ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್ ರಮೇಶ್ ತಲೆದಂಡ ಖಚಿತ, ಹೊಸ ಕೋಚ್ ಗಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐ

No extension for Ramesh Powar as BCCI invites applications for women’s team coach’s position

ಮುಂಬೈ, ನವೆಂಬರ್ 30: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ(ನವೆಂಬರ್ 30)ದಂದು ಪ್ರಕಟಣೆ ಹೊರಡಿಸಿದೆ.

ಈ ಮೂಲಕ ಮಧ್ಯಂತರ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಅವರ ತಲೆದಂದ ಖಚಿತವಾಗಿದೆ. ನವೆಂಬರ್ 30ರಂದು ರಮೇಶ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಿದೆ.

ಮಿಥಾಲಿಯೊಂದಿಗೆ ಕಲಹ : ಕೋಚ್ ರಮೇಶ್ ಪೋವಾರ್ ತಲೆದಂಡ ಖಚಿತ ಮಿಥಾಲಿಯೊಂದಿಗೆ ಕಲಹ : ಕೋಚ್ ರಮೇಶ್ ಪೋವಾರ್ ತಲೆದಂಡ ಖಚಿತ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನವನ್ನು ಡಿಸೆಂಬರ್ 20, 2018ರಂದು ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆಸಲಾಗುತ್ತದೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ತುಷಾರ್ ಅರೋಥೆ ಬದಲಿಗೆ ರಮೇಶ್ ಪೊವಾರ್ ಅವರು ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ವಿಶ್ವಟಿ20 ಟೂರ್ನಮೆಂಟ್ ವೇಳೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ವಿಷಯದಲ್ಲಿ ರಮೇಶ್ ಪೊವಾರ್ ಹಾಗೂ ಹಿರಿಯ ಆಟಗಾರ್ತಿ, ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೂ ವೈಮನಸ್ಯ ಉಂಟಾಗಿತ್ತು. ಪರಸ್ಪರ ಕೆಸರೆರಚಾಟ ಕೂಡಾ ನಡೆದು, ಬಿಸಿಸಿಐ ತನಕ ವಿಷಯ ಮುಟ್ಟಿತ್ತು.

ನನ್ನ ಬದುಕಿನ ಕಗ್ಗತ್ತಲ ದಿನವಿದು: ಕೋಚ್ ರಮೇಶ್‌ಗೆ ಕುಟುಕಿದ ಮಿಥಾಲಿನನ್ನ ಬದುಕಿನ ಕಗ್ಗತ್ತಲ ದಿನವಿದು: ಕೋಚ್ ರಮೇಶ್‌ಗೆ ಕುಟುಕಿದ ಮಿಥಾಲಿ

ಮಿಥಾಲಿ ಅವರು ಬೆದರಿಕೆ ಒಡ್ಡಿದ್ದರು ಎಂದು ಬಿಸಿಸಿಐಗೆ ರಮೇಶ್ ಅವರು ಪತ್ರ ಬರೆದು ವಿವರಿಸಿದ್ದರು. 'ನಿನ್ನ ಕೆರಿಯರ್ ಅಂತ್ಯಗೊಳಿಸುವೆ' ಎಂದು ಕೋಚ್ ಧಮಕಿ ಹಾಕಿದ್ದರು ಎಂದು ಮಿಥಾಲಿ ವಾದಿಸಿದ್ದರು. ಕೊನೆಗೂ ಈ ವಿವಾದಕ್ಕೆ ಬಿಸಿಸಿಐ ತಾರ್ಕಿಕ ಅಂತ್ಯ ಹುಡುಕಿದೆ.

Story first published: Friday, November 30, 2018, 18:46 [IST]
Other articles published on Nov 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X