ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!

ಹಾರ್ದಿಕ್ ಪಾಂಡ್ಯ ಅವರನ್ನು ನೋಡಿದ್ರೆ ಅಚ್ಚರಿಯಾಗುತ್ತೆ..? | Oneindia Kannada
No one can match Pandyas all-round abilities: Sehwag

ಮುಂಬೈ: ಮೇ 15: ಟೀಮ್‌ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ವೀರೇಂದ್ರ ಸೆಹ್ವಾಗ್‌, ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಸಾಮರ್ಥ್ಯವನ್ನು ಪ್ರಶಂಶಿಸಿದ್ದಾರೆ.

ಪಾಕ್‌ ವಿರುದ್ಧದ 4ನೇ ಒಡಿಐನಲ್ಲಿ ಆಡದಂತೆ ಐಯಾನ್‌ ಮಾರ್ಗನ್‌ಗೆ ನಿಷೇಧಪಾಕ್‌ ವಿರುದ್ಧದ 4ನೇ ಒಡಿಐನಲ್ಲಿ ಆಡದಂತೆ ಐಯಾನ್‌ ಮಾರ್ಗನ್‌ಗೆ ನಿಷೇಧ

ಡ್ಯಾಷಿಂಗ್‌ ಓಪನರ್‌ ಎಂದೇ ಖ್ಯಾತಿ ಪಡೆದಿದ್ದ ಸೆಹ್ವಾಗ್‌, ಸದ್ಯ ಈಗಿರುವ ಭಾರತ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ ಅವರನ್ನು ಸರಿದೂಗಬಲ್ಲ ಆಲ್‌ರೌಂಡರ್‌ಗಳು ಬೇರ್ಯಾರೂ ಇಲ್ಲ ಎಂದು ಹೇಳಿದ್ದಾರೆ.

"ಬ್ಯಾಟ್‌ ಮತ್ತು ಬಾಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರಲ್ಲಿರುವ ಪ್ರತಿಭೆಗೆ ಹತ್ತಿರವೂ ಯಾರೂ ಇಲ್ಲ. ಬಿಸಿಸಿಐ ಆಯ್ಕೆ ಮಾಡಿರುವ ತ್ರೀ ಡೈಮೆನ್ಷನ್‌ ಆಟಗಾರರು ಕೂ ಪಾಂಡ್ಯ ಅವರ ಹತ್ತಿರಕ್ಕೆ ಸುಳಿಯಲಾರರು,'' ಎಂದು ಸೆಹ್ವಾಗ್‌ ಸಂದರ್ಶನವೊಂದರಲ್ಲಿ ಪಾಂಡ್ಯ ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ.

ಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿ

ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಪ್ರಶಸ್ತಿ ಗೆಲ್ಲುವುದಾದರೆ ಅದರಲ್ಲಿ ಹಾರ್ದಿಕ್‌ ಪಾಂಡ್ಯ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ವಿಶ್ವಕಪ್ 2019: ಪಂತ್ ಬದಲು ಕಾರ್ತಿಕ್ ಆರಿಸಿದ್ದಕ್ಕೆ ಕಾರಣ ಹೇಳಿದ ಕೊಹ್ಲಿವಿಶ್ವಕಪ್ 2019: ಪಂತ್ ಬದಲು ಕಾರ್ತಿಕ್ ಆರಿಸಿದ್ದಕ್ಕೆ ಕಾರಣ ಹೇಳಿದ ಕೊಹ್ಲಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವ ಹಾರ್ದಿಕ್‌ ಪಾಂಡ್ಯ, ಈ ಬಾರಿ ತಂಡ ದಾಖಲೆಯ ನಾಲ್ಕನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಾಂಡ್ಯ, 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆಡಿದ 15 ಇನಿಂಗ್ಸ್‌ಗಳಲ್ಲಿ 191.42ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 402 ರನ್‌ಗಳನ್ನು ಸಿಡಿಸಿದ್ದರು. ಜತೆಗೆ ಬೌಲಿಂಗ್‌ನಲ್ಲಿ ಅಗತ್ಯದ ಸಂದರ್ಭಗಳಲ್ಲಿ ವಿಕೆಟ್‌ಗಳನ್ನು ಪಡೆದು ಮುಂಬೈ ಗೆಲುವಿಗೆ ನೆರವಾಗಿದ್ದರು.

ಭಾರತ ತಂಡ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿತನ್ನ ಅಭಿಯಾನ ಆರಂಭಿಸಲಿದೆ.

Story first published: Wednesday, May 15, 2019, 19:07 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X