ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI World Cup 2023: ಭಾರತದ ವಿಶ್ವಕಪ್ ತಂಡದಲ್ಲಿ ಈತನಿಗೆ ಸ್ಥಾನ ನೀಡಲೇಬೇಕು; ಅಜಯ್ ಜಡೇಜಾ

ODI World Cup 2023: Ravichandran Ashwin Should Be Included In Indias World Cup Squad Says Ajay Jadeja

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಯ್ ಜಡೇಜಾ ಅವರು ಭಾರತದಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ನಲ್ಲಿ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸಬೇಕೆಂದು ಒತ್ತಾಯಿಸಿದ್ದಾರೆ.

ತವರಿನ ಪರಿಸ್ಥಿತಿಗಳಲ್ಲಿ ಸ್ಪಿನ್ ಪ್ರಮುಖವಾದುದು ಎಂದು ಜಡೇಜಾ ಪರಿಗಣಿಸಿದ್ದರಿಂದ ಭಾರತ ತಂಡವು ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ಇಬ್ಬರನ್ನೂ ಬಳಸಬೇಕು ಎಂದಿದ್ದಾರೆ.

ಶನಿವಾರ ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ಮಾಜಿ ಬ್ಯಾಟರ್ ಅಜಯ್ ಜಡೇಜಾ, ಮುಂಬರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತಕ್ಕೆ ರವಿಚಂದ್ರನ್ ಅಶ್ವಿನ್ ಅದ್ಭುತವಾಗಲಿದ್ದಾರೆ, ಏಕೆಂದರೆ ಭಾರತೀಯ ಪರಿಸ್ಥಿತಿಗಳಲ್ಲಿ ಸ್ಪಿನ್ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.

IND vs SL: ಈ ಮಾಜಿ ಆಟಗಾರನಿಂದಾಗಿ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯಾಯಿತು; ಹಾರ್ದಿಕ್ ಪಾಂಡ್ಯIND vs SL: ಈ ಮಾಜಿ ಆಟಗಾರನಿಂದಾಗಿ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯಾಯಿತು; ಹಾರ್ದಿಕ್ ಪಾಂಡ್ಯ

36 ವರ್ಷ ವಯಸ್ಸಿನ ರವಿಚಂದ್ರನ್ ಅಶ್ವಿನ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಜನವರಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಅವರು 113 ಪಂದ್ಯಗಳಲ್ಲಿ 4.94ರ ಎಕಾನಮಿ ದರದಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕುತೂಹಲಕಾರಿ ಅಂಶವೆಂದರೆ, ಶ್ರೀಲಂಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿಲ್ಲ.

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ

"ನಾನು ವಿಶ್ವಕಪ್‌ನ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸುತ್ತೇನೆ. ಏಕೆಂದರೆ ಯುಜ್ವೇಂದ್ರ ಚಹಾಲ್ ಅವರಿಗಿಂತ ಮುಂಚೆ ಅಶ್ವಿನ್ ಅವರನ್ನು ಆಯ್ಕೆ ಮಾಡಬೇಕಾಗಿದೆ. ಭಾರತದ ಪಿಚ್‌ಗಳಲ್ಲಿ ಸ್ಪಿನ್ ಮುಖ್ಯ ಎಂಬುದನ್ನು ಪರಿಗಣಿಸಬೇಕೆಂದು," ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಏಕದಿನ ವಿಶ್ವಕಪ್‌ಗೆ ಭಾರತದ ವೇಗದ ಬೌಲಿಂಗ್ ದಾಳಿಯ ಭಾಗವಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಖಂಡಿತವಾಗಿಯೂ ಆಯ್ಕೆ ಮಾಡುವುದಾಗಿ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದರು.

"ಗಾಯದಿಂದ ಚೇತರಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಖಚಿತವಾಗಿ ಆಯ್ಕೆಮಾಡಿಕೊಳ್ಳಬೇಕು. ನಾನು ಪ್ರಸ್ತುತ ಫಾರ್ಮ್‌ನೊಂದಿಗೆ ಹೋಗುವುದಾದರೆ, ಮೊಹಮ್ಮದ್ ಶಮಿಯನ್ನು ಆರಿಸಿಕೊಳ್ಳುತ್ತೇನೆ. ಅವರನ್ನು ಹೊರಗಿಡಲು ಯಾವುದೇ ಮಾರ್ಗವಿಲ್ಲ," ಎಂದು ಅಜಯ್ ಜಡೇಜಾ ತಿಳಿಸಿದರು.

