ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ವಿಕೆಟ್ ಪಡೆಯುವುದು ಹೇಗೆ? ಆಸಿಸ್ ತಂಡಕ್ಕೆ ವಿವರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

Rahul in great form after IPL 2020, dismissing him will be tough: Maxwell

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದರು. ಅವರ ಅದ್ಭುತ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾದ ಮೂರು ಆವೃತ್ತಿಗಳಲ್ಲೂ ಅವಕಾಶವನ್ನು ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ರಾಹುಲ್ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್ ಅವರ ಈ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಪಂಜಾಬ್ ತಂಡದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ರಾಹುಲ್ ಅವರನ್ನು ಔಟ್ ಮಾಡುವುದು ಸುಲಭವಿಲ್ಲ ಎಂದು ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.

ತಂಡದಲ್ಲಿ ಸ್ಥಾನ ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾದಲ್ಲಿ ಆತ ರನ್ ಗಳಿಸಬೇಕು: ಹರ್ಭಜನ್ ಸಿಂಗ್ತಂಡದಲ್ಲಿ ಸ್ಥಾನ ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾದಲ್ಲಿ ಆತ ರನ್ ಗಳಿಸಬೇಕು: ಹರ್ಭಜನ್ ಸಿಂಗ್

ಆಸ್ಟ್ರೇಲಿಯಾ ತಂಡದ ಮೀಟಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ ಬಳಿ ರಾಹುಲ್ ವಿಕೆಟ್ ಪಡೆಯುವುದು ಹೇಗೆ ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಗಿತ್ತಂತೆ. ಅದಕ್ಕೆ ಮ್ಯಾಕ್ಸ್‌ವೆಲ್ ಏನು ಉತ್ತರವನ್ನು ನೀಡಿದ್ದರು ಮುಂದೆ ಓದಿ..

ಆತ ಬಂದೂಕಿನಂತೆ ಇದ್ದರು

ಆತ ಬಂದೂಕಿನಂತೆ ಇದ್ದರು

ಮ್ಯಾಕ್ಸ್‌ವೆಲ್ ರಾಹುಲ್ ಆಟವನ್ನು ಪ್ರಶಂಸಿಸಿದ್ದಾರೆ. ರಾಹುಲ್ ಆಟಗಾರಾಗಿ ಅತ್ಯುತ್ತಮ ಮನೋಧರ್ಮವನ್ನು ಹೊಂದಿದ್ದಾರೆ ಹಾಗೂ ಒತ್ತಡದ ಸಂದರ್ಭದಲ್ಲಿ ಅವರು ಶಾಂತಚಿತ್ತದಿಂದಲೂ ಇರಬಲ್ಲವರಾಗಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಅವರು ಬಂದೂಕಿನಂತೆ ಇದ್ದರು ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಆಸಿಸ್ ತಂಡದ ಪ್ರಶ್ನೆ

ಆಸಿಸ್ ತಂಡದ ಪ್ರಶ್ನೆ

"ಆಸ್ಟ್ರೇಲಿಯಾ ತಂಡದ ಮೀಟಿಂಗ್‌ನ ಸಂದರ್ಭದಲ್ಲಿ ನನ್ನ ಬಳಿ ರಾಹುಲ್ ಅವರನ್ನು ಔಟ್ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಪ್ರಯತ್ನ ಪಡುವುದು ಹಾಗೂ ಆತನನ್ನು ಬೆನ್ನಟ್ಟುವುದು ಎಂದೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಎಲ್ಲಾ ಪ್ರಯತ್ನಗಳು ನಡೆಯಲಿದೆ

ಎಲ್ಲಾ ಪ್ರಯತ್ನಗಳು ನಡೆಯಲಿದೆ

"ನನ್ನ ಪ್ರಕಾರ ಇದನ್ನು ನಾವು ಸರಣಿಯಲ್ಲಿ ಪ್ರಯತ್ನಿಸಲಿದ್ದೇವೆ. ಸರಣಿಯಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಕೂಡ ನಾವು ನಡೆಸಲಿದ್ದೇವೆ. ಆತನನ್ನು ಓಡುವಂತೆ ಮಾಡುವುದು ಹಾಗೂ ಅತ್ಯುತ್ತಮವಾದುದನ್ನು ನಿರೀಕ್ಷಿಸುತ್ತೇವೆ" ಎಂದು ಮ್ಯಾಕ್ಸ್‌ವೆಲ್ ಹೇಳಿಕೆಯನ್ನು ನೀಡಿದ್ದಾರೆ.

ಕೆಎಲ್ ರಾಹುಲ್‌ಗೆ ಉಪನಾಯಕನ ಪಟ್ಟ

ಕೆಎಲ್ ರಾಹುಲ್‌ಗೆ ಉಪನಾಯಕನ ಪಟ್ಟ

ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಮೊದಲ ಬಾರಿಗೆ ಪಂಜಾಬ್ ತಂಡವನ್ನು ಮುನ್ನಡೆಸಿದರು. ತಂಡವನ್ನು ಪ್ಲೇ ಆಫ್ ಹಂತಕ್ಕೆ ತಲುಪಿಸುವಲ್ಲಿ ವಿಫಲರಾದರೂ ರಾಹುಲ್ ಪ್ರದರ್ಶನ ಅತ್ಯುತ್ತಮವಾಗಿತ್ತು. ಈಗ ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ತಂಡದ ಉಪನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯದ ಕಾರಣ ಕೆಎಲ್ ರಾಹುಲ್ ಹೆಗಲಿಗೆ ಉಪನಾಯಕನ ಜವಾಬ್ಧಾರಿಯೂ ಬಿದ್ದಿದೆ.

Story first published: Friday, November 20, 2020, 16:42 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X