ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನವೇ ಪಾಕ್‌ಗೆ ದೊಡ್ಡ ಆಘಾತ; ಹೀಗಾದರೆ ಗೆಲುವು ಕಷ್ಟ!

Pakistan Players Mohammad Rizwan, Shoaib Malik Doubtful For T20 Semi Final Against Australia

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಸೋಲಿಲ್ಲದೆ ಮೆರೆಯುತ್ತಿರುವ ತಂಡವೆಂದರೆ ಅದು ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಗ್ರೂಪ್‌ 2ರಲ್ಲಿದ್ದ ಪಾಕಿಸ್ತಾನ ತನ್ನ ಗುಂಪಿನಲ್ಲಿದ್ದ ಉಳಿದ 5 ತಂಡಗಳ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸಿದೆ.

ಟಿ20 ವಿಶ್ವಕಪ್: 5 ವರ್ಷಗಳಿಂದ ಮುರಿಯಲಾಗದಿದ್ದ ಅತಿಹೆಚ್ಚು ವೀಕ್ಷಣೆಯ ದಾಖಲೆ ಮುರಿದಿದೆ ಈ ಒಂದು ಪಂದ್ಯಟಿ20 ವಿಶ್ವಕಪ್: 5 ವರ್ಷಗಳಿಂದ ಮುರಿಯಲಾಗದಿದ್ದ ಅತಿಹೆಚ್ಚು ವೀಕ್ಷಣೆಯ ದಾಖಲೆ ಮುರಿದಿದೆ ಈ ಒಂದು ಪಂದ್ಯ

ಅಕ್ಟೋಬರ್ 24ರಂದು ಭಾರತದ ವಿರುದ್ಧದ ಪಂದ್ಯದಲ್ಲಿ ಸೆಣಸಾಡುವ ಮೂಲಕ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನಾಡಿದ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್‍ಗಳ ಅಮೋಘ ಜಯವನ್ನು ಸಾಧಿಸಿತ್ತು. ಈ ಮೂಲಕ ವಿಶ್ವಕಪ್ ಹಣಾಹಣಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪಾಕಿಸ್ತಾನ ಸೋಲಿಸಿದ ಸಾಧನೆಯನ್ನು ಮಾಡಿತ್ತು. ಹೀಗೆ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿಯೇ ಈ ಸಾಧನೆ ಮಾಡುವುದರ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡ ಪಾಕಿಸ್ತಾನ ನಂತರ ನ್ಯೂಜಿಲೆಂಡ್ ರೀತಿಯ ಬಲಿಷ್ಠ ತಂಡದ ವಿರುದ್ಧ ಕೂಡ ಭರ್ಜರಿ ಜಯವನ್ನು ಸಾಧಿಸಿತು.

ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಕೊಹ್ಲಿ ನೆನಪಿಸಿಕೊಂಡ ವೆಂಕಟೇಶ್ ಐಯ್ಯರ್ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಕೊಹ್ಲಿ ನೆನಪಿಸಿಕೊಂಡ ವೆಂಕಟೇಶ್ ಐಯ್ಯರ್

ನಂತರ ಅಫ್ಘಾನಿಸ್ತಾನ, ನಮೀಬಿಯ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಪಾಕಿಸ್ತಾನ ಸೂಪರ್ 12 ಹಂತದಲ್ಲಿ ತಾನು ಸೆಣಸಾಡಿದ ಎಲ್ಲಾ ಪಂದ್ಯಗಳಲ್ಲಿಯೂ ಕೂಡ ಗೆದ್ದು ಬೀಗಿತು. ಹೀಗೆ ಸೆಮಿಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿರುವ ಪಾಕಿಸ್ತಾನ ಈ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನವೆಂಬರ್‌ 11ರಂದು ಸೆಣಸಾಟ ನಡೆಸುತ್ತಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡಕ್ಕೆ ಆಘಾತವಾಗಿದ್ದು ತಂಡದ ಇಬ್ಬರು ಬಲಿಷ್ಠ ಆಟಗಾರರು ಶೀತ ಜ್ವರದ ಕಾರಣದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ. ಈ ವಿಷಯದ ಕುರಿತಾದ ಹೆಚ್ಚಿನ ಮಾಹಿತಿ ಮುಂದೆ ಇದೆ ಓದಿ..

