ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

Sherfane Rutherford trade Mayank Markande

ಬೆಂಗಳೂರು, ಜುಲೈ 31: ಹನ್ನೆರಡನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲೆಯ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್‌ ತಂಡ, ಇದೀಗ 2020ರ ಐಪಿಎಲ್‌ಗೆ ತನ್ನ ತಂಡವನ್ನು ಮತ್ತಷ್ಟು ಬಲ ಪಡಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದೆ.

ತನ್ನ ತಂಡದಲ್ಲಿರುವ ಆಟಗಾರರನ್ನು ಇತರ ತಂಡಗಳಿಗೆ ನೀಡಿ ಅವರಲ್ಲಿನ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಐಪಿಎಲ್‌ ಫ್ರಾಂಚೈಸಿ ತಂಡಗಳಿಗೆ ಅವಕಾಶವಿರುತ್ತದೆ. ಇದರ ಪೂರ್ಣ ಲಾಭ ಪಡೆದುಕೊಂಡಿರುವ ಮುಂಬೈ ತಂಡ ತನ್ನ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮಾರ್ಕಂಡೆ ಅವರನ್ನು ಬಿಡುಗಡೆ ಮಾಡಿ ಎಡಗೈ ಬ್ಯಾಟ್ಸ್‌ಮನ್‌ ಶೆರ್ಫೇನ್‌ ರುದರ್‌ಫೋರ್ಡ್‌ ಅವರನ್ನು ಸೆಳೆದುಕೊಂಡಿದೆ.

ಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊ

ಯುವ ಆಟಗಾರರನ್ನು ತೆಗೆದುಕೊಂಡು ಅವರನ್ನು ತಂಡದ ಭವಿಷ್ಯವನ್ನಾಗಿ ರೂಪಿಸುವಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಎತ್ತಿದ ಕೈ. ಜಸ್‌ಪ್ರೀತ್‌ ಬುಮ್ರಾ ಅವರಂತಹ ಪ್ರತಿಭೆ ಗಳು ಅರಳಿದ್ದು ಇದೇ ಮುಂಬೈ ಇಂಡಿಯನ್ಸ್‌ ಗರಡಿಯಲ್ಲಿ ಎಂಬುದು ವಿಶೇಷ. ಇದೀಗ ವೆಸ್ಟ್‌ ಇಂಡೀಸ್‌ನ ಅಟಗಾರ ಗಯಾನ ಮೂಲದ 20 ವರ್ಷದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ಗೆ ಹಾಲಿ ಚಾಂಪಿಯನ್ಸ್‌ ಮಣೆಹಾಕಿದೆ.

"ಮಯಾಂಕ್‌ ಅವರ ಭವಿಷ್ಯಕ್ಕೆ ಶುಭ ಕೋರುತ್ತೇವೆ. ಮಯಾಂಕ್‌ ಅದ್ಭುತ ಪ್ರತಿಭೆ. ಅವರನ್ನು ಆರಂಭದಲ್ಲೇ ಗುರುತಿಸಿ ಬೆಳೆಯುವಂತೆ ಮಾಡಿದ್ದು ನಮ್ಮ ತಂಡದ ಅದೃಷ್ಟವೇ ಸರಿ. ಹೀಗಾಗಿ ಇದೊಂದು ಕಠಿಣ ನಿರ್ಧಾರವಾಗಿತ್ತು. ಮಯಾಂಕ್‌ ಭಾರತೀಯ ಕ್ರಿಕೆಟ್‌ನ ಮತ್ತೊಬ್ಬ ಉದಯೋನ್ಮುಖ ತಾರೆ ಎಂಬುದನ್ನು ನಾವು ಅರಿತಿದ್ದೇವೆ. ಅವರು ಸದಾ ಮುಂಬೈ ಇಂಡಿಯನ್ಸ್‌ ಕುಟುಂಬದ ಒಂದು ಭಾಗವಾಗಿ ಇರಲಿದ್ದಾರೆ," ಎಂದು ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕ ಆಕಾಶ್‌ ಅಂಬಾನಿ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

"ಪ್ರತಿಭಾನ್ವಿತ ಯುವ ಆಟಗಾರ ಶೆರ್ಫೇನ್‌ ಅವರನ್ನು ಮುಂಬೈ ಇಂಡಿಯನ್ಸ್‌ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಶೆರ್ಫೇನ್‌ ತಮ್ಮ ಆಲ್‌ರೌಂಡ್‌ ಆಟದ ಮೂಲಕ ನಮ್ಮ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್‌ ಅವರ ತವರು ನೆಲೆಯಾಗಲಿದೆ ಎಂದು ನಾವು ನಂಬಿದ್ದೇವೆ," ಎಂದು ವೆಸ್ಟ್‌ ಇಂಡೀಸ್‌ ಆಟಗಾರನಿಗೆ ಆಕಾಶ್‌ ಅಂಬಾನಿ ಸ್ವಾಗತ ಕೋರಿದ್ದಾರೆ.

ಇದೇ ವೇಳೆ ಸ್ಪಿನ್‌ ಬೌಲಿಂಗ್‌ ಮೂಲಕ 2018ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಮಿಂಚಿದ್ದ ಮಯಾಂಕ್‌ ಮಾರ್ಕಂಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದಾರೆ.

Story first published: Wednesday, July 31, 2019, 17:34 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X