ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಆರ್‌ಎಸ್ ಇಲ್ಲ, ನಾಟ್ ಔಟ್ ತೀರ್ಪು, ಆದರೂ ಹೊರ ನಡೆದ ಪೂನಂ: ವಿಡಿಯೋ

No DRS, given not out but Indias Punam Raut walks off: video

ಕ್ವೀನ್ಸ್‌ಲ್ಯಾಂಡ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಕ್ಯರಾರಾ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮಹಿಳೆಯರು ಮತ್ತು ಭಾರತದ ಮಹಿಳೆಯರ ನಡುವಿನ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಭಾರತದ ಬ್ಯಾಟರ್ ಪೂನಂ ರಾವತ್ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ. ಪಂದ್ಯದ ವೇಳೆ ಔಟ್ ಖಾತರಿ ಆಗಿಲ್ಲದಿದ್ದರೂ ರಾವತ್ ತಾನೇ ಮೈದಾನದಿಂದ ಹೊರ ನಡೆದಿರುವ ಘಟನೆ ನಡೆದಿದೆ. ಈ ಘಟನೆ ಕ್ರಿಕೆಟ್ ಪರಿಣಿತರನ್ನು ಅಚ್ಚರಿಗೀಡು ಮಾಡಿದೆ.

ಡೇವಿಡ್ ವಾರ್ನರ್‌ಗೆ ಸನ್‌ರೈಸರ್ಸ್ ತಂಡದೊಂದಿಗೆ ಪ್ರಯಾಣಕ್ಕೂ ಅವಕಾಶ ನೀಡದ ಫ್ರಾಂಚೈಸಿ!: ವರದಿಡೇವಿಡ್ ವಾರ್ನರ್‌ಗೆ ಸನ್‌ರೈಸರ್ಸ್ ತಂಡದೊಂದಿಗೆ ಪ್ರಯಾಣಕ್ಕೂ ಅವಕಾಶ ನೀಡದ ಫ್ರಾಂಚೈಸಿ!: ವರದಿ

ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಪೂನಂ ರಾವತ್ 36 ರನ್ ಬಾರಿಸಿ 80.4ನೇ ಓವರ್‌ನಲ್ಲಿ ಸೋಫಿ ಮೊಲಿನಕ್ಸ್ ಎಸೆತಕ್ಕೆ ವಿಕೆಟ್ ಕೀಪರ್ ಅಲಿಸಾ ಹೀಲಿಗೆ ಕ್ಯಾಚಿತ್ತು. ನಿರ್ಗಮಿಸಿದರು. ಅಸಲಿಗೆ ಈ ಔಟ್ ಖಾತರಿಯಾಗಿರಲಿಲ್ಲ. ಆದರೂ ರಾವತ್ ಮೈದಾನದಿಂದ ಹೊರ ನಡೆದಿದ್ದಾರೆ.

ಪಂದ್ಯದಲ್ಲಿ ಆಗಿದ್ದೇನು?

ಪಂದ್ಯದಲ್ಲಿ ಆಗಿದ್ದೇನು?

ಆಸ್ಟ್ರೇಲಿಯಾ ಮಹಿಳೆಯರು ಮತ್ತು ಭಾರತೀಯ ಮಹಿಳೆಯರ ನಡುವಿನ ಏಕಮಾತ್ರ ಮತ್ತು ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್‌ ಪಂದ್ಯಕ್ಕಾಗಿ ಇತ್ತಂಡಗಳು ಮೈದಾನಕ್ಕಿಳಿದಿದ್ದವು. ಭಾರತದ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟವಾದ ಶುಕ್ರವಾರ ಬ್ಯಾಟಿಂಗ್‌ಗೆ ಬಂದಿದ್ದ ಪೂನಂ ರಾವತ್ 165 ಎಸೆತಗಳಲ್ಲಿ 36 ರನ್ ಬಾರಿಸಿ 80.4ನೇ ಓವರ್‌ನಲ್ಲಿ ಸೋಫಿ ಮೊಲಿನಕ್ಸ್ ಎಸೆತಕ್ಕೆ ಕೀಪರ್ ಅಲಿಸಾ ಹೀಲಿಗೆ ಕ್ಯಾಚ್ ನೀಡಿ ಹೊರ ನಡೆದರು. ರಾವತ್ ಬ್ಯಾಟ್‌ಗೆ ತಾಗಿದ ಚೆಂಡು ಕೀಪರ್ ಕೈ ಸೇರಿದೆ ಎಂದು ಆಸ್ಟ್ರೇಲಿಯಾ ಆಟಗಾರ್ತಿಯರು ಔಟ್‌ಗೆ ಅಪೀಲ್ ಮಾಡಿದರು. ಆದರೆ ಅಂಪೈರ್ ನಾಟ್ ಔಟ್ ಎಂದು ತಲೆಯಾಡಿಸಿದರು. ಅಷ್ಟರಲ್ಲಾಗಲೇ ರಾವತ್ ಪೆವಿಲಿಯನ್ ಕಡೆ ಹೆಜ್ಜೆ ಇಡುತ್ತಿದ್ದರು. ಅಂಪೈರ್ ನಾಟ್ ಔಟ್ ಎಂದ ಮೇಲೂ ರಾವತ್ ಹೊರ ನಡೆದಿದ್ದು ಕ್ರಿಕೆಟ್ ದಿಗ್ಗರನ್ನು ಅಚ್ಚರಿಗೀಡು ಮಾಡಿದೆ. ಕೆಲವರು ರಾವತ್ ಕ್ರೀಡಾಸ್ಫೂರ್ತಿಯಿಂದಾಗಿ ಹೀಗೆ ನಡೆದುಕೊಂಡರು ಎಂದರೆ, ಇನ್ನು ಕೆಲವರು ರಾವತ್ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ.

