ಮಲೇಷ್ಯಾ ಮಾಸ್ಟರ್ಸ್: ಸೈನಾ, ಕಶ್ಯಪ್, ಶ್ರೀಕಾಂತ್ ಭರ್ಜರಿ ಮುನ್ನಡೆ

ಕೌಲಾಲಂಪುರ್, ಜನವರಿ 16: ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಬುಧವಾರ (ಜನವರಿ 16) ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರಾದ ಪಾರುಪಳ್ಳಿ ಕಶ್ಯಪ್, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ದ್ವಿತೀಯ ಸುತ್ತಿಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.1 ಮಾಜಿ ಆಟಗಾರ್ತಿ ಸೈನಾ ಅವರು ಹಾಂಕಾಂಗ್‌ನ ಡೆಂಗ್ ಜಾಯ್ ಕ್ಸುವಾನ್ ಅವರನ್ನು 14-21, 21-18, 21-18ರ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದರು. ಸೈನಾ ಅವರ ಪತಿ ಕಶ್ಯಪ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಜೆಮೆಕೆ ಅವರದುರು 19-21, 21-19, 21-10ರಿಂದ ಮೇಲುಗೈ ಸಾಧಿಸಿದರು.
ಪುರುಷರ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಹಾಕಾಂಗ್‌ನ ಆಂಗಸ್ ಎನ್ಗ್ ಕಾ ಲಾಂಗ್ ಅವರೆದುರು 21-17, 21-11ರ ನೇರ ಸೆಟ್ ಗೆಲುವು ದಾಖಲಿಸಿದರು. (ತನ್ನ ಗೆಲುವಿಗೆ ಕಾಳಜಿ ವಹಿಸಿದ ಪತ್ನಿ ಸೈನಾ ಅವರನ್ನು 'ಕೋಚ್' ಎಂದು ಛೇಡಿಸಿ ಕಶ್ಯಪ್ ಮಾಡಿರುವ ಟ್ವೀಟ್. ಮೇಲಿನ ಟ್ವೀಟ್‌ನಲ್ಲಿ ತಮಾಷೆ ಪ್ರೀತಿ ಎರಡೂ ಇರುವುದನ್ನು ಕಾಣಬಹುದು).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications