ದಾಂಪತ್ಯ ಬದುಕಿಗೆ ಕಾಲಿಟ್ಟ ವಿಂಡೀಸ್‌ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್

ಪೋರ್ಟ್‌ ಆಫ್‌ ಸ್ಪೇನ್: ವೆಸ್ಟ್‌ ಇಂಡೀಸ್ ರಾಷ್ಟ್ರೀಯ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂಜಾಬ್‌ ಕಿಂಗ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್ ಪೂರನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪೂರನ್ ಮತ್ತು ಅಲಿಸಾ ಮಿಗುಯೆಲ್ ಜೂನ್ 1ರ ಮಂಗಳವಾರ ಸತಿ-ಪತಿಗಳಾಗಿ ಬದಲಾಗಿದ್ದಾರೆ.

ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ಆಟಗಾರ ಈಗ ಕಾರ್ಪೆಂಟರ್!

ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಫೋಟೋ ಹಾಕಿಕೊಂಡಿರುವ ನಿಕೋಲಸ್ ಪೂರನ್, 'ನನ್ನ ಈ ಬದುಕಿನಲ್ಲಿ ಜೀಸಸ್ ಬಹಳಷ್ಟು ಸಂಗತಿಗಳನ್ನು ಆಶೀರ್ವದಿಸಿದ್ದಾನೆ. ಬದುಕಿನಲ್ಲಿ ನಿನ್ನನ್ನು ಪಡೆಯುವುದಕ್ಕಿಂತ ದೊಡ್ಡ ಸಂಗತಿ ಬೇರೆ ಏನಿಲ್ಲ' ಎಂದು ಬರೆದುಕೊಂಡಿದ್ದಾರೆ.

WTC ದಾಖಲೆ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್ ಹಿಂದಿಕ್ಕಿದ ಅಜಿಂಕ್ಯ ರಹಾನೆ!

ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಬದಲಾಗುತ್ತಿರುವ ಪೂರನ್‌ಗೆ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿ ಶುಭ ಕೋರಿದೆ. ವೆಸ್ಟ್ ಇಂಡೀಸ್ ಆಟಗಾರ ಫ್ಯಾಬಿಯೆನ್ ಅಲೆನ್, ನ್ಯೂಜಿಲೆಂಡ್ ಕ್ರಿಕೆಟರ್ ಜಿಮ್ಮಿ ನೀಶಮ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್, ಪಂಜಾಬ್‌ ಕಿಂಗ್ಸ್‌ನ ಮನ್‌ದೀಪ್‌ ಸಿಂಗ್ ಮೊದಲಾದವರು ಜೋಡಿಗೆ ಶುಭ ಕೋರಿದ್ದಾರೆ.

ಐಪಿಎಲ್ 2021ರಲ್ಲಿ ಆಡಿದ್ದ ಪೂರನ್ ರನ್‌ಗಾಗಿ ಪರದಾಡಿದ್ದರು. 7 ಪಂದ್ಯಗಳನ್ನಾಡಿದ್ದ ಪೂರನ್ ಕೇವಲ 28 ರನ್ ಗಳಿಸಿದ್ದರು, ಇದರಲ್ಲಿ ಅತ್ಯಧಿಕ ರನ್ ಅಂದರೆ 19. 25ರ ಹರೆಯದ ಪೂರನ್ ವಿಂಡೀಸ್ ತಂಡದಲ್ಲಿ 25 ಏಕದಿನ ಇನ್ನಿಂಗ್ಸ್‌ಗಳಲ್ಲಿ 982 ರನ್, 24 ಟಿ20ಐ ಇನ್ನಿಂಗ್ಸ್‌ಗಳಲ್ಲಿ 392 ರನ್ ಬಾರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, June 1, 2021, 13:12 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X