'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ

ಎಂಎಸ್ ಧೋನಿ 'ಕ್ಯಾಪ್ಟನ್ ಕೂಲ್' ಎಂದೇ ಹೆಸರು ಮಾಡಿರುವಂತಹ ಕ್ರಿಕೆಟ್ ಇತಿಹಾಸ ಕಂಡ ಅತ್ಯದ್ಭುತ ನಾಯಕ. ತನ್ನ ತಂಡದ ಆಟಗಾರರನ್ನು ಸರಿಯಾಗಿ ನಿಭಾಯಿಸುತ್ತಿದ್ದದ್ದೂ ಕೂಡ ಧೋನಿ ಯಶಸ್ವಿ ನಾಯಕತ್ವದ ಹಿಂದಿನ ಒಂದು ಪ್ರಮುಖ ಕಾರಣ ಎಂದೇ ಹೇಳಬಹುದು. ಇದೀಗ ರಾಬಿನ್ ಉತ್ತಪ್ಪ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಎಂಎಸ್ ಧೋನಿ ಮತ್ತು ಶ್ರೀಶಾಂತ್ ನಡುವೆ ಮೈದಾನದಲ್ಲಿ ನಡೆದಿದ್ದ ಒಂದು ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವು

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ತಂಡವನ್ನು ಯಾರಿಗೆ ತಾನೆ ಮರೆಯಲು ಸಾಧ್ಯ ಹೇಳಿ. ಆ ತಂಡದಲ್ಲಿ ಎಂಎಸ್ ಧೋನಿ, ಶ್ರೀಶಾಂತ್ ಹಾಗೂ ರಾಬಿನ್ ಉತ್ತಪ್ಪ ಕೂಡ ಭಾಗಿಯಾಗಿದ್ದರು. ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಆಯೋಜಿಸಲಾಗಿತ್ತು, ಹೀಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದು ಹೈದರಾಬಾದ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಶ್ರೀಶಾಂತ್ ಬೌಲಿಂಗ್ ಮಾಡುವ ವೇಳೆ ಮಂಕಡ್ ರನ್ಔಟ್ ಮಾಡಲು ಯತ್ನಿಸಿದ್ದನ್ನು ರಾಬಿನ್ ಉತ್ತಪ್ಪ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿಯೇ ಎಂಎಸ್ ಧೋನಿ ಹಾಗೂ ಶ್ರೀಶಾಂತ್ ನಡುವೆ ನಡೆದ ಒಂದು ಹಾಸ್ಯಾಸ್ಪದ ಘಟನೆಯನ್ನು ರಾಬಿನ್ ಉತ್ತಪ್ಪ ಬಿಚ್ಚಿಟ್ಟಿದ್ದಾರೆ.

ಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಎಂದ ಕೂಡಲೇ ನೆರವಿಗೆ ಧಾವಿಸಿದ ಕೊಹ್ಲಿ

ಶ್ರೀಶಾಂತ್ ಮತ್ತು ಎಂಎಸ್ ಧೋನಿ ನಡುವೆ ನಡೆದಿದ್ದ ಘಟನೆ ಬಗ್ಗೆ ರಾಬಿನ್ ಉತ್ತಪ್ಪ ಹಂಚಿಕೊಂಡ ವಿಷಯಗಳು ಈ ಕೆಳಕಂಡಂತಿವೆ.

1. ಶ್ರೀಶಾಂತ್ ಮಂಕಡ್ ರನ್ಔಟ್‌ಗೆ ಯತ್ನಿಸಿದ್ದರು

1. ಶ್ರೀಶಾಂತ್ ಮಂಕಡ್ ರನ್ಔಟ್‌ಗೆ ಯತ್ನಿಸಿದ್ದರು

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ಶ್ರೀಶಾಂತ್ ಬೌಲಿಂಗ್ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿ ಆ್ಯಂಡ್ರೂ ಸೈಮಂಡ್ಸ್ ಅಥವಾ ಮೈಕ್ ಹಸ್ಸಿ ಇದ್ದರು ಎನಿಸುತ್ತದೆ. ಹೀಗೆ ಶ್ರೀಶಾಂತ್ ಬೌಲಿಂಗ್ ಮಾಡುವ ಸಮಯದಲ್ಲಿ ಮಂಕಡ್ ರನ್ಔಟ್ ಮಾಡಲು ಯತ್ನಿಸಿ ಅಂಪೈರ್ ಬಳಿ ಔಟ್ ಮನವಿಯನ್ನು ಮಾಡಿದ್ದರು ಎಂದು ಉತ್ತಪ್ಪ ಹೇಳಿದ್ದಾರೆ.

2. ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು ಎಂದಿದ್ದ ಧೋನಿ

2. ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು ಎಂದಿದ್ದ ಧೋನಿ

ಶ್ರೀಶಾಂತ್ ಈ ರೀತಿ ಮಂಕಡ್ ರನ್ಔಟ್ ಮನವಿಯನ್ನು ಮಾಡಿದ ಕೂಡಲೇ ಧಾವಿಸಿದ ಎಂಎಸ್ ಧೋನಿ ಕೋಪಿಷ್ಟ ಶ್ರೀಶಾಂತ್ ಅವರನ್ನು ಸಮಾಧಾನ ಮಾಡಿ ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು ಎಂದು ಕಳುಹಿಸಿದ್ದರು, ತದನಂತರ ಯಾರ ಮಾತನ್ನು ಕೇಳದ ಶ್ರೀಶಾಂತ್ ಧೋನಿ ಮಾತನ್ನು ಕೇಳಿ ಸಹಜ ಸ್ಥಿತಿಗೆ ಮರಳಿ ಬೌಲಿಂಗ್ ಮಾಡಿದ್ದರು ಎಂದು ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ.

3. ಶ್ರೀಶಾಂತ್ ಕೋಪವನ್ನು ನಿಭಾಯಿಸುವುದು ಧೋನಿಯಿಂದ ಮಾತ್ರ ಸಾಧ್ಯ

3. ಶ್ರೀಶಾಂತ್ ಕೋಪವನ್ನು ನಿಭಾಯಿಸುವುದು ಧೋನಿಯಿಂದ ಮಾತ್ರ ಸಾಧ್ಯ

ಶ್ರೀಶಾಂತ್ ಮೈದಾನದಲ್ಲಿ ಎಷ್ಟರಮಟ್ಟಿಗೆ ಕೋಪಿಷ್ಠ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಶ್ರೀಶಾಂತ್ ಕೋಪವನ್ನು ಯಾರಿಂದಲೂ ಸಹ ತಡೆಯಲಾಗುತ್ತಿರಲಿಲ್ಲ, ಆದರೆ ಶ್ರೀಶಾಂತ್ ಅವರನ್ನು ಸಮಾಧಾನ ಮಾಡುವ ಸಾಮರ್ಥ್ಯ ಇದ್ದದ್ದು ಎಂಎಸ್ ಧೋನಿಗೆ ಮಾತ್ರ ಎಂದು ರಾಬಿನ್ ಉತ್ತಪ್ಪ ಹಳೆಯ ದಿನಗಳನ್ನು ನೆನೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 20, 2021, 9:03 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X