ಕೆಎಸ್‌ಸಿಎ 1st ಡಿವಿಶನ್ ಲೀಗ್‌ನಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಚಾಂಪಿಯನ್ಸ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಫಸ್ಟ್ ಡಿವಿಶನ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಕ್ಲಬ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ನಾಯಕ ನಿಹಾಲ್ ಉಲ್ಲಾಳ್ ಮತ್ತು ಬೌಲರ್ ಶರತ್ ಎಚ್‌ಎಸ್‌ ಅಮೋಘ ಆಟದ ನೆರವಿನಿಂದ ರಾಜಾಜಿನಗರ ಕ್ರಿಕೆಟರ್ಸ್ ಚಾಂಪಿಯನ್ಸ್ ಆಗಿ ಮಿನುಗಿದೆ. ಲೀಗ್‌ನಲ್ಲಿ ನಡೆದ ಒಟ್ಟು 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿರುವ ರಾಜಾಜಿನಗರ ಕ್ರಿಕೆಟರ್ಸ್ ಟೂರ್ನಿಯ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

ಐಪಿಎಲ್‌ಗೆ 2 ಹೊಸ ತಂಡಗಳು: ಬಿಡ್ಡಿಂಗ್‌ಗೆ ₹ 2000 ಕೋಟಿ ಮೂಲಬೆಲೆ ನಿಗದಿಪಡಿಸಿದ ಬಿಸಿಸಿಐಐಪಿಎಲ್‌ಗೆ 2 ಹೊಸ ತಂಡಗಳು: ಬಿಡ್ಡಿಂಗ್‌ಗೆ ₹ 2000 ಕೋಟಿ ಮೂಲಬೆಲೆ ನಿಗದಿಪಡಿಸಿದ ಬಿಸಿಸಿಐ

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ನಿಹಾಲ್ ಉಲ್ಲಾಳ್ ನಾಯಕತ್ವದ ರಾಜಾಜಿನಗರ ಕ್ರಿಕೆಟರ್ಸ್ ಲೀಗ್‌ನಲ್ಲಿ ಅತೀ ಹೆಚ್ಚು ವಿಕೆಟ್‌ಗಳನ್ನು ಪಡೆದ ಕ್ಲಬ್ ಆಗಿ, ಎದುರಾಳಿ ತಂಡಗಳನ್ನು 7 ಸಾರಿ ಬೌಲ್‌ಔಟ್ ಮಾಡಿದ ಏಕಮಾತ್ರ ತಂಡವಾಗಿ, ಲೀಗ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ತಂಡವಾಗಿ ಮತ್ತು ಎದುರಾಳಿಗೆ ಅತೀ ಕಡಿಮೆ ರನ್ ನೀಡಿದ ತಂಡ ಹೀಗೆ ಅನೇಕ ದಾಖಲೆಗಳಿಗೆ ಕಾರಣವಾಗಿದೆ.

'ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ''ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'

ಕೆಎಸ್‌ಸಿಎ 1st ಡಿವಿಶನ್ ಲೀಗ್‌ನಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ತಂಡದ ಕುತೂಹಲಕಾರಿ ಅಂಕಿ-ಅಂಶಗಳು ಕೆಳಗಿವೆ

ರಾಜಾಜಿನಗರ ಕ್ರಿಕೆಟರ್ಸ್ ತಂಡದ ಮಾಹಿತಿ

ರಾಜಾಜಿನಗರ ಕ್ರಿಕೆಟರ್ಸ್ ತಂಡದ ಮಾಹಿತಿ

* ಕಾರ್ಯದರ್ಶಿ: ಆರ್‌ ಕುಮಾರ್

* ನಾಯಕ: ನಿಹಾಲ್ ಉಲ್ಲಾಳ್

* ಉಪನಾಯಕ: ಕ್ರಾಂತಿ ಕುಮಾರ್

* ವಿಕೆಟ್ ಕೀಪರ್: ನಿಹಾಲ್ ಉಲ್ಲಾಳ್

* ತಂಡ: ಶರತ್ ಎಚ್‌ಎಸ್, ರೋಹಿತ್ ಕುಮಾರ್, ಎಂ ಕ್ರಾಂತಿ ಕುಮಾರ್, ಶಿವರಾಜ್ ಎಸ್, ಸೌರಬ್ ಎಂ ಮುತ್ತೂರು, ಫರ್ಹಾನ್ ಮ್ಯಾಗಿ, ನಿತಿನ್ ಎಸ್, ನಿಶ್ಚಿತ್ ಎನ್ ರಾವ್, ಪ್ರಜ್ವಲ್ ಕೃಷ್ಣ, ಶ್ರೀಹರಿ ಮಾಡ್ಯಾಳಕರ, ಭಾರ್ಗವ ಎಸ್, ಅಮೆ ಶಾನಭಾಗ.