ಶೀತಜ್ವರದಿಂದ ಬಳಲುತ್ತಿದ್ದಾರೆ ಮೊಹಮ್ಮದ್ ರಿಜ್ವಾನ್ ಮತ್ತು ಶೋಯೆಬ್ ಮಲಿಕ್

ಶೀತಜ್ವರದಿಂದ ಬಳಲುತ್ತಿದ್ದಾರೆ ಮೊಹಮ್ಮದ್ ರಿಜ್ವಾನ್ ಮತ್ತು ಶೋಯೆಬ್ ಮಲಿಕ್

ಪಾಕಿಸ್ತಾನದ ಪರ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿರುವ ಆಟಗಾರರ ಪೈಕಿ ಪ್ರಮುಖರೆನಿಸಿಕೊಂಡಿರುವ ಮೊಹಮ್ಮದ್ ರಿಜ್ವಾನ್ ಮತ್ತು ಶೋಯಬ್ ಮಲಿಕ್ ಶೀತ ಜ್ವರದಿಂದ ಬಳಲುತ್ತಿದ್ದು ನವೆಂಬರ್ 11ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಅಭ್ಯಾಸದಲ್ಲಿಯೂ ಭಾಗವಹಿಸಿಲ್ಲ ಇಬ್ಬರು ಆಟಗಾರರು

ಅಭ್ಯಾಸದಲ್ಲಿಯೂ ಭಾಗವಹಿಸಿಲ್ಲ ಇಬ್ಬರು ಆಟಗಾರರು

ಪಾಕಿಸ್ತಾನದ ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಶೋಯೆಬ್ ಮಲಿಕ್ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಬುಧವಾರ ನಡೆದ ಅಭ್ಯಾಸದಲ್ಲಿಯೂ ಕೂಡ ಭಾಗವಹಿಸಿರಲಿಲ್ಲ. ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರಿಗೂ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು ಇಬ್ಬರ ವರದಿಯೂ ನೆಗೆಟಿವ್ ಬಂದಿದೆ. ಆದರೂ ಸಹ ಇಬ್ಬರಿಗೂ ಒಂದೆರಡು ದಿನಗಳ ಅವಧಿಯ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಈ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಈ ಇಬ್ಬರು ಇಲ್ಲದೇ ಪಾಕಿಸ್ತಾನಕ್ಕೆ ಗೆಲುವು ಸುಲಭವಲ್ಲ!

ಈ ಇಬ್ಬರು ಇಲ್ಲದೇ ಪಾಕಿಸ್ತಾನಕ್ಕೆ ಗೆಲುವು ಸುಲಭವಲ್ಲ!

ಮೊದಲೇ ಹೇಳಿದಂತೆ ಮೊಹಮ್ಮದ್ ರಿಜ್ವಾನ್ ಮತ್ತು ಶೋಯಬ್ ಮಲಿಕ್ ಟೂರ್ನಿಯಲ್ಲಿ ಪಾಕಿಸ್ತಾನದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿರುವ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನ ತಂಡಕ್ಕೆ ಅತ್ಯುತ್ತಮ ಆರಂಭ ಮಾಡಿಕೊಡಬಲ್ಲ ಪ್ರತಿಭಾವಂತ ಆಟಗಾರ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಶೋಯೆಬ್ ಮಲಿಕ್ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಪಾಕಿಸ್ತಾನ ಯಶಸ್ವಿಯಾಗಿ ಚೇಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಶೋಯಬ್ ಮಲಿಕ್ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಪಾಕ್ ಆಟಗಾರರ ಪರ ವೇಗದ ಅರ್ಧಶತಕವನ್ನು ಬಾರಿಸಿದ್ದರು. ಹೀಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಈ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾದರೆ ಪಾಕಿಸ್ತಾನ ಆಸ್ಟ್ರೇಲಿಯಾ ತಂಡವನ್ನು ಮಣಿಸುವಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಹೆಚ್ಚಿವೆ.

ಬದಲಿ ಆಟಗಾರರಾಗಿ ಇವರು ಕಣಕ್ಕಿಳಿಯಬಹುದು

ಬದಲಿ ಆಟಗಾರರಾಗಿ ಇವರು ಕಣಕ್ಕಿಳಿಯಬಹುದು

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಪಾಕಿಸ್ತಾನದ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಶೋಯಬ್ ಮಲಿಕ್ ಅಲಭ್ಯರಾದರೆ ಬದಲಿ ಆಟಗಾರನಾಗಿ ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಹೈದರ್ ಅಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Story first published: Thursday, November 11, 2021, 11:56 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X