ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾರೇ ಬಂದರೂ ವಿರಾಟ್ ಕೊಹ್ಲಿ ಸ್ಥಾನ ತುಂಬಲಾಗುವುದಿಲ್ಲ: ವಿರೇಂದ್ರ ಸೆಹ್ವಾಗ್

No matter how may youngsters come, there wont be another Kohli says Virender Sehwag

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯೇ ನನ್ನ ನಾಯಕತ್ವದ ಕೊನೆಯ ಟಿ ಟ್ವೆಂಟಿ ಟೂರ್ನಿ ಎಂದು ಟೂರ್ನಿ ಆರಂಭವಾಗುವ ಮುನ್ನವೇ ವಿರಾಟ್ ಕೊಹ್ಲಿ ಘೋಷಣೆಯನ್ನು ಮಾಡಿದ್ದರು. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ ಬಹಿರಂಗ ಪತ್ರ ಬರೆಯುವುದರ ಮೂಲಕ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತಿರುವ ವಿಷಯ ಮತ್ತು ಅದಕ್ಕೆ ಕಾರಣಗಳನ್ನು ಕೂಡ ವಿರಾಟ್ ಕೊಹ್ಲಿ ತಿಳಿಸಿದ್ದರು.

ಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆ

ತನ್ನ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನ ಮತ್ತು ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕತ್ವವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಾದ ಕಾರಣದಿಂದಾಗಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದರು. ವಿರಾಟ್ ಕೊಹ್ಲಿಯೇ ಭಾರತದ ಎಲ್ಲಾ ಕ್ರಿಕೆಟ್ ತಂಡಗಳಿಗೂ ನಾಯಕನಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದು ಮತ್ತು ಓರ್ವ ಆಟಗಾರನಾಗಿಯೂ ಉತ್ತಮ ಪ್ರದರ್ಶನವನ್ನು ತೀರಾ ಕಷ್ಟದ ಕೆಲಸ ಮತ್ತು ಈ ಜವಾಬ್ದಾರಿ ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ಒತ್ತಡವನ್ನು ಸೃಷ್ಟಿಸಿತ್ತು.

ಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

ಹೀಗಾಗಿ ತನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಿಂದ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ಕೈಗೊಂಡರು ಎಂಬ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದೇ. ಇನ್ನು ವಿರಾಟ್ ಕೊಹ್ಲಿ ಈ ಹಿಂದೆ ಘೋಷಿಸಿದಂತೆ ಇದೀಗ ಅವರ ಟೀಮ್ ಇಂಡಿಯಾದ ಟಿ ಟ್ವೆಂಟಿ ನಾಯಕತ್ವ ಅಂತಿಮವಾಗಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಅಂತಿಮ ಪಂದ್ಯವನ್ನು ನಮೀಬಿಯಾ ವಿರುದ್ಧ ನವೆಂಬರ್‌ 8ರ ಸೋಮವಾರದಂದು ಆಡಿತು. ಈ ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿಯವರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವ ಅಂತ್ಯಗೊಂಡಿದ್ದು, ಇನ್ನು ಮುಂದೆ ಕೊಹ್ಲಿ ಟೀಮ್ ಇಂಡಿಯಾ ಟಿ ಟ್ವೆಂಟಿ ತಂಡದ ಓರ್ವ ಆಟಗಾರನಾಗಿ ಮುಂದುವರೆಯಲಿದ್ದಾರಾ ಅಥವಾ ಮುಂದಿನ ದಿನಗಳಲ್ಲಿ ತಂಡದಿಂದ ಹೊರಗುಳಿಯಲಿದ್ದಾರಾ ಎಂಬ ಚರ್ಚೆಗಳು ಕೂಡ ಈ ನಡುವೆ ಹೆಚ್ಚಾಗಿವೆ. ಈ ಚರ್ಚೆಗಳ ಕುರಿತಾಗಿ ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಆಶೀಷ್ ನೆಹ್ರಾ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಯಾರೇ ಬಂದರೂ ಮತ್ತೋರ್ವ ಕೊಹ್ಲಿ ಸಿಗಲಾರ ಎಂದ ವಿರೇಂದ್ರ ಸೆಹ್ವಾಗ್

