ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!

Pravin Tambe among two Indians to be a part of CPL 2020 players’ draft

ಪೋರ್ಟ್ ಆಫ್‌ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿ ಈ ವರ್ಷ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ಮಧ್ಯೆ ನಡೆಯುವುದರಲ್ಲಿದೆ. ಕೊರೊನಾವೈರಸ್ ಭೀತಿಯಿಂದಾಗಿ ಈ ಟೂರ್ನಿ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ. ಕೋವಿಡ್-19 ಪಿಡುಗನ್ನು ಗಮನದಲ್ಲಿರಿಸಿಕೊಂಡು ಟೂರ್ನಿಗಾಗಿ 537 ಆಟಗಾರರ ಕರಡು ಪಟ್ಟಿ ತಯಾರಿಸಲಾಗಿದೆ. ಪ್ರಕಟಿತ ಈ ಆಟಗಾರರ ಪಟ್ಟಿಯಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟಿಗರಿದ್ದಾರೆ. ಇದರಲ್ಲಿ ಭಾರತದ ಇಬ್ಬರು ಆಟಗಾರರ ಹೆಸರೂ ಸೇರಿದೆ.

 ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್! ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!

ವಿದೇಶಿ ಸ್ಟಾರ್ ಆಟಗಾರರಾದ ಆಸ್ಟ್ರೇಲಿಯಾದ ಕ್ರಿಸ್ ಲಿನ್, ಅಫ್ಘಾನಿಸ್ತಾನದ ಆಲ್ ರೌಂಡರ್ ರಶೀದ್ ಖಾನ್, ಕ್ವೈಸ್ ಅಹ್ಮದ್, ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೌ ಸಿಪಿಎಲ್ ಪಟ್ಟಿಯಲ್ಲಿರುವ ಹಳೆ ಆಟಗಾರರು. ಇವರಲ್ಲದೆ ಇನ್ನೊಂದಿಷ್ಟು ಪ್ರತಿಭಾನ್ವಿತ ಆಟಗಾರರು ಸಿಪಿಎಲ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಮೊದಲ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರಣರೋಚಕ ಹಾದಿ!ಭಾರತ ಮೊದಲ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರಣರೋಚಕ ಹಾದಿ!

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಕೂಡ ಸಿಪಿಎಲ್‌ ಟೂರ್ನಿಯಲ್ಲಿ ಮಿಂಚಿದ್ದ ಬ್ಯಾಟ್ಸ್‌ಮನ್. ಆದರೆ ಈ ಬಾರಿ ಗೇಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ನಿರ್ಧಾರ ಪ್ರಕಟಿಸಿದ್ದಾರೆ.

ಪಟ್ಟಿಯಲ್ಲಿ ಪ್ರವೀಣ್ ತಾಂಬೆ

ಪಟ್ಟಿಯಲ್ಲಿ ಪ್ರವೀಣ್ ತಾಂಬೆ

ಸಿಪಿಎಲ್ ಪ್ರಕಟಿಸಿರುವ ವರ್ಚುವಲ್ ಪಟ್ಟಿಯಲ್ಲಿ 48ರ ಹರೆಯದ ಭಾರತದ ಕ್ರಿಕೆಟರ್ ಪ್ರವೀಣ್ ತಾಂಬೆ ಇದ್ದಾರೆ. 2018ರಲ್ಲಿ ಟಿ10 ಲೀಗ್‌ನಲ್ಲಿ ಸಿಂಧಿಸ್ ಪ್ರತಿನಿಧಿಸಿದ್ದ ತಾಂಬೆ, 2013 ಮತ್ತು 2015ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎಂದಿನ ಆಟಗಾರರಾಗಿದ್ದರು.

2020ರ ಹರಾಜಿನಲ್ಲಿ ಕೆಕೆಆರ್ ಪಾಲು

2020ರ ಹರಾಜಿನಲ್ಲಿ ಕೆಕೆಆರ್ ಪಾಲು

ಅನುಭವಿ ಆಟಗಾರ ಪ್ರವೀಣ್ ತಾಂಬೆ 2020ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಕೆಕೆಆರ್ ಪಾಲಾಗಿದ್ದರು. ಆದರೆ ಆ ಬಳಿಕ, ಬಿಸಿಸಿಐಯು ಟಿ10 ಲೀಗ್‌ನಲ್ಲಿ ಅನುಮತಿಯಿಲ್ಲದೆ ಪಾಲ್ಗೊಂಡಿದ್ದಕ್ಕಾಗಿ ತಾಂಬೆ ಅವರನ್ನು ಅನರ್ಹಗೊಳಿಸಿತ್ತು. ಅಂದ್ಹಾಗೆ ತಾಂಬೆ, 33 ಐಪಿಎಲ್ ಪಂದ್ಯಗಳಲ್ಲಿ 7.75.ರ ಎಕಾನಮಿಯಂತೆ 28 ವಿಕೆಟ್ ಪಡೆದಿದ್ದಾರೆ.

ಮತ್ತೊಬ್ಬ ಭಾರತೀಯನ ಹೆಸರು

ಮತ್ತೊಬ್ಬ ಭಾರತೀಯನ ಹೆಸರು

ತಾಂಬೆ ಬಿಟ್ಟರೆ ಸಿಪಿಎಲ್ ಪಟ್ಟಿಯಲ್ಲಿರುವ ಇನ್ನೊಬ್ಬ ಭಾರತೀಯನೆಂದರೆ ಅಸಾದ್ ಪಠಾಣ್. ಪಠಾಣ್ ಸದ್ಯ ರೈಲ್ವೇಸ್‌ಗೆ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಅಸಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದವರು. ದುಬೈ ಟಿ10 ಲೀಗ್‌ನಲ್ಲೂ ಆಡಿದ ಅನುಭವ ಅಸಾದ್‌ಗಿದೆ. 2011-12ರಲ್ಲಿ ಆರ್‌ಸಿಬಿ ಪರ ಪಠಾಣ್ 6 ಬಾರಿ ಜೆರ್ಸಿ ಧರಿಸಿದ್ದರು.

ಶಾಹಿದ್ ಅಫ್ರಿದಿಗೆ ಡಿಮ್ಯಾಂಡ್

ಶಾಹಿದ್ ಅಫ್ರಿದಿಗೆ ಡಿಮ್ಯಾಂಡ್

ಪ್ರಕಟಿತ ಸಿಪಿಎಲ್ ಪಟ್ಟಿಯಲ್ಲಿ ಅತ್ಯಧಿಕ ಬ್ರ್ಯಾಕೆಟ್ ಆಟಗಾರನೆಂದರೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (45,58,233 ರೂ.), ದ್ವಿತೀಯ ಅತ್ಯಧಿಕ ಬ್ರ್ಯಾಕೆಟ್ ಆಟಗಾರನಾಗಿ ಇಂಗ್ಲೆಂಡ್‌ನ ನಾಯಕ ಇಯಾನ್ ಮಾರ್ಗನ್ (22,80,051 ರೂ.) ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಟಾಮ್ ಬ್ಯಾಂಟಮ್, ನ್ಯೂಜಿಲೆಂಡ್‌ನ ಟಿಮ್ ಸೌಥೀ ಮತ್ತು ಆಸ್ಟ್ರೇಲಿಯಾದ ಬೆನ್ ಕಟ್ಟಿಂಗ್ ಕೂಡ ಅತ್ಯಧಿಕ ಬ್ರ್ಯಾಕೆಟ್ ಆಟಗಾರರ ಸಾಲಿನಲ್ಲಿದ್ದಾರೆ.

Story first published: Friday, June 26, 2020, 9:46 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X