ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಸ್ಟ್ರೇಲಿಯ ವಿರುದ್ಧವೂ ಪೃಥ್ವಿ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಬೇಕು'

Prithvi should be India’s first-choice opener against Australia: Vengsarkar

ನವದೆಹಲಿ, ಅಕ್ಟೋಬರ್ 5: ಮುಂಬರಲಿರುವ ಆಸ್ಟ್ರೇಲಿಯ ಪ್ರವಾಸ ವೇಳೆಯೂ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಭಾರತ ತಂಡದಲ್ಲಿರಬೇಕು. ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಪೃಥ್ವಿಯೇ ಮೊದಲ ಆಯ್ಕೆಯಾಗಬೇಕು ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಟೆಸ್ಟ್ ನ ಚೊಚ್ಚಲ ಶತಕ ಬಾರಿಸಿದ ರವೀಂದ್ರ ಜಡೇಜಾ!ಅಂತಾರಾಷ್ಟ್ರೀಯ ಟೆಸ್ಟ್ ನ ಚೊಚ್ಚಲ ಶತಕ ಬಾರಿಸಿದ ರವೀಂದ್ರ ಜಡೇಜಾ!

ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ 18ರ ಹರೆಯದ ಯುವ ಬ್ಯಾಟ್ಸ್ಮನ್ ಪೃಥ್ವಿ, ಶತಕ (134 ರನ್) ಬಾರಿಸಿ ಎಲ್ಲರನ್ನೂ ತನ್ನತ್ತ ಸೆಳೆದಿದ್ದರು. ಪೃಥ್ವಿ ಆಟವನ್ನು ಗಮನಿಸಿರುವ ದಿಲೀಪ್, ಡಿಸೆಂಬರ್ 6ರಿಂದ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲೂ ಪೃಥ್ವಿ ಆರಂಭಿಕರಾಗಿ ಇಳಿಯಬೇಕು ಎಂದಿದ್ದಾರೆ.

'ಕೇವಲ 18ರ ಹರೆಯದವರಾಗಿರುವ ಪೃಥ್ವಿ ಮೊದಲ ಟೆಸ್ಟ್ ನಲ್ಲೇ ತನ್ನ ಪ್ರಚಂಡ ಸಾಮಾರ್ಥ್ಯ ಮೆರೆದಿದ್ದಾರೆ. ಕಿರಿಯರಾದರೂ ಪೃಥ್ವಿ ತನ್ನ ಆಟದ ಮೂಲಕ ಪ್ರೌಢತ್ವವನ್ನು ತೋರಿಕೊಂಡಿದ್ದಾರೆ' ಎಂದು ಟೀಮ್ ಇಂಡಿಯಾ ಮಾಜಿ ನಾಯಕ ದಿಲೀಪ್ ಹೇಳಿದ್ದಾರೆ. ಕಳೆದ ವರ್ಷ ಪೃಥ್ವಿ, ಮುಂಬೈ ರಣಜಿ ತಂಡ ಸೇರುವ ಹೊತ್ತಿಗೆ ವೆಂಗ್ ಸರ್ಕಾರ್ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಉಪಾಧ್ಯಕ್ಷ ಸ್ಥಾನದಲ್ಲಿದ್ದರು.

ಪೃಥ್ವಿ ಶಾ ಅವರನ್ನು ವೀರೇಂದ್ರ ಸೆಹ್ವಾಗ್ ಗೆ ಹೋಲಿಸಬೇಡಿ: ಸೌರವ್ ಗಂಗೂಲಿಪೃಥ್ವಿ ಶಾ ಅವರನ್ನು ವೀರೇಂದ್ರ ಸೆಹ್ವಾಗ್ ಗೆ ಹೋಲಿಸಬೇಡಿ: ಸೌರವ್ ಗಂಗೂಲಿ

ಮುಂಬೈ ತಂಡಕ್ಕಾಗಿ ಆಡುತ್ತಿದ್ದ ಪೃಥ್ವಿ ಅವರನ್ನು ಗಮನಿಸಿದ ಯಾರಾದರೂ ಪೃಥ್ವಿಯ ನಿರ್ಭೀತಿಯ ಆಟಕ್ಕೆ ಮರುಳಾಗಲೇಬೇಕು ಎಂಬಂತೆ ಶಾ ಆಟದ ವೈಖರಿಯಿತ್ತು. ದಿಲೀಪ್ ಗೂ ಪೃಥ್ವಿಯ ಮೇಲೆ ವಿಶ್ವಾಸ ಮೂಡಲು ಕಾರಣ ಪೃಥ್ವಿಯ ಇದೇ ಆಟದ ಪರಿ!

ಶಾ ಬಗ್ಗೆ ಮಾತನಾಡುತ್ತ ದಿಲೀಪ್, 'ಆಸ್ಟ್ರೇಲಿಯಾ ಟೆಸ್ಟ್ ನಲ್ಲೂ ಭಾರತ ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಪೃಥ್ವಿ ಮೊದಲ ಆಯ್ಕೆಯಾಗಿರಬೇಕು. ಈ ಬಗ್ಗೆ ನಾನು ರಾಹುಲ್ ದ್ರಾವಿಡ್ ಅವರಲ್ಲೂ ಸುದೀರ್ಘವಾಗಿ ಮಾತನಾಡಿದ್ದೇನೆ. ಪೃಥ್ವಿಗೆ ಅವಕಾಶ ನೀಡುವದೆಸೆಯಲ್ಲಿ ಎಲ್ಲಾ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದ್ದಾರೆ' ಎಂದರು.

Story first published: Friday, October 5, 2018, 18:32 [IST]
Other articles published on Oct 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X