ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಯಾವುದೇ ತಂಡದಲ್ಲಿ 11 ಪಂತ್‌ಗಳು, 11 ಪೂಜಾರರು ಇರೋದಕ್ಕೆ ಸಾಧ್ಯವಿಲ್ಲ'

No team can have 11 Pants or 11 Pujaras, says batting coach Vikram Rathour

ಲಂಡನ್: ಕುತೂಹಲಕಾರಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದೆ. ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಆಡಿದ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಜೂನ್ 18ರಿಂದ ಟೆಸ್ಟ್‌ ಚಾಂಪಿಯನ್‌ಶಿಪ್ ಆರಂಭವಾಗಲಿದೆ.

ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಫ್ರಾಂಚೈಸಿಗಳಲ್ಲಿ ವಿಶ್ವಾಸಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಫ್ರಾಂಚೈಸಿಗಳಲ್ಲಿ ವಿಶ್ವಾಸ

ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡ ಟೆಸ್ಟ್‌ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ ಗಳಿಸಿ ಮುಖಭಂಗ ಅನುಭವಿಸಿತ್ತು. ಅದೇ ಟೆಸ್ಟ್‌ ಸರಣಿಯಲ್ಲಿ ರೋಚಕ ಗೆಲುವೂ ದಾಖಲಿಸಿದ್ದ ಭಾರತ ವಿಶ್ವಕ್ಕೆ ಒಂದು ಸಂದೇಶ ರವಾನಿಸಿತ್ತು. ಟೆಸ್ಟ್‌ ಸರಣಿಗೆ ಸಜ್ಜಾಗಿರುವ ಭಾರತ ತಂಡದ ಬಗ್ಗೆ ಮಾಜಿ ಆಯ್ಕೆದಾರ, ಈಗ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋಡ್ ಮಾತನಾಡಿದ್ದಾರೆ.

ತಂಡದ ಬಗ್ಗೆ ಮಾತನಾಡಿದರು ರಾಥೋಡ್, ತಂಡದಲ್ಲಿ ವೈವಿಧ್ಯತೆಯಿದೆ. ತಂಡ ಪೂರ್ತಿ ರಿಷಭ್ ಪಂತ್‌ನಂತೆ ಅಥವಾ ಚೇತೇಶ್ವರ ಪೂಜಾರ ಅವರಂತೆ ಇಲ್ಲ. ಭಾರತ ಕ್ರಿಕೆಟ್ ತಂಡ ಪಂತ್ ಮತ್ತು ಪೂಜಾರ ಅಂಥವರ ಮಿಶ್ರಣ. ವಿಕೆಟ್‌ ಕಾಯುವ ಬ್ಯಾಟ್ಸ್‌ಮನ್‌ ಕೂಡ ಇದ್ದಾರೆ, ಬೇಕಾದಾಗ ಟೆಸ್ಟ್‌ನಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್‌ಗಳಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರುಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

'ಪೂಜಾರ ಅಥವಾ ಪಂತ್‌ ಇಬ್ಬರೂ ವಿಭಿನ್ನ ಮನಸ್ಥಿತಿ ಹೊಂದಿದ್ದಾರೆ. ವಿಭಿನ್ನ ಕೆಲಸದ ನೀತಿ ಮತ್ತು ಇಬ್ಬರನ್ನೂ ಆಲಿಸೋದು ನನಗೆ ಇಬ್ಬರನ್ನೂ ಅರ್ಥಮಾಡಿಕೊಳ್ಳಲು ಇರುವ ದಾರಿ. ಯಾವುದೇ ತಂಡದಲ್ಲೂ 11 ಪಂತ್‌ಗಳು, 11 ಪೂಜಾರರು ಇರೋದಕ್ಕೆ ಸಾಧ್ಯವಿಲ್ಲ. ಪಂದ್ಯ ಗೆಲ್ಲಬೇಕಾದರೆ ಪಂತ್ ಮತ್ತು ಪೂಜಾರ ಇಬ್ಬರೂ ಬೇಕು,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ರಾಥೋಡ್ ಹೇಳಿದ್ದಾರೆ.

Story first published: Friday, June 4, 2021, 11:37 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X