ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್-ಹಾರ್ದಿಕ್ ಪ್ರಹಸನ; ಎಲ್ಲೆ ಮೀರಿದೆ, ಸ್ಸಾರಿ ಎಂದ ಕರಣ್

ಹಾರ್ದಿಕ್ ಪಾಂಡ್ಯ, ರಾಹುಲ್ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ ಕರಣ್ ಜೋಹರ್ | Oneindia Kannada
Pandya-Rahul Saga: Karan Johar apologises, admits conversation “may have crossed boundaries”

ಬೆಂಗಳೂರು, ಜನವರಿ 23: ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಹಿಳೆಯರ ಬಗ್ಗೆ ಕ್ರಿಕೆಟರ್ ಹಾರ್ದಿಕ್​ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಅವರು ನೀಡಿದ ಹೇಳಿಕೆಗಳು ವಿವಾದ ಹುಟ್ಟಿಹಾಕಿದ್ದಲ್ಲದೆ ಇಬ್ಬರ ವೃತ್ತಿ ಬದುಕಿಗೂ ಮಾರಕವಾಗಿ ಪರಿಣಮಿಸಿದೆ. ಇಬ್ಬರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ ಕೂಡಾ. ಇಷ್ಟೆಲ್ಲ ರಾದ್ಧಾಂತವಾದರೂ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದ ಶೋ ನಿರೂಪಕ ಕರಣ್ ಜೋಹರ್ ಗೆ ಕೊನೆಗೂ ತಮ್ಮ ತಪ್ಪಿನ ಅರಿವಾಗಿದೆ.

ಕರಣ್ ಜೋಹರ್ ಅವರು ಈ ಶೋನಲ್ಲಿ ನಡೆದ ಮಾತುಕತೆ ಎಲ್ಲೆ ಮೀರಿದ್ದರೆ ಕ್ಷಮಿಸಿ ಎಂದಿದ್ದಾರೆ. ಈ ಘಟನೆಯಿಂದಾದ ಪರಿಣಾಮ ಕೆಲ ದಿನಗಳ ಕಾಲ ನಿದ್ದೆ ಮಾಡಿಲ್ಲ. ಘಟಿಸಿ ಹೋದ ತಪ್ಪನ್ನು ತಿದ್ದಲು ಸಾಧ್ಯವಿಲ್ಲ. ಈ ಎಪಿಸೋಡಿನಲ್ಲಿ ಆದ ಪ್ರಮಾದದ ಹೊಣೆ ನಾನೇ ಹೊರುತ್ತೇನೆ. ಇದು ನನ್ನ ವೇದಿಕೆ ಇಲ್ಲಿ ನಡೆದಿದ್ದಕ್ಕೆ ನಾನೆ ಹೊಣೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

'ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ 'ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ

ನನ್ನ ಶೋಗಳಿಗೆ ಬಂದ ಅತಿಥಿಗಳಿಗೆ ಈ ರೀತಿ ಆಗಿರುವುದು ದುಃಖ ತರಿಸಿದೆ. ಇಬ್ಬರು ಈಗಾಗಲೇ ಶಿಕ್ಷೆಯಾಗಿದೆ. ನಾನು ದೀಪಿಕಾ ಹಾಗೂ ಆಲಿಯಾ ಬಂದಿದ್ದಾಗಲೂ ಇಂಥ ಪ್ರಶ್ನೆಗಳನ್ನು ಕೇಳಿದ್ದೆ. ಆದರೆ, ಉತ್ತರದ ಮೇಲೆ ನನ್ನ ನಿಯಂತ್ರಣವಿರುವುದಿಲ್ಲ. ನನ್ನ ಶೋನಲ್ಲಿ 16 ರಿಂದ 17 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ತನಕ ಯಾರಿಗೂ ಅಗೌರವ ತರುವಂಥ ಘಟನೆ ನಡೆದಿಲ್ಲ ಎಂದರು.

ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ! ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ!

ನಾವು ಟಿಆರ್ ಪಿಗಾಗಿ ಯಾವುದೆ ಗಿಮಿಕ್ ಮಾಡಿಲ್ಲ. ಇದು ಸಹಜವಾಗಿ ಅವರಿಂದ ಬಂದ ಉತ್ತರವಾಗಿತ್ತು. ಶೋ ನಂತರ ಇದು ತಪ್ಪು ಎಂದು ಯಾರೂ ಪ್ರಶ್ನಿಸಲಿಲ್ಲ. ಆದರೆ, ತಪ್ಪಿನ ಅರಿವಾಗುವಷ್ಟರಲ್ಲಿ ಪರಿಸ್ಥಿತಿ ನನ್ನ ಕೈ ಮೀರಿತ್ತು ಎಂದಿದ್ದಾರೆ. ಸದ್ಯ ಈ ಎಪಿಸೋಡನ್ನು (12ನೇ ಕಂತು) ಹಾಟ್ ಸ್ಟಾರ್ ನಿಂದ ತೆಗೆದು ಹಾಕಲಾಗಿದೆ.

ಬಾಲಿವುಡ್​ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರ ​ ನಡೆಸಿಕೊಡುವ "ಕಾಫಿ ವಿತ್ ಕರಣ್​" ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪಾಂಡ್ಯ ಮತ್ತು ರಾಹುಲ್,​ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದವು, ಬಿಸಿಸಿಐ ಕೂಡಾ ಇಬ್ಬರನ್ನು ಏಕದಿನ ಪಂದ್ಯ ಆಡದಂತೆ ನಿಷೇಧ ಹೇರಿದೆ. ನ್ಯೂಜಿಲೆಂಡ್ ಸರಣಿಗೂ ಇಬ್ಬರು ಆಯ್ಕೆಯಾಗಿಲ್ಲ.

Story first published: Wednesday, January 23, 2019, 17:47 [IST]
Other articles published on Jan 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X