ಜೋ ರೂಟ್ ಪ್ರೆಸ್ಸ್ ಮೀಟ್ ನಲ್ಲಿ ಹೇಳಿದ್ದೇನು ಗೊತ್ತಾ? | Oneindia Kannada
ಚಾಂಪಿಯನ್‌ಶಿಪ್‌ ಕಡೆಗೆ ರಾಜಾಜಿನಗರ ಕ್ರಿಕೆಟರ್ಸ್ ಪ್ರಯಾಣ

ಚಾಂಪಿಯನ್‌ಶಿಪ್‌ ಕಡೆಗೆ ರಾಜಾಜಿನಗರ ಕ್ರಿಕೆಟರ್ಸ್ ಪ್ರಯಾಣ

(ವಿಕೆಟ್‌ ಕೀಪರ್ ಕಮ್‌ ಬ್ಯಾಟ್ಸ್‌ಮನ್‌ ಮತ್ತು ನಾಯಕ ನಿಹಾಲ್ ಉಲ್ಲಾಳ್ ನಾಯಕತ್ವದಲ್ಲಿ ಕೆಎಸ್‌ಸಿಎ 1st ಡಿವಿಶನ್ ಲೀಗ್‌ನಲ್ಲಿ ಚಾಂಪಿಯನ್‌ಶಿಪ್‌ ಗೆಲ್ಲುವಲ್ಲಿಯವರೆಗೆ ರಾಜಾಜಿನಗರ ಕ್ರಿಕೆಟರ್ಸ್ ಸಾಧನೆಗಳು)

* 11 ಪಂದ್ಯಗಳಲ್ಲಿ ಗೆದ್ದ ಪಂದ್ಯಗಳ ಸಂಖ್ಯೆ: 10 ಪಂದ್ಯಗಳು

* ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ತಂಡ (94 ವಿಕೆಟ್‌ಗಳು) ರಾಜಾಜಿನಗರ ಕ್ರಿಕೆಟರ್ಸ್

* ಎದುರಾಳಿಗಳನ್ನು 7 ಬಾರಿ ಬೌಲ್ ಔಟ್ ಮಾಡಿದ ಏಕಮಾತ್ರ ತಂಡ ರಾಜಾಜಿನಗರ ಕ್ರಿಕೆಟರ್ಸ್

* ಎದುರಾಳಿಗೆ ಅತೀ ಕಡಿಮೆ ರನ್ ಬಿಟ್ಟುಕೊಟ್ಟ ತಂಡ (2171 ರನ್‌ಗಳು) ರಾಜಾಜಿನಗರ ಕ್ರಿಕೆಟರ್ಸ್

* ಲೀಗ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ತಂಡ (2656 ರನ್‌ಗಳು) ರಾಜಾಜಿನಗರ ಕ್ರಿಕೆಟರ್ಸ್

ಕೀಪರ್‌ ಆಗಿ, ಬ್ಯಾಟ್ಸ್‌ಮನ್‌ ಆಗಿ ನಿಹಾಲ್ ಉಲ್ಲಾಳ್ ಸಾಧನೆಗಳು

ಕೀಪರ್‌ ಆಗಿ, ಬ್ಯಾಟ್ಸ್‌ಮನ್‌ ಆಗಿ ನಿಹಾಲ್ ಉಲ್ಲಾಳ್ ಸಾಧನೆಗಳು

(ವಿಕೆಟ್ ಕೀಪರ್‌ ಆಗಿ ಲೀಗ್‌ನಲ್ಲಿ ನಿಹಾಲ್ ಸಾಧನೆಗಳು)

