ಬೆಂಗಳೂರಲ್ಲಿ ನಿಸಾನ್ ನಿಂದ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನೇರ ಪ್ರಸಾರ

ಬೆಂಗಳೂರು, ಜುಲೈ 9: ವಿಶ್ವದ ಅತ್ಯುತ್ತಮ ಮಾರಾಟವಾಗುತ್ತಿರುವ ನಿಸಾನ್ ಎಲ್‍ಇಎಎಫ್(ಲೀಫ್) ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಮಂಗಳವಾರದಂದು ಕ್ರಿಕೆಟ್ ಪ್ರೇಮಿಗಳಿಗಾಗಿ ನೇರ ಪ್ರಸಾರ ಮಾಡಿತು.

ಇದೇ ಮೊದಲ ಬಾರಿಗೆ ಬೆಂಗಳೂರಿನ ನಾಗರಿಕರಿಗೆ ನಿಸಾನ್ ಲೀಫ್ ಇಂಥ ಅವಕಾಶವನ್ನು ಮಾಡಿಕೊಟ್ಟಿತು. ಮಲ್ಲೇಶ್ವರಂನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಈ ನೇರಪ್ರಸಾರವನ್ನು ಆಯೋಜಿಸಿತ್ತು.

1
43689

ಕ್ರಿಕೆಟ್ ಪ್ರೇಮಿಗಳಿಗೆ ನಿರಂತವಾಗಿ ಪಂದ್ಯವನ್ನು ವೀಕ್ಷಿಸುವಂತೆ ಮಾಡುವ ಸಲುವಾಗಿ ನಿಸಾನ್ ಲೀಫ್‍ನ ಬ್ಯಾಟರಿಗಳಿಂದ ನೇರ ಪ್ರಸಾರ ಮಾಡಿದ ದೊಡ್ಡ ಪರದೆಗೆ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ನಿಸಾನ್‍ನ ವಿನೂತನವಾದ ವೆಹಿಕಲ್ ಟು ಹೋಂ(ವಿ2ಎಚ್) ವ್ಯವಸ್ಥೆಯು ನಿಸಾನ್ ಮಾಲೀಕರಿಗೆ ತಮ್ಮ ಕಾರುಗಳನ್ನು ಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಈ ಹೊಸ ನಿಸಾನ್ ಲೀಫ್ ಚಾಲಕರು, ವಾಹನಗಳು ಮತ್ತು ಸಮುದಾಯಗಳಿಗೆ ತನ್ನ ಬಳಕೆದಾರಸ್ನೇಹಿ ವ್ಯವಸ್ಥೆಯ ಮೂಲಕ ಸಂಪರ್ಕಕೊಂಡಿಯಾಗಿದೆ. ಈ ಮೂಲಕ ಅವರು ಎಲೆಕ್ಟ್ರಿಕಲ್ ವಾಹನಗಳು ಮತ್ತು ಮನೆಗಳು, ಕಟ್ಟಡಗಳು ಮತ್ತು ಪವರ್ ಗ್ರಿಡ್‍ಗಳ ನಡುವೆ ಇಂಧನ ಹಂಚಿಕೆ ಮಾಡಿಕೊಳ್ಳಬಹುದಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ನಿಸಾನ್ ಜಾಗತಿಕ ಪಾಲುದಾರ ಸಂಸ್ಥೆಯಾಗಿದೆ. ನಿಸನ್ ಲೀಫ್ ಮತ್ತು ಕಿಕ್ಸ್ ಮೂಲಕ ನಿಸಾನ್ ಆವಿಷ್ಕಾರ ಮತ್ತು ಉತ್ಸಾಹವನ್ನು ತುಂಬುತ್ತದೆ. ಹೊಸ ನಿಸಾನ್ ಕಿಕ್ಸ್- ಒಂದು ಇಂಟಲಿಜೆಂಟ್ ಎಸ್‍ಯುವಿಯಾಗಿದ್ದು, ಈ ವರ್ಷ ಬಿಡುಗಡೆ ಮಾಡಲಾಗಿದೆ. ಇದು ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ನ ಅಧಿಕೃತ ಕಾರು ಆಗಿದೆ.

ಕೆಲವು ದೇಶಗಳಲ್ಲಿ ವೆಹಿಕಲ್-ಟು-ಗ್ರಿಡ್ ಸಿಸ್ಟಂಗಳ ಮೂಲಕ ನಿಸಾನ್ ಲೀಫ್ ಮಾಲೀಕರು ಇಂಧನ ಕಂಪನಿಗಳಿಂದ ಇನ್ಸೆಂಟಿವ್‍ಗಳನ್ನು ಪಡೆಯುತ್ತಿದ್ದಾರೆ. ಈ ಮೂಲಕ ಬೇಡಿಕೆ ಏರಿಳಿತಗಳನ್ನು ಸರಿಪಡಿಸಿ ಪವರ್ ಗ್ರಿಡ್ ಸ್ಥಿರತೆಯನ್ನು ಸುಧಾರಣೆ ಮಾಡುತ್ತಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 9, 2019, 18:31 [IST]
Other articles published on Jul 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X