ಔಟಾ ನಾಟ್ ಔಟಾ?

ಔಟಾ ನಾಟ್ ಔಟಾ?

ಬ್ಯಾಟರ್ ರಾವತ್ ಬ್ಯಾಟ್ ತಾಗಿದ ಚೆಂಡು ಬ್ಯಾಟ್‌ನ ಸಮೀಪದಿಂದ ಹಾದು ಹೋಗಿ ಎದುರಾಳಿ ಕೀಪರ್ ಕೈ ಸೇರಿದ್ದು ನಿಜ. ಆದರೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಇಲ್ಲವೇ ಅನ್ನೋದು ಖಚಿತವಾಗಿಲ್ಲ. ಖಚಿತ ಪಡಿಸಿಕೊಳ್ಳಲು ಈ ಟೆಸ್ಟ್‌ ಪಂದ್ಯದಲ್ಲಿ ಡಿಸಿಶನ್ ರಿವ್ಯೂ ಸಿಸ್ಟಮ್ ಕೂಡ ಇರಲಿಲ್ಲ. ಒಂದೆರಡು ಬಾರಿ ರಿಪ್ಲೆ ಮೂಲಕ ಇದು ಔಟೋ ನಾಟ್ ಔಟೋ ಎಂದು ಪರೀಕ್ಷಿಸಲಾಯ್ತು. ಆದರೆ ಸರಿಯಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಅಂತೂ ಬ್ಯಾಟಿಂಗ್‌ ಮಾಡುತ್ತಿದ್ದ ರಾವತ್, ಅಂಪೈರ್ ನಾಟ್ ಔಟ್ ಎಂದು ಹೇಳಿದ ಬಳಿಕವೂ ನಡೆದಿದ್ದು ಅನೇಕರನ್ನು ಅಚ್ಚರಿಗೀಡು ಮಾಡಿದೆ. ಕಾಮೆಂಟರಿ ಮಾಡುತ್ತಿದ್ದ ಬೆತ್ ಮೂನಿ ಕೂಡ ದಂಗಾಗಿ ಪ್ರತಿಕ್ರಿಯಿಸಿದ್ದಾರೆ. ಅದು ಔಟಾ ಅಥವಾ ನಾಟ್ ಔಟಾ ಅನ್ನೋದು ಅವರಿಗೂ ಅರ್ಥವಾಗಿಲ್ಲ.

Dhoni ಅವರ ಈ ಒಂದು ಹೊಡೆತಕ್ಕೆ ಅಭಿಮಾನಿಗಳು ಫುಲ್ ಖುಷ್ | Oneindia Kannada

ಟೆಸ್ಟ್‌ನಲ್ಲಿ ಭಾರತದ ಬೆಸ್ಟ್ ಸಾಧನೆ

ಭಾರತ vs ಆಸ್ಟ್ರೇಲಿಯಾ ಈ ಟೆಸ್ಟ್‌ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಶತಕ ಬಾರಿಸಿದ್ದಾರೆ. ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂಧಾನ ಕಾರಣರಾಗಿದ್ದಾರೆ. ಪುರುಷ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಪಿಂಕ್‌ ಬಾಲ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ದಾಖಲೆ ನಿರ್ಮಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತೀಯ ಮಹಿಳೆಯರು, ಸ್ಮೃತಿ ಮಂಧಾನ 127, ಶೆಫಾಲಿ ವರ್ಮಾ 31, ಪೂನಮ್ ರಾವತ್ 36, ಮಿಥಾಲಿ ರಾಜ್ 30, ವಸ್ತಿಕಾ ಭಾಟಿಯಾ 19 ರನ್ ಬಾರಿಸಿ ಔಟ್ ಆಗಿದ್ದಾರೆ. 101.5 ಓವರ್‌ ವೇಳೆಗೆ ಭಾರತ 5 ವಿಕೆಟ್‌ ಕಳೆದು 276 ರನ್ ಬಾರಿಸಿತ್ತು. ದೀಪ್ತಿ ಶರ್ಮಾ ಮತ್ತು ತಾನಿಯಾ ಭಾಟಿಯಾ ಬ್ಯಾಟಿಂಗ್ ಮಾಡುತ್ತಿದ್ದರು.

Story first published: Friday, October 1, 2021, 15:37 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X