* ಆಡಿದ ಪಂದ್ಯಗಳು 11

* ಕೀಪರ್ ಆಗಿ ಆಡಿದ ಪಂದ್ಯಗಳು 10

* ಪಡೆದ ಕ್ಯಾಚ್‌ಗಳು 14

* ಮಾಡಿದ ಸ್ಟಂಪ್‌ಗಳು 3

* ಒಂದೇ ಇನ್ನಿಂಗ್ಸ್‌ನಲ್ಲಿ 5 ಕ್ಯಾಚ್‌ಗಳು 1 ಬಾರಿ

ಬ್ಯಾಟಿಂಗ್ ಅಂಕಿ ಅಂಶಗಳು

* ಗಳಿಸಿದ ರನ್‌ಗಳು 427

* ಶತಕದಾಟ 1 ಬಾರಿ

* ಅರ್ಧ ಶತಕ 1 ಬಾರಿ

* ಫೋರ್‌ಗಳು 45

* ಸಿಕ್ಸ್‌ಗಳು 8

ರಾಜಾಜಿನಗರ ಕ್ರಿಕೆಟರ್ಸ್ ಬೌಲಿಂಗ್‌ ದಾಳಿಯ ಅಂಕಿ-ಅಂಶ

ರಾಜಾಜಿನಗರ ಕ್ರಿಕೆಟರ್ಸ್ ಬೌಲಿಂಗ್‌ ದಾಳಿಯ ಅಂಕಿ-ಅಂಶ

* ಲೀಗ್‌ನ ಅತ್ಯುತ್ತಮ ವೇಗದ ಬೌಲರ್ (21 ವಿಕೆಟ್‌ಗಳು): ನಿಶ್ಚಿತ್

* ಲೀಗ್‌ನ ಎರಡನೇ ಅತ್ಯುತ್ತಮ ಬೌಲರ್ (20 ವಿಕೆಟ್‌ಗಳು): ಶರತ್ ಎಚ್‌ಎಸ್

* ಲೀಗ್‌ನಲ್ಲಿ ಐದನೇ ಅತ್ಯತ್ತಮ ವಿಕೆಟ್‌ ಸರದಾರ: ಶರತ್ ಎಚ್‌ಎಸ್

* ಲೀಗ್‌ನಲ್ಲಿ ಐದನೇ ಅತೀ ಹೆಚ್ಚು ಡಾಟ್ ಬಾಲ್ ಹಾಕಿದ ಬೌಲರ್ (326 ಡಾಟ್ ಬಾಲ್‌ಗಳು): ಶರತ್ ಎಚ್‌ಎಸ್

* ಎರಡನೇ ಅತ್ಯಧಿಕ ವಿಕೆಟ್ ಸರದಾರ: ನಿಶ್ಚಿತ್

* ರಾಜಾಜಿನಗರ ಕ್ರಿಕೆಟರ್ಸ್ ಪರ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಏಕಮಾತ್ರ ಬೌಲರ್: ಶರತ್ ಎಚ್‌ಎಸ್

* ಪಾದಾರ್ಪಣೆ ಮಾಡಿದ ಅತ್ಯುತ್ತಮ ಆಫ್‌ ಸ್ಪಿನ್ನರ್ (17 ವಿಕೆಟ್‌ಗಳು): ಭಾರ್ಗವ್

* ಲೀಗ್‌ನಲ್ಲಿ ಐದನೇ ಅತ್ಯತ್ತಮ ಬೌಲಿಂಗ್ ಎಕಾನಮಿ ಮತ್ತು ರಾಜಾಜಿನಗರ ಕ್ರಿಕೆಟರ್ಸ್ ನಲ್ಲಿ ಅತ್ಯುತ್ತಮ ಬೌಲಿಂಗ್ ಎಕಾನಮಿ (3.98): ಶಮಂತ್

* ಲೀಗ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಅನ್ನು 3 ಬಾರಿ ಉಳಿಸಿದ ಬೌಲರ್: ಭಾರ್ಗವ್

* ಐದು ಅಥವಾ ಹೆಚ್ಚು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದವರಲ್ಲಿ ಬೆಸ್ಟ್ ಸ್ಟ್ರೈಕ್‌ರೇಟ್ (19.09): ನಿಶ್ಚಿತ್

ಬ್ಯಾಟಿಂಗ್‌ನಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಅಬ್ಬರ

ಬ್ಯಾಟಿಂಗ್‌ನಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಅಬ್ಬರ

* ರಾಜಾಜಿನಗರಕ್ಕೆ ಅತಿ ಹೆಚ್ಚು ರನ್ ಗಳಿಸಿದವರು (433 ): ನಿತಿನ್ ಎಸ್

* ರಾಜಾಜಿನಗರಕ್ಕೆ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು (427): ನಿಹಾಲ್ ಉಲ್ಲಾಳ್

* ಲೀಗ್‌ನಲ್ಲಿ ಮೂರನೇ ಅತ್ಯಧಿಕ ಸಿಕ್ಸರ್ ಸಾಧನೆ (ತಲಾ 18): ನಿತಿನ್ ಮತ್ತು ಶಿವರಾಜ್

* ಲೀಗ್‌ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ (171.33): ಶಿವರಾಜ್

* ಲೀಗ್‌ನಲ್ಲಿ ಮೂರನೇ ಅತ್ಯಧಿಕ 50 ರನ್ ಬಾರಿಸಿದ ತಂಡ: 13 ಬಾರಿ

* ಲೀಗ್‌ನಲ್ಲಿ 4ನೇ ಅತ್ಯಧಿಕ ಶತಕಗಳು ಬಾರಿಸಿದ ತಂಡ (4 ಬಾರಿ): ರಾಜಾಜಿನಗರ

* ಲೀಗ್‌ನಲ್ಲಿ ಐದಕ್ಕೂ ಹೆಚ್ಚು ಬೌಲಿಂಗ್ ಮಾಡಿದವರಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ (19.09): ನಿಶ್ಚಿತ್

* ರಾಜಾಜಿನಗರದಲ್ಲಿ 3ಕ್ಕೂ ಹೆಚ್ಚು 50+ ರನ್ ಗಳಿಸಿದ ಒಬ್ಬನೇ ಬ್ಯಾಟ್ಸ್‌ಮನ್‌: ಫರ್ಹಾನ್ ಮ್ಯಾಗಿ

* ಉತ್ತಮ ಪಾರ್ಟ್ನರ್‌ಶಿಪ್‌ ಜೊತೆಗೆ ಉತ್ತಮ ಆಲ್ ರೌಂಡರ್ ಪ್ರಯತ್ನ, 2 ಅರ್ಧ ಶತಕಗಳು, 1 ಶತಕ ಮತ್ತು 9 ವಿಕೆಟ್ ಸಾಧನೆ: ಕ್ರಾಂತಿ ಕುಮಾರ್

For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 18:07 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X