ಯಾರೇ ಬಂದರೂ ಮತ್ತೋರ್ವ ಕೊಹ್ಲಿ ಸಿಗಲಾರ ಎಂದ ವಿರೇಂದ್ರ ಸೆಹ್ವಾಗ್

"ಎಷ್ಟೇ ಯುವ ಕ್ರಿಕೆಟಿಗರು ಟೀಮ್ ಇಂಡಿಯಾ ಸೇರಿದರೂ ಸಹ ಮತ್ತೋರ್ವ ಕೊಹ್ಲಿಯಂತೂ ನಮಗೆ ಸಿಗುವುದಿಲ್ಲ. ಆತ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ತೋರುವ ಸ್ಥಿರತೆ ಯಾರಿಂದಲೂ ಸಾಧ್ಯವಾಗುವುದಿಲ್ಲ. ಭಾರತ ಟಿ ಟ್ವೆಂಟಿ ತಂಡದಲ್ಲಿ ಆತನ ಸ್ಥಾನದ ಕುರಿತು ಪ್ರಶ್ನೆ ಎತ್ತುವುದು ಸರಿಯಲ್ಲ. ಆತ ಇಷ್ಟಪಡುವವರೆಗೂ ಆತ ಭಾರತ ಟಿ ಟ್ವೆಂಟಿ ತಂಡದಲ್ಲಿ ಇರಬಹುದು" ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಕೊಹ್ಲಿಗಿಂತ ಉತ್ತಮ ಯಾರೂ ಇಲ್ಲ ಎಂದ ಆಶೀಶ್ ನೆಹ್ರಾ

ಕೊಹ್ಲಿಗಿಂತ ಉತ್ತಮ ಯಾರೂ ಇಲ್ಲ ಎಂದ ಆಶೀಶ್ ನೆಹ್ರಾ

ವಿರೇಂದ್ರ ಸೆಹ್ವಾಗ್ ಮಾತ್ರವಲ್ಲದೆ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಕೂಡ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ವಿರಾಟ್ ಕೊಹ್ಲಿ ರೀತಿಯ ಸ್ಥಿರತೆಯ ಆಟವನ್ನು ಬೇರೆ ಯಾವ ಆಟಗಾರನೂ ಕೂಡ ಆಡಲಾದ ಎಂದಿರುವ ಆಶಿಶ್ ನೆಹ್ರಾ ಕೊಹ್ಲಿ ಜೊತೆಗೆ ಯುವ ಆಟಗಾರರ ಕಾಂಬಿನೇಷನ್ ಕಣಕ್ಕಿಳಿಯಬೇಕು ಎಂದಿದ್ದಾರೆ. ಈ ರೀತಿ ಅನುಭವಿ ಮತ್ತು ಯುವ ಆಟಗಾರರ ಕಾಂಬಿನೇಷನ್ ತಂಡಕ್ಕೆ ದೊಡ್ಡ ಅನುಕೂಲವಾಗಿ ಪರಿಣಮಿಸಲಿದೆ ಎಂಬುದು ಆಶಿಶ್ ನೆಹ್ರಾ ಅವರ ಅಭಿಪ್ರಾಯ.

ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿಯೇ ನಂಬರ್ ಒನ್

ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿಯೇ ನಂಬರ್ ಒನ್

ವೀರೇಂದ್ರ ಸೆಹ್ವಾಗ್ ಮತ್ತು ಆಶೀಶ್ ನೆಹ್ರಾ ವಿರಾಟ್ ಕೊಹ್ಲಿ ಕುರಿತಾಗಿ ಹೇಳಿದ ಮಾತುಗಳು ಅಪ್ಪಟ ಸತ್ಯ. ಏಕೆಂದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಯೇ ನಂಬರ್ ಒನ್. ಹೌದು, ಇದುವರೆಗೂ ಒಟ್ಟು 87 ಟಿ 20 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 3227 ರನ್‌ಗಳನ್ನು ಬಾರಿಸಿದ್ದು ವಿಶ್ವ ಕ್ರಿಕೆಟ್‍ನಲ್ಲಿಯೇ ಅತಿ ಹೆಚ್ಚು ಟಿ ಟ್ವೆಂಟಿ ರನ್ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

Story first published: Tuesday, November 9, 2021, 16:13 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X