇರಿದ್ದಾರೆ.

ಏಕದಿನ ಬ್ಯಾಟಿಂಗ್‌ ನಲ್ಲಿ ಕೊಹ್ಲಿ, ರೋಹಿತ್ ಶರ್ಮಾ, ರಾಸ್ ಟೇಲರ್ (ನ್ಯೂಜಿಲ್ಯಾಂಡ್), ಜೋ ರೂಟ್ (ಇಂಗ್ಲೆಂಡ್), ಬಾಬರ್ ಅಝಾಮ್ (ಪಾಕಿಸ್ತಾನ) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ರಶೀದ್ ಖಾನ್ (ಅಫ್ಘಾನಿಸ್ತಾನ), ಟ್ರೆಂಟ್ ಬೌಲ್ಟ್ (ಕಿವೀಸ್), ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಮೊದಲ ಐದು ಶ್ರೇಯಾಂಕಗಳಲ್ಲಿದ್ದಾರೆ.

ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್!ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್!

ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ 4-1ರ ಸೋಲನುಭವಿಸಿದ ನ್ಯೂಜಿಲ್ಯಾಂಡ್ ತಂಡ ಪ್ರಸ್ತುತ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್, ಭಾರತ, ಸೌತ್ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಏಕದಿನದಲ್ಲಿ ಅಗ್ರ 5ರೊಳಗೆ ಸ್ಥಾನ ಪಡೆದುಕೊಂಡಿವೆ.

Story first published: Monday, February 4, 2019, 17:21 [IST]
Other articles published on Feb 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X