ಅರ್ಶ್‌ದೀಪ್ ಸಿಂಗ್ ಭಾರತ ತಂಡದ ವೇಗದ ದಾಳಿಯ ಭವಿಷ್ಯ

ಅರ್ಶ್‌ದೀಪ್ ಸಿಂಗ್ ಭಾರತ ತಂಡದ ವೇಗದ ದಾಳಿಯ ಭವಿಷ್ಯ

ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಕೇವಲ ಐದು ವಿಕೆಟ್‌ಗಳನ್ನು ಪಡೆದರು. 32 ವರ್ಷ ವಯಸ್ಸಿನ ಶಮಿ, ತಮ್ಮ ಕೊನೆಯ ಏಕದಿನ ಪಂದ್ಯವನ್ನು ಜುಲೈ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದರು. ಮೊಹಮ್ಮದ್ ಶಮಿ 82 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು, 5.6ರ ಎಕಾನಮಿ ದರದಲ್ಲಿ 152 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದೇ ವೇಳೆ ಅರ್ಶ್‌ದೀಪ್ ಸಿಂಗ್ ಅವರು ಭಾರತ ತಂಡದ ವೇಗದ ದಾಳಿಯ ಭವಿಷ್ಯ ಮತ್ತು ಶ್ರೀಲಂಕಾ ವಿರುದ್ಧ ಕೆಟ್ಟ ಸರಣಿಯನ್ನು ಹೊಂದಿದ್ದರೂ ವಿಶ್ವಕಪ್ ಸಮಯದಲ್ಲಿ ತಂಡಕ್ಕೆ ಪ್ರಮುಖರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹೇಳಿದರು.

"ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಅರ್ಶ್‌ದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲು ಬಯಸುತ್ತೇನೆ. ಕೊನೆಯ ಎರಡು ಪಂದ್ಯಗಳನ್ನು ಉತ್ತಮವಾಗಿ ಹೊಂದಿಲ್ಲದಿರಬಹುದು, ಆದರೆ ಅವರು ಭವಿಷ್ಯವಾಗಿದ್ದಾರೆ. ಸದ್ಯ ತಂಡದಲ್ಲಿರುವ ಏಕೈಕ ಎಡಗೈ ಬೌಲರ್ ಅರ್ಶ್‌ದೀಪ್. ಹೊಸ ಚೆಂಡಿನೊಂದಿಗೆ ಅದ್ಭುತವಾಗಿ ಕಾಣಿಸುತ್ತಾರೆ. ಆದರೆ, ಭಾರತ ತಂಡವು ಅವರನ್ನು ಹೊಸ ಚೆಂಡಿನೊಂದಿಗೆ ಬಳಸದೆ ಹಳೆಯ ಚೆಂಡಿನೊಂದಿಗೆ ಬಳಸಲು ಪ್ರಾರಂಭಿಸಿತು," ಎಂದು ಜಡೇಜಾ ಬೇಸರ ವ್ಯಕ್ತಪಡಿಸಿದರು.

ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡ ಭಾರತ

ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡ ಭಾರತ

ಇನ್ನು ವಿಶ್ವಕಪ್‌ ತಂಡದಲ್ಲಿ ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಾಹಲ್ ಭಾರತಕ್ಕೆ ಉಳಿದ ಬೌಲಿಂಗ್ ದಾಳಿಯನ್ನು ನಿಭಾಯಿಸುತ್ತಾರೆ ಎಂದು ಅಜಯ್ ಜಡೇಜಾ ಹೇಳಿದರು.

ರಾಜ್‌ಕೋಟ್‌ನಲ್ಲಿ ಶ್ರೀಲಂಕಾವನ್ನು 91 ರನ್‌ಗಳಿಂದ ಸೋಲಿಸಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ಮಂಗಳವಾರ (ಜನವರಿ 10) ಗುವಾಹಟಿಯಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿದೆ.

Story first published: Sunday, January 8, 2023, 15:17 [IST]
Other articles published on Jan 8, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X