ಐಪಿಎಲ್: ಮುಂಬೈ ಇಂಡಿಯನ್ಸ್ ತೊರೆದ ಜಾಂಟಿ ರೋಡ್ಸ್

Posted By:

ಮುಂಬೈ, ಡಿಸೆಂಬರ್ 08 : ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದೊಂಗಿನ 9 ವರ್ಷಗಳ ಸಂಬಂಧದ ಕೊಂಡಿ ಕಳಚಿ ಬಿದ್ದಿದೆ.

ವೈಯುಕ್ತಿಕ ಕಾರಣಗಳಿಂದಾಗಿ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಕೋಚ್ ಹುದ್ದೆಗೆ ಜಾಂಟಿ ರೋಡ್ಸ್ ಹುದ್ದೆಗೆ ಗುಡ್ ಬೈ ಹೇಳಿದ್ದಾರೆ. ಜಾಂಟಿ ರೋಡ್ಸ್ ಅವರ ಸ್ಥಾನಕ್ಕೆ ನ್ಯೂಜಿಲೆಂಡ್ ಕ್ರಿಕೆಟರ್ ಜೇಮ್ಸ್ ಪಾಮ್ಮೆಟ್ ಆಯ್ಕೆಯಾಗಿದ್ದಾರೆ.

Mumbai Indians part ways with Jonty Rhodes for IPL 2018

ಇಂಡಿಯನ್ ಪ್ರೀಮಿಯರ್ ಲಿಂಗ್ ನಲ್ಲಿ ಮುಂಬೈ 3 ಬಾರಿ ಚಾಂಪಿಯನ್ ಆಗಲು ಜಾಂಟಿ ರೋಡ್ಸ್ ಅವರ ಪ್ರಮುಖ ಪಾತ್ರವಹಿಸಿದ್ದರು. 2009ರಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ಜಾಂಟಿ, ತಂಡದ ಯುವ ಆಟಗಾರರಿಗೆ ಫೆವರೆಟ್ ಆಗಿದ್ದರು.

ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ, "ಜಾಂಟಿ ರೋಡ್ಸ್ ಅವರು ತಂಡಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದ್ದು, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ರೋಡ್ಸ್ ಕಾರ್ಯವನ್ನು ಶ್ಲಾಘೀಸಿದರು.

Story first published: Friday, December 8, 2017, 16:02 [IST]
Other articles published on Dec 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