ಐಪಿಎಲ್ 2021: ಕೆಕೆಆರ್ ವಿರುದ್ಧ ರಾಜಸ್ಥಾನ್ ತಿರುಗಿ ಬೀಳಲಿದೆ: ಸಂಗಕ್ಕರ

ಈ ಬಾರಿಯ ಐಪಿಎಲ್‌ನಲ್ಲಿಯೂ ರಾಜಸ್ಥಾನ್ ರಾಯಲ್ಸ್ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಸೋತಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯರಿಗೆ ಆಘಾತವನ್ನು ನೀಡಿದೆ. ಆದರೆ ನಾವು ಮುಂದಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಿರುಗಿ ಬೀಳಲಿದ್ದೇವೆ ಎಂದು ಸಂಗಕ್ಕರ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ಈ ಟೂರ್ನಿಯಲ್ಲಿ ನಾವು ಕಠಿಣವಾದ ಆರಂಭವನ್ನು ಪಡೆದಿದ್ದೇವೆ ಎಂದು ತಿಳಿದಿದೆ. ಮೊದಲ ಪಂದ್ಯವನ್ನು ನಾವು ಗೆಲ್ಲಲು ಸಾಧ್ಯವಾಗಿದ್ದರೆ ಈಗ ನಮ್ಮ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು. ಕಳೆದ ಎರಡು ಪಂದ್ಯಗಳ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಠಿಣ. ಆದರೆ ನಾವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ ಹಾಗೂ ನಮ್ಮ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಇದೊಂದು ಸುದೀರ್ಘವಾದ ಟೂರ್ನಿಯಾಗಿದ್ದು ಮುಂದಿನ ಪಂದ್ಯದಲ್ಲಿ ಪರಿಸ್ಥಿತಿಯನ್ನು ನಮ್ಮತ್ತ ತಿರುಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇವೆ" ಎಂದು ಸಂಗಕ್ಕರ ಪ್ರತಿಕ್ರಿಯಿಸಿದ್ದಾರೆ.

ಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸ

"ನಮಗೆ ಈ ಸಂದರ್ಭದಲ್ಲಿ ಮುಖ್ಯವಾಗಿದ್ದು ಪಾಠಗಳನ್ನು ನಾವು ಕಲಿತುಕೊಳ್ಳಬೇಕಿದೆ ಹಾಗೂ ಆಟದ ಮೂಲದತ್ತ ಚಿತ್ತ ನೆಡಬೇಕಿದೆ. ನನ್ನ ಅಭಿಪ್ರಾಯದ ಪ್ರಕಾರ ನಾವು ಕೇವಲ ಉತ್ತಮ ಆರಂಭವನ್ನು ಪಡೆದುಕೊಂಡರೆ ಸಾಕು. ಅದು ಬ್ಯಾಟ್ ಅಥವಾ ವಾಲ್ ಆಗಿರಬಹುದು. ನಂತರ ಮಧ್ಯಮ ಓವರ್‌ಗಳಲ್ಲಿ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಖಚಿತಪಡಿಸಬೇಕು" ಎಂದು ಸಂಗಕ್ಕರ ಹೇಳಿಕೆ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ ಹಾಗೂ ಆರ್‌ಸಿಬಿ ವಿರುದ್ಧ ಕೊನೆಯ ಎರಡು ಪಂದ್ಯಗಳನ್ನು ಸೋತ ಬಳಿಕವೂ ರಾಜಸ್ಥಾನ್ ರಾಯಲ್ಸ್ ಗೆಲುವಿನ ಪಥವನ್ನು ಕಂಡುಕೊಳ್ಳಲು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಕೆಕೆಆರ್ ಬಲಿಷ್ಠ ತಂಡ ಎಂಬುದು ನಮಗೆ ಅರಿವಿದೆ. ಅವರು ಸಾಕಷ್ಟು ಉತ್ತಮ ಸಂಯೋಜನೆಯನ್ನು ಹೊಂದಿದ್ದಾರೆ. ನಮ್ಮಂತೆಯೇ ಅವರು ಕೂಡ ಪಂದ್ಯದಲ್ಲಿ ತಿರುಗಿ ಬೀಳು ಕಾತರಿಸುತ್ತಿದ್ದಾರೆ"

ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!

Rajasthan Royals ತಂಡಕ್ಕೆ ಮತ್ತೆ ಹಳೇ ದಿನಗಳನ್ನು ನೆನಪಿಸಿದ RCB | Oneindia Kannada

"ಹೀಗಾಗಿ ಅದು ನಮಗೆ ತುಂಬಾ ಕಠಿಭವಾದ ಸವಾಲಾಗಲಿದೆ. ನಮ್ಮ ಯೋಜನೆಗಳನ್ನು ಪಂದ್ಯದಲ್ಲಿ ಪ್ರಯೋಗಿಸಿ ಯಶಸ್ಸು ಪಡೆಯಬೇಕಾಗಿದೆ. ಹಾಗಿದ್ದಾಗ ಪಂದ್ಯವನ್ನು ಗೆಲ್ಲಲು ಸಾಧ್ಯವಿದೆ" ಎಂದಿದ್ದಾರೆ ರಾಜಸ್ಥಾನ್ ರಾಯಲ್ಸ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಕುಮಾರ್ ಸಂಗಕ್ಕರ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, April 23, 2021, 22:01 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X