ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ : 24ರನ್ನಿಗೆ ಆಲೌಟ್ ಆಗಿ ದಾಖಲೆ ಬರೆದ ಒಮನ್

Oman bowled out for just 24 against Scotland in a One-Day game

ಬೆಂಗಳೂರು, ಫೆಬ್ರವರಿ 19: ನಾಲ್ಕು ರಾಷ್ಟ್ರಗಳ ಟಿ20ಐ ಟೂರ್ನಮೆಂಟ್ ಗೆದ್ದ ಸ್ಕಾಟ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಆಡುತ್ತಿರುವ ಒಮನ್ ಮೊದಲ ಪಂದ್ಯದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿ ದಾಖಲೆ ಬರೆದಿದೆ.

ಅಲ್ ಅಮಿರಾತ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯ ಕೇವಲ 110 ನಿಮಿಷದಲ್ಲಿ ಮುಗಿದು ಹೋಯಿತು. ಸ್ಕಾಟ್ಲೆಂಡ್​ ತಂಡವು ಕೇವಲ 3.2 ಓವರ್​ಗಳಲ್ಲಿ ವಿಕೆಟ್​ನಷ್ಟವಿಲ್ಲದೆ ಗೆಲುವಿನ ಗುರಿ ಮುಟ್ಟಿತು.

ಭಾರತ vs ಆಸ್ಟ್ರೇಲಿಯಾ: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಮಾಹಿತಿ ಭಾರತ vs ಆಸ್ಟ್ರೇಲಿಯಾ: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಮಾಹಿತಿ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಒಮನ್ 17.1 ಓವರ್​ಗಳಲ್ಲಿ ಕೇವಲ 24 ರನ್​ಗಳಿಗೆ ಆಲೌಟ್​ಆಗಿತ್ತು. ಒಮನ್ ಪರ ಕನ್ವರ್​ಅಲಿ(15) ಬಿಟ್ಟರೆ ಉಳಿದ ಎಲ್ಲ ಆಟಗಾರರು ಎರಡಂಕಿ ಮೊತ್ತ ದಾಟಲಿಲ್ಲ. 5 ಆಟಗಾರರು ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು.

ಒಟ್ಟಾರೆ, ಓಮನ್​ತಂಡದ ಆಟಗಾರರಿಂದ ಕೇವಲ ಒಂದೇ ಬೌಂಡರಿ ದಾಖಲಾಯಿತು. ಸ್ಕಾಟ್ಲೆಂಡ್ ಪರ ಅಲಾಸ್​ಡೈರ್ ಇವಾನ್ಸ್ 2, ರುಯ್​ಡ್ರಿ ಸ್ಮಿತ್​ 4, ಸ್ಕಾಟ್ಲೆಂಡ್ ಪರ ಆಡ್ರಿಯಾನ್​ನೈಲ್ 4 ವಿಕೆಟ್​ಪಡೆದು ಓಮನ್​ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರು.

25 ರನ್​ಗಳ ಗುರಿ ಪಡೆದ ಸ್ಕಾಟ್ಲೆಂಡ್​3.2 ಓವರ್​ಗಳಲ್ಲಿ ಪಂದ್ಯ ಗೆದ್ದುಕೊಂಡಿತು. 100 ಓವರ್​ಗಳು ನಡೆಯಬೇಕಿದ್ದ ಈ ಪಂದ್ಯ ಕೇವಲ 20.4 ಓವರ್​ಗಳಲ್ಲಿ ಮುಗಿಯಿತು.

ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಇದು ನಾಲ್ಕನೇ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 2007ರಲ್ಲಿ ವೆಸ್ಟ್​ ಇಂಡೀಸ್​ಅಂಡರ್ 19 ತಂಡ ಕೇವಲ 18 ರನ್​ಗೆ ಆಲೌಟ್ ಆಗಿತ್ತು.

ಲಿಸ್ಟ್ ಎ ಕ್ರಿಕೆಟ್ ನಲ್ಲಿ ಅತ್ಯಂತ ಕಡಿಮೆ ಮೊತ್ತ
ಮೊತ್ತ-ತಂಡ-ವಿರುದ್ಧ ತಂಡ-ಯಾವಾಗ
18- ವೆಸ್ಟ್ ಇಂಡೀಸ್ ಅಂಡರ್ 19-ಬಾರ್ಬಡಸ್- 2007
19-ಸಾರಸೆನ್ಸ್ ಎಸ್ ಸಿ-ಕೋಲ್ಟ್ಸ್ ಸಿಸಿ-2012
23-ಮಿಡ್ಲ್ ಸೆಕ್ಸ್-ಯಾರ್ಕ್ ಶೈರ್-1974
24-ಒಮನ್-ಸ್ಕಾಟ್ಲೆಂಡ್-2019
30-ಸಿಡಿ-ಸೈಲ್ಹೆಟ್ ಡಿವಿಷನ್-2002
31-ಬಾರ್ಡರ್- ಎಸ್ ಡಬ್ಲೂ -2007
34-ಸೌರಾಷ್ಟ್ರ-ಮುಂಬೈ-2000
35-ರಾಜಸ್ಥಾನ-ರೈಲ್ವೆಸ್-2014

Story first published: Tuesday, February 19, 2019, 21:01 [IST]
Other articles published on Feb 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X