ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್‌ವರೆಗೂ ಟಿ20 ವಿಶ್ವಕಪ್‌ ಬಗ್ಗೆ ಯಾವುದೇ ನಿರ್ಧಾರವಿಲ್ಲ ಎಂದ ಐಸಿಸಿ

No decision on T20 World Cup till August: ICC

ಮುಂಬೈ, ಏಪ್ರಿಲ್ 20: ಮಾರಕ ಕೊರೊನಾವೈರಸ್‌ನಿಂದಾಗಿ ವಿಶ್ವದ ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿದೆ. ಈ ವರ್ಷ ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್‌ ಕೂಡ ಮುಂದೂಡಲ್ಪಡುವ ಭೀತಿಯಲ್ಲಿದೆ. ಆದರೆ ಆಗಸ್ಟ್‌ವರೆಗೂ ಟಿ20 ವಿಶ್ವಕಪ್‌ ಬಗ್ಗೆ ಯಾವುದೇ ನಿರ್ಧಾರ ತಾಳಲಾರೆವು ಎಂದು ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

ಧೋನಿ ಅಲ್ಲ, ವಿರಾಟ್ ಅಲ್ವೇ ಅಲ್ಲ, ಗಂಭೀರ್ ಹೆಸರಿಸಿದ ಐಪಿಎಲ್ ಬೆಸ್ಟ್ ಕ್ಯಾಪ್ಟನ್!ಧೋನಿ ಅಲ್ಲ, ವಿರಾಟ್ ಅಲ್ವೇ ಅಲ್ಲ, ಗಂಭೀರ್ ಹೆಸರಿಸಿದ ಐಪಿಎಲ್ ಬೆಸ್ಟ್ ಕ್ಯಾಪ್ಟನ್!

ಸದ್ಯಕ್ಕೆ 2020ರ ಟಿ20 ವಿಶ್ವಕಪ್‌ ವೇಳಾಪಟ್ಟಿಯಂತೆ, ಟೂರ್ನಿ ಅಕ್ಟೋಬರ್ 18ಕ್ಕೆ ಆರಂಭಗೊಂಡು ನವೆಂಬರ್ 15ರಂದು ಫೈನಲ್‌ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಅಂದರೆ ಕೊರೊನಾವೈರಸ್ ಹತೋಟಿಗೆ ಬಂದರೆ ಇವತ್ತಿಗೆ 6 ತಿಂಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ.

ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!

ಆದರೆ ಈ ಬಾರಿಯ ವಿಶ್ವಕಪ್‌ ನಡೆಯುತ್ತೋ ಇಲ್ಲವೋ ಎನ್ನುವ ಬಗ್ಗೆ ಐಸಿಸಿಐ ಈಗಲೇ ನಿರ್ಧಾರ ಪ್ರಕಟಿಸುತ್ತಿಲ್ಲ. ಹೀಗೆಂದು ಐಸಿಸಿಗೆ ಹತ್ತಿರ ಮೂಲವೊಂದು ಮಾಹಿತಿ ನೀಡಿದೆ. ಆಗಸ್ಟ್ ತಿಂಗಳವರೆಗೂ ಟೂರ್ನಿ ಬಗ್ಗೆ ಯಾವುದೇ ನಿರ್ಧಾರ ತಾಳಲಾರೆವು ಎಂದು ಐಸಿಸಿ ತಿಳಿಸಿದೆ.

ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!

'ಈಗಿನವರೆಗೂ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ನಮಗೆ ಜನರ ಆರೋಗ್ಯ ಮತ್ತು ಸುರಕ್ಷೆ ಮುಖ್ಯ. ಒಂದು ವೇಳೆ ಕೆಲ ತಿಂಗಳ ಬಳಿಕ ಪರಿಸ್ಥಿತಿ ಸುಧಾರಿಸಿದರೆ? ಮೇ ತಿಂಗಳೊಳಗೆ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ? ಏನಾದರೂ ಆಗಬಹುದು. ಆದರೆ ಐಸಿಸಿ ಈ ಬಗ್ಗೆ ನಿರ್ಧರಿಸುವುದಕ್ಕಾಗಿ ಆಗಸ್ಟ್ ತಿಂಗಳವರೆಗೂ ಕಾದು ನೋಡಲಿದೆ,' ಎಂದು ಎಂದು ಮೂಲಗಳು ಮಾಹಿತಿ ನೀಡಿದೆ.

Story first published: Monday, April 20, 2020, 9:50 [IST]
Other articles published on Apr 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X