ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟನ್ನು ನೋಡುವ ರೀತಿ ಬದಲಾಯಿಸಿಕೊಳ್ಳುವ ಅಗತ್ಯವಿದೆ: ಸಂಗಕ್ಕರ

‘Need To Change How We Look At Test Cricket’: Kumar Sangakkara

ಟೆಸ್ಟ್ ಕ್ರಿಕೆಟನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕರ ಹೇಳಿದ್ದಾರೆ. ಆರ್ಥಿಕವಾಗಿ ಲಾಭದಾಯಕ ದೃಷ್ಟಿಕೋನದಿಂದ ಟೆಸ್ಟ್ ಕ್ರಿಕೆಟನ್ನು ಹೊರಗಿಟ್ಟು ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದೆ ಇದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಕ್ರಿಕೆಟ್ ಮಂಡಳಿಗಳು ಟೆಸ್ಟ್ ಕ್ರಿಕೆಟ್‌ನ ಮೇಲೆ ಲಾಭದ ಉದ್ದೇಶವನ್ನು ಹೊಂದದೆ ಹಣವನ್ನು ಹೂಡುವ ಮನಸ್ಥಿತಿಯನ್ನು ಬೆಳಸಬೇಕಾಗಿದೆ. ಆದಾಯದ ದೃಷ್ಟಿಯಿಂದ ಹೂಡಿದ ಹಣದಿಮದ ಲಾಭ ಪಡೆಯಲು ಸಾಧ್ಯವೋ ಇಲ್ಲವೋ ಎಂಬುದನ್ನು ಬಿಟ್ಟು ಮುಂದುವರಿಯಬೇಕು ಎಂದು ಸಂಗಕ್ಕರ ಹೇಳಿದ್ದಾರೆ.

ಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿ

ಆರ್ಥಿಕ ದೃಷ್ಟಿಕೋನದಿಂದ ಟೆಸ್ಟ್ ಕ್ರಿಕೆಟ್‌ನ ಮೇಲೆ ಗಮನನೀಡಿದರೆ ಅದು ಕೆಲಸ ಮಾಡಲಾರದು ಎಂದು ನನಗನಿಸುತ್ತದೆ. ಅದು ಆರ್ಥಿಕವಾಗಿ ಲಾಭ ಮಾಡಿಕೊಡಲಾರದು ಎಂದು ಕುಮಾರ್ ಸಂಗಕ್ಕರ ಹೇಳಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಮೈಕರ್ ಅಥೆರ್ಟನ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸಂಗಕ್ಕರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟಿ20 ಕ್ರಿಕೆಟ್‌ ಮಾದರಿಯ ಅಬ್ಬರದ ಮಧ್ಯೆ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಾ ಮಾದರಿಯ ಮೂಲಕ ಟೆಸ್ಟ ಕ್ರಿಕೆಟ್‌ನ ಪುನರುಜ್ಜೀವನಕ್ಕೆ ಮುಂದಾಗಿದೆ. ಅದೇನೆ ಪ್ರಯತ್ನಗಳಾದರೂ ಟೆಸ್ಟ್ ಕ್ರಿಕೆಟ್‌ಅನ್ನು ಜೀವಂತವಾಗಿರಿಸಲು ಆರ್ಥಿಕ ದೃಷ್ಟಿಕೋವನ್ನು ಬಿಟ್ಟುಬಿಡಬೇಕು ಎಂದು ಒತ್ತಿ ಹೇಳಿದರು.

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 2019ರಲ್ಲಿ ಆರಂಭವಾಗಿದ್ದು ನಿಗದಿಯಂತೆ 2021ರಲ್ಲಿ ಲಾರ್ಡ್ಸ್‌ನಲ್ಲಿ ಅಂತ್ಯವಾಗಬೇಕಿತ್ತು. ಆದರೆ ಸದ್ಯ ಕೊರೊನಾ ಕಾರಣದಿಂದಾಗಿ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಬೇಕಾದ ಅನಿವಾರ್ಯತೆ ಎದುರಾಗಿದೆ.

Story first published: Tuesday, June 16, 2020, 21:23 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X