ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತವರು ಅಂಗಳದಲ್ಲಿ ಪ್ರಸಕ್ತ ಕಾಲದ ಶ್ರೇಷ್ಠ ಸ್ಪಿನ್ನರ್ ಹೆಸರಿಸಿದ ಸಕ್ಲೇನ್ ಮುಷ್ತಾಕ್

No Bowler Better Than Him In Home Conditions: Saqlain Mushtaq

ಕಾಲದಿಂದ ಕಾಲಕ್ಕೆ ವಿಶ್ವ ಕ್ರಿಕೆಟ್‌ನಲ್ಲಿ ಹಲವು ಶ್ರೇಷ್ಠ ಸ್ಪಿನ್ನರ್‌ಗಳು ಉದಯಿಸುತ್ತಲೇ ಇದ್ದಾರೆ. ಪ್ರಸಕ್ತ ಕಾಲದಲ್ಲೂ ಅಷ್ಟೇ. ಕೆಲ ಸ್ಪಿನ್ ಬೌಲರ್‌ಗಳು ಎದುರಾಳಿ ದಾಂಡಿಗರಿಗೆ ಸಿಂಹಸ್ವಪ್ನವಾಗಿದ್ದಾರೆ. ಪಾಕಿಸ್ತಾನದ ದಿಗ್ಗಜ ಸ್ಪಿನ್ನರ್ ಎನಿಸಿಕೊಂಡಿರುವ ಸಕ್ಲೇನ್ ಮುಷ್ತಾಕ್ ಪ್ರಸಕ್ತ ಕಾಲದ ಶ್ರೇಷ್ಠ ಸ್ಪಿನ್ನರ್ ಯಾರು ಎಂದು ಹೇಳಿದ್ದಾರೆ.

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ನಾಥನ್ ಲಿಯಾನ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇಂಗ್ಲೆಂಡ್, ಪಾಕಿಸ್ತಾನ ಜೊತೆಗೆ ಭಾರತದ ವಿರುದ್ಧವೂ ಲಿಯಾನ್ ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಅವರ ಪ್ರದರ್ಶನ ಮತ್ತು ಸ್ಟ್ರೈಕ್ ರೇಟ್ ಗಮನಿಸಿದರೆ ಅವರು ಸದ್ಯ ಶ್ರೇಷ್ಠ ಎನಿಸಿಕೊಳ್ಳುತ್ತಾರೆ ಎಂದು ಮುಷ್ತಾಕ್ ಹೇಳಿದ್ದಾರೆ.

ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ: ವರದಿಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ: ವರದಿ

ತವರಿನಲ್ಲಿ ಅಶ್ವಿನ್ ಶ್ರೇಷ್ಠ

ತವರಿನಲ್ಲಿ ಅಶ್ವಿನ್ ಶ್ರೇಷ್ಠ

ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಚಾರಕ್ಕೆ ಬಂದರೆ ಆರ್ ಅಶ್ವಿನ್ ಮೊದಲನೆಯವರಾಗುತ್ತಾರೆ. ವಿದೇಶದಲ್ಲೂ ಅಶ್ವಿನ್ ಪ್ರದರ್ಶನ ಅತ್ಯುತ್ತಮವಾಗಿದೆ. ಆದರೆ ತವರು ಅಂಗಳದ ವಿಚಾರಕ್ಕೆ ಬಂದರೆ ಈತನಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದು ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.

ಇಬ್ಬರೂ ಟೆಸ್ಟ್‌ನಲ್ಲಿ ಶ್ರೇಷ್ಠ ಪ್ರದರ್ಶನ

ಇಬ್ಬರೂ ಟೆಸ್ಟ್‌ನಲ್ಲಿ ಶ್ರೇಷ್ಠ ಪ್ರದರ್ಶನ

ಪ್ರಸಕ್ತ ಕಾಲದ ಶ್ರೇಷ್ಠ ಸ್ಪಿನ್ನರ್ ಯಾರು ಎಂಬ ಚರ್ಚೆ ನಡೆದರೆ ಅಲ್ಲಿ ನಥಾನ್ ಲಿಯಾನ್ ಮತ್ತು ಬೌಲರ್ ರವಿಚಂದ್ರನ್ ಅಶ್ವಿನ್ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತದೆ. ಇಬ್ಬರೂ ಕೂಡ ಕ್ರಿಕೆಟ್‌ನ ಸುದೀರ್ಘ ಮಾದರಿಯಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಕುಲ್ದೀಪ್ ಬಗ್ಗೆಯೂ ಮುಷ್ತಾಕ್ ಪ್ರಶಂಸೆ

ಕುಲ್ದೀಪ್ ಬಗ್ಗೆಯೂ ಮುಷ್ತಾಕ್ ಪ್ರಶಂಸೆ

ಸಕ್ಲೇನ್ ಮುಷ್ತಾಕ್ ಇದೇ ಸಂದರ್ಭದಲ್ಲಿ ಭಾರತದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಚಾಣಾಕ್ಷತನದಿಂದ ಬೌಲಿಂಗ್ ನಡೆಸುತ್ತಾರೆ ಎಂದಿದ್ದಾರೆ. ನಾನು ಅವರೊಂದಿಗೆ ಕೆಲ ಸಂದರ್ಭಗಳಲ್ಲಿ ಮಾತುಕತೆಯನ್ನು ನಡೆಸಿದ್ದು ಕ್ರಿಕೆಟ್ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ ಎಂದು ಮುಷ್ತಾಕ್ ಹೇಳಿದ್ದಾರೆ.

Story first published: Tuesday, June 16, 2020, 21:34 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X