ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಎಂದು ಭಾರತೀಯನ ಹೆಸರು ಹೇಳಿದ ನಂಬರ್ 1 ಬೌಲರ್

Pat Cummins Picks Cheteshwar Pujara As Toughest Batsman To Bowl In Test

ಟೆಸ್ಟ್ ಕ್ರಿಕೆಟ್‌ನಲ್ಲಿ ಆತನ ವಿಕೆಟ್ ಪಡೆಯುವುದು ಅತ್ಯಂತ ಕಠಿಣ. ಟೆಸ್ಟ್ ಕ್ರಿಕೆಟ್‌ನಲ್ಲಿ ಆತನಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ದಾಂಡಿಗನ ಹೆಸರನ್ನು ಹೇಳಿದ್ದಾರೆ ಆಸ್ಟ್ರೇಲಿಯಾದ ವೇಗಿ ವಿಶ್ವದ ನಂಬರ್ 1 ಬೌಲರ್ ಪ್ಯಾಟ್ ಕಮ್ಮಿನ್ಸ್.

ಚಾಹಲ್‌ನಿಂದ ಬೇಸತ್ತು ಹೋಗಿದ್ದೇವೆ ಎಂದು ಅಳಲನ್ನು ತೋಡಿಕೊಂಡ ಕ್ರಿಸ್ ಗೇಲ್!ಚಾಹಲ್‌ನಿಂದ ಬೇಸತ್ತು ಹೋಗಿದ್ದೇವೆ ಎಂದು ಅಳಲನ್ನು ತೋಡಿಕೊಂಡ ಕ್ರಿಸ್ ಗೇಲ್!

ಆ ಕ್ರಿಕೆಟಿಗ ನಮಗೆ ನಿಜಕ್ಕೂ ದೊಡ್ಡ ಸವಾಲಾಗಿದ್ದ. ಆತನನ್ನು ಔಟ್ ಮಾಡುವುದು ಹೇಗೆ ಎಂದು ನಾವೆಲ್ಲಾ ಸಾಕಷ್ಟು ಚಿಂತಿತರಾಗಿದ್ದೆವು. ಕೆಲವು ಬೌಲರ್‌ಗಳಂತೂ ಆತನ ಬ್ಯಾಟಿಂಗ್‌ನಿಂದಿದ್ದಾಗಿ ಹತಾಶೆಗೂ ಒಳಗಾಗಿದ್ದರು ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ವಿಶ್ವದ ನಂಬರ್ 1 ಬೌಲರನ್ನೂ ಈ ಪ್ರಮಾಣದಲ್ಲಿ ಚಿಂತಿಸುವಂತೆ ಮಾಡಿದ ಆ ಬ್ಯಾಟ್ಸ್‌ಮನ್ ಯಾರು ಎನ್ನುವುದನ್ನು ಮುಂದೆ ಓದಿ..

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ

ಪ್ಯಾಟ್ ಕಮ್ಮಿನ್ಸ್ ಹೇಳಿದ ಆ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮೂರನೇ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರ ಬಗ್ಗೆ. 2018-19ರ ಐತಿಹಾಸಿಕ ಸರಣಿ ಜಯದಲ್ಲಿ ಪೂಜಾರ ಮಹತ್ವದ ಪಾತ್ರವನ್ನು ವಹಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ಪ್ರಶ್ನೋತ್ತರದ ವೇಳೆ ಪ್ಯಾಟ್ ಕಮ್ಮಿನ್ಸ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾಲ್ ಮಾಡಲು ಕಠಿಣ ಎನಿಸುವ ಬ್ಯಾಟ್‌ಮನ್ ಯಾರು ಎಂಬ ಪ್ರಶ್ನೆ ಕೇಳಿದಾಗ ಪೂಜಾರ ಹೆಸರನ್ನು ಹೇಳಿದ್ದಾರೆ ಕಮ್ಮಿನ್ಸ್.

ಬೆನ್ನು ನೋವು ಬರಿಸುವಂತಾ ಆಟಗಾರ

ಬೆನ್ನು ನೋವು ಬರಿಸುವಂತಾ ಆಟಗಾರ

ಬೌಲಿಂಗ್ ಮಾಡಲು ಕಠಿಣವೆನಿಸುವ ತುಂಬಾ ಜನ ಕ್ರಿಕೆಟಿಗರು ಇದ್ದಾರೆ. ಆದರೆ ನಾನು ಒಬ್ಬ ವಿಭಿನ್ನ ಆಟಗಾರನ ಹೆಸರನ್ನು ತೆಗದುಕೊಳ್ಳಲು ಬಯಸುತ್ತೇನೆ. ಆತ ಟೀಮ್ ಇಂಡಿಯಾದ ಪೂಜಾರಾ, ಬೌಲಿಂಗ್ ಮಾಡಿ ಬೆನ್ನು ನೋವು ಬರಿಸುವಂತಾ ಆಟಗಾರ ಆತ ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಬೌಲರ್‌ಗಳು ಹತಾಶರಾಗಿದ್ದರು

ಆಸ್ಟ್ರೇಲಿಯಾ ಬೌಲರ್‌ಗಳು ಹತಾಶರಾಗಿದ್ದರು

2018ರ ಟೆಸ್ಟ್ ಸರಣಿಯಲ್ಲಿ ಪೂಜಾರ ವಿಕೆಟ್ ಪಡೆಯಲು ಆಸ್ಟ್ರೇಲಿಯಾಗೆ ಎಷ್ಟು ಕಷ್ಟವಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಕಮ್ಮಿನ್ಸ್ ನೆನಪಿಸಿಕೊಂಡಿದ್ದಾರೆ. ಕಮ್ಮಿನ್ಸ್ ತಂಡದ ಸಹ ಆಟಗಾರರಾದ ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಸಲ್‌ವುಡ್ ಪೂಜಾರ ಬ್ಯಾಟಿಂಗ್ ಮಧ್ಯದಲ್ಲಿದ್ದಾಗ ಸರಣಿಯಲ್ಲಿ ಅನುಭವಿಸಿದ ಹತಾಶೆಯ ಬಗ್ಗೆಯೂ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ಮತ್ತು ಭಾರತದ ವ್ಯತ್ಯಾಸ ಪೂಜಾರ

ಆಸ್ಟ್ರೇಲಿಯಾ ಮತ್ತು ಭಾರತದ ವ್ಯತ್ಯಾಸ ಪೂಜಾರ

ಆಸ್ಟ್ರೇಲಿಯಾ ನೆಲದಲ್ಲಿ ಮೊತ್ತಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಆಟಗಾರ ಪಡೆದುಕೊಂಡರು. ಸರಣಿಯಲ್ಲಿ ಪೂಜಾರ ಆಡಿದ ಆಟಕ್ಕೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾದ ನಡುವಿನ ವ್ಯತ್ಯಾಸವೇನೆಂದರೆ ಅದು ಚೇತೇಶ್ವರ ಪೂಜಾರ ಎಂಬ ಶ್ಲಾಘನೆಯೂ ಕೇಳಿ ಬಂದಿತ್ತು.

Story first published: Monday, April 27, 2020, 20:03 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X