ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡ್ತೀರಾ ಎನ್ನುವ ಪತ್ರಕರ್ತನ ಪ್ರಶ್ನೆಗೆ ಬಾಬರ್ ಅಜಮ್‌ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Pakistan Skipper Babar Azam Felt Uncomfortable After Journalist Questions About IPL

ಒಂದು ತಿಂಗಳ ಕಾಲ ಸಾಕಷ್ಟು ರೋಚಕ ಹಣಾಹಣಿಯಿಂದ ಕೂಡಿದ್ದ ಟಿ20 ವಿಶ್ವಕಪ್‌ 2022ರ ಆವೃತ್ತಿಗೆ ಅಂತಿಮ ತೆರೆ ಬಿದ್ದಿದೆ. ಹಲವು ಏಳು ಬೀಳುಗಳ ನಂತರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಫೈನಲ್‌ ಪ್ರವೇಶಿಸಿದವು, ಫೈನಲ್‌ನಲ್ಲಿ ಇಂಗ್ಲೆಂಡ್ ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 137 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಗುರಿ ತಲುಪಿ ಇತಿಹಾಸ ಬರೆಯಿತು.

Eng vs Pak: ಫೈನಲ್ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತEng vs Pak: ಫೈನಲ್ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ

ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಫೈನಲ್ ಹಣಾಹಣಿಗೆ ಮುನ್ನ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ತಂಡದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲು ವರದಿಗಾರರ ಜೊತೆ ಸಂವಾದ ನಡೆಸಿದರು. ಇದೇ ವೇಳೆ ವರದಿಗಾರನೊಬ್ಬ ಕೇಳಿದ ಪ್ರಶ್ನೆಯಿಂದಾಗಿ ಬಾಬರ್ ಅಜಮ್ ಗೊಂದಲಕ್ಕೊಳಗಾದರು. ಪಾಕಿಸ್ತಾನದ ಮಾಧ್ಯಮ ವ್ಯವಸ್ಥಾಪಕರು ಮಧ್ಯ ಪ್ರವೇಶಿಸಿ ಉತ್ತರ ನೀಡಬೇಕಾಯಿತು.

ಪತ್ರಿಕಾಗೋಷ್ಠಿಯಲ್ಲಿ, ಬಾಬರ್ ಅಜಮ್‌ಗೆ ನಿಮ್ಮ ಆಟದ ಪ್ರಯೋಜನ ಪಡೆಯಲು ಭವಿಷ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಭಾಗವಹಿಸಲು ಯೋಚಿಸುತ್ತಿದ್ದೀರಾ? ಎಂದು ಪ್ರಶ್ನೆ ಮಾಡಲಾಯಿತು.

ಪ್ರಶ್ನೆಯಿಂದ ಕಸಿವಿಸಿಕೊಂಡ ಬಾಬರ್ ಅಜಮ್

ಪ್ರಶ್ನೆಯಿಂದ ಕಸಿವಿಸಿಕೊಂಡ ಬಾಬರ್ ಅಜಮ್

"ಐಪಿಎಲ್ ಆಡುವ ಪ್ರಯೋಜನಗಳ ಬಗ್ಗೆ ಮಾತನಾಡಿ, ಅದು ನಿಮಗೆ ಮತ್ತು ನಿಮ್ಮ ತಂಡಕ್ಕೆ ಸಹಾಯ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಐಪಿಎಲ್ ಆಡುವ ಬಗ್ಗೆ ನಿಮಗೆ ಭರವಸೆ ಇದೆಯೇ?" ಎಂದು ಪತ್ರಕರ್ತ ಕೇಳಿದರು.

ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗೆ ಉತ್ತರ ಕೊಡಲಾಗದೆ ಬಾಬರ್ ಅಜಮ್ ಕೆಲಕಾಲ ಗೊಂದಲಕ್ಕೊಳಗಾದರು. ನಂತರ, ತಮ್ಮ ತಂಡದ ಮಾಧ್ಯಮ ವ್ಯವಸ್ಥಾಪಕರ ಕಡೆ ನೋಡಿದಾಗ ಅವರು ಮಧ್ಯಪ್ರವೇಶಿಸಿ ವಿಶ್ವಕಪ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳುವಂತೆ ಮನವಿ ಮಾಡಿದರು.

BWF ವರ್ಲ್ಡ್ ಟೂರ್ ಫೈನಲ್‌: ಗಾಯದ ಸಮಸ್ಯೆಯಿಂದ ಹಿಂದೆ ಸರಿದ ಪಿವಿ ಸಿಂಧು

ಐಪಿಎಲ್‌ನಲ್ಲಿ ಆಡಲು ಪಾಕ್ ಆಟಗಾರರಿಗೆ ಅನುಮತಿ ಇಲ್ಲ

ಐಪಿಎಲ್‌ನಲ್ಲಿ ಆಡಲು ಪಾಕ್ ಆಟಗಾರರಿಗೆ ಅನುಮತಿ ಇಲ್ಲ

2009ರ ಸೀಸನ್ ನಂತರ ಪಾಕಿಸ್ತಾನ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಎರಡೂ ದೇಶಗಳ ರಾಜಕೀಯ ಪರಿಸ್ಥಿತಿಗಳ ಕಾರಣ ಅವರನ್ನು ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ನಿರಾಕರಿಸಿತು. ಅದಕ್ಕೂ ಮುನ್ನ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡಿದ್ದರು.

ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದರೂ ಕೂಡ ಸದ್ಯದ ರಾಜಕೀಯ ಪರಿಸ್ಥಿತಿಗಳು ಅದಕ್ಕೆ ಅನುಮತಿ ನೀಡುವುದು ಕಷ್ಟ. ಆದರೂ, ಪಾಕಿಸ್ತಾನದ ಆಟಗಾರರು ವಿಶ್ವದ ಇತರ ಲೀಗ್‌ಗಳಲ್ಲಿ ಆಡುತ್ತಿದ್ದಾರೆ.

ಭಾರತದ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಇಲ್ಲ

ಭಾರತದ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಇಲ್ಲ

ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡದ ಬಿಸಿಸಿಐ, ಭಾರತೀಯ ಆಟಗಾರರು ಕೂಡ ವಿದೇಶಿ ಲೀಗ್‌ಗಳಲ್ಲಿ ಆಡುವುದಕ್ಕೆ ನಿರ್ಬಂಧಿಸಿದೆ. ಸೆಮಿಫೈನಲ್ ಬಳಿಕ ಮಾತನಾಡಿದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದು ಇಂಗ್ಲೆಂಡ್ ಆಟಗಾರರಿಗೆ ಸಹಾಯಕವಾಯಿತು, ಭಾರತ ತಂಡದ ಆಟಗಾರರು ಕೂಡ ವಿದೇಶಿ ಲೀಗ್‌ಗಳಲ್ಲಿ ಆಡುವ ಬಗ್ಗೆ ಬಿಸಿಸಿಐ ಚಿಂತಿಸಬೇಕು ಎಂದು ಹೇಳಿದರು.

ರಾಹುಲ್ ದ್ರಾವಿಡ್ ಮಾತ್ರವಲ್ಲ, ಭಾರತದ ಹಲವು ಮಾಜಿ ಕ್ರಿಕೆಟಿಗರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ವಿದೇಶಿ ಆಟಗಾರರು, ಐಪಿಎಲ್‌ನಲ್ಲಿ ಆಡಿದ್ದು ಉತ್ತಮ ಪ್ರದರ್ಶನ ನೀಡಲು ಸಹಕಾತರಿಯಾಯಿತು ಎಂದು ಹೇಳಿಕೆ ನೀಡಿದ್ದಾರೆ.

Story first published: Monday, November 14, 2022, 10:41 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X