Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ಕ್ರಿಕೆಟಿಗರಿನ್ನು ಬರೀ 4 ವಿದೇಶಿ ಲೀಗ್‌ಗಳಲ್ಲಷ್ಟೇ ಪಾಲ್ಗೊಳ್ಳಬಹುದು

Pakistan cricketers allowed to participate in maximum 4 leagues

ಇಸ್ಲಮಾಬಾದ್, ಮಾರ್ಚ್ 28: ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ (ಪಿಸಿಬಿ) ನೂತನ 'ನೋ ಅಬ್ಜೆಕ್ಷನ್ ಸರ್ಟಿಫಿಕೇಟ್'-ಎನ್‌ಒಸಿ (ಆಕ್ಷೇಪಣೆ ಇಲ್ಲ ಪ್ರಮಾಣಪತ್ರ) ಜಾರಿ ಮಾಡಿದೆ. ಇದರನ್ವಯ ಬೋರ್ಡ್‌ನ ಗುತ್ತಿಗೆಯಲ್ಲಿರುವ ಆಟಗಾರರು ಇನ್ಮುಂದೆ ಪಾಕಿಸ್ತಾನ್ ಸೂಪರ್ ಲೀಗ್ ಕೂಡ (ಪಿಎಸ್‌ಎಲ್) ಸೇರಿ ಬರೀ 4 ವಿದೇಶಿ ಟೂರ್ನಿಗಳಲ್ಲಷ್ಟೇ ಪಾಲ್ಗೊಳ್ಳಬಹುದುದಾಗಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಪಿಸಿಬಿ, ಎನ್‌ಒಸಿ ಕೋರಿಕೆಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಕಾರ್ಯಾಚರಣೆಗಳ ವಿಭಾಗ ಮತ್ತು ರಾಷ್ಟ್ರೀಯ ಮುಖ್ಯ ಕೋಚ್‌ಗಳ ಮುಖಾಂತರ ಬರಬೇಕೆಂದು ತಿಳಿಸಿದೆ. ಯಾಕೆಂದರೆ ಆಟಗಾರರ ಕೆಲಸದ ಹೊರೆ ಮತ್ತು ಅಂತಾರಾಷ್ಟ್ರೀಯ ಕಮಿಟ್‌ಮೆಂಟ್‌ಗಳು ಅವರಿಗೆ ಗೊತ್ತಿರುತ್ತದೆ ಎಂದು ಪಿಸಿಬಿ ಹೇಳಿಕೆಯಲ್ಲಿ ವಿವರಿಸಿದೆ.

'ವಿಶ್ವದಲ್ಲಿ ಎನ್‌ಒಸಿ ನಿಯಮಗಳು ಇರುವಂತೆ ಇಲ್ಲೂ ಕೂಡ ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕೋರಿಕೆಗಳಿಗೆ ಅಂತಿಮ ಹಂತದಲ್ಲಿ ಅನುಮೋದನೆ ನೀಡುವ ಅಧಿಕಾರವಿರುತ್ತದೆ,' ಎಂದು ಸಿಬಿಬಿ ಹೇಳಿಕೆಯಲ್ಲಿ ಬರೆದುಕೊಂಡಿದೆ.

ಕ್ರಿಕೆಟ್ ಅಸೋಸಿಯೇಶನ್‌ಗಳ ಅಡಿಯಲ್ಲಿರುವ ದೇಸಿ ಆಟಗಾರರು ನೇರವಾಗಿ ಅವರವರ ಅಸೋಸಿಯೇಶನ್‌ಗಳ ಮೂಲಕ ಎನ್‌ಸಿಒಗೆ ಅನುಮೋದನೆ ಪಡೆದುಕೊಳ್ಳಬೇಕೆಂದೂ ಪಿಸಿಬಿ ತಿಳಿಸಿದೆ. ನೂತನ ಪಾಲಿಸಿ ಹೊಂದಿಕೊಳ್ಳಬಲ್ಲ, ಸಮತೋಲಿತ ಪಾಲಿಸಿ ಎಂದು ಪಿಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ.

Story first published: Saturday, March 28, 2020, 12:02 [IST]
Other articles published on Mar 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+