ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!

Ranji Trophy 2022-23: Delhi Made History By Beating Mumbai For The First Time In 43 Years

ಶುಕ್ರವಾರ, ಜನವರಿ 20ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2022-23ರ ರಣಜಿ ಟ್ರೋಫಿ ಋತುವಿನ ಪಂದ್ಯದಲ್ಲಿ ದೆಹಲಿ ತಂಡವು 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ಈ ಬಾರಿಯ ರಣಜಿ ಋತು ದೆಹಲಿ ತಂಡದ ಪಾಲಿಗೆ ಅತ್ಯಂತ ಕೆಟ್ಟದಾಗಿತ್ತು. ಆದರೀಗ 41 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ವಿರುದ್ಧದ ಗೆಲುವು ದೆಹಲಿ ತಂಡ ಮತ್ತು ಆಟಗಾರರಿಗೆ ಹೊಸ ಹುಮ್ಮಸ್ಸು ನೀಡಲಿದೆ.

ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಆಡಿದ ಐದು ಪಂದ್ಯಗಳಲ್ಲಿ ದೆಹಲಿ ತಂಡ ಯಾವುದೇ ಪಂದ್ಯವನ್ನು ಗೆದ್ದಿರಲಿಲ್ಲ. 2 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, 3 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದ್ದವು. ಇದೀಗ 8 ತಂಡಗಳನ್ನು ಒಳಗೊಂಡಿರುವ ಬಿ ಗುಂಪಿನಲ್ಲಿ 7ನೇ ಸ್ಥಾನದಲ್ಲಿದ್ದು, ಹೆಚ್ಚುವರಿಯಾಗಿ ತಡವಾಗಿ ದೆಹಲಿ ತಂಡದಲ್ಲಿ ಬಹಳಷ್ಟು ಬದಲಾವಣೆಗಳು ನಡೆಯುತ್ತಿದೆ.

IND vs SA 1st T20: ದೀಪ್ತಿ ಶರ್ಮಾ ಆಲ್‌ರೌಂಡ್ ಆಟ; ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ ಮಹಿಳಾ ತಂಡIND vs SA 1st T20: ದೀಪ್ತಿ ಶರ್ಮಾ ಆಲ್‌ರೌಂಡ್ ಆಟ; ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ ಮಹಿಳಾ ತಂಡ

ಕಳಪೆ ಪ್ರದರ್ಶನದ ಕಾರಣ ಆಯ್ಕೆಯಾಗಿದ್ದ ಆಟಗಾರರನ್ನು ಹೊರಹಾಕಲಾಗಿದೆ. ಇದೇ ವೇಳೆ ನಾಯಕನನ್ನು ಕೈಬಿಡಲಾಗಿದೆ ಮತ್ತು ಮತ್ತೊಬ್ಬ ಆಟಗಾರನನ್ನು ಅಶಿಸ್ತಿನ ಆರೋಪದ ಮೇಲೆ ಕೈಬಿಡಲಾಗಿದೆ. ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ನಾಯಕ ಹಿಮ್ಮತ್ ಸಿಂಗ್ ಕೂಡ ಕೆಲ ಪಂದ್ಯಗಳ ಹಿಂದೆ ಹೊರಗುಳಿದಿದ್ದರು.

41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟ

41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟ

ಪೃಥ್ವಿ ಶಾ, ಸರ್ಫರಾಜ್ ಖಾನ್, ನಾಯಕ ಅಜಿಂಕ್ಯಾ ರಹಾನೆ ಅವರಂತಹ ಸ್ಟಾರ್‌ ಆಟಗಾರರನ್ನು ಒಳಗೊಂಡಿದ್ದ ಹೊರತಾಗಿಯೂ ದೆಹಲಿ ವಿರುದ್ಧ ಸೋತಿರುವುದು 41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟವಾಗಿದೆ.

ಟಾಸ್ ಗೆದ್ದ ದೆಹಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 293 ರನ್ ಗಳಿಸಿ ಸರ್ವಪತನ ಕಂಡಿತು. ಮುಂಬೈನಂತಹ ಬಲಿಷ್ಠ ತಂಡಕ್ಕೆ ಅದು ಸಾಮಾನ್ಯ ಸ್ಕೋರ್ ಆಗಿತ್ತು.

ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 124 ರನ್

ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 124 ರನ್

ಇದರ ನಡುವೆಯೂ, ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ನೆರವಿನಿಂದ 124 ರನ್ ಬಾರಿಸಿ ಮುಂಬೈ ತಂಡ 200ರ ಗಡಿ ದಾಟುವಂತೆ ನೋಡಿಕೊಂಡರು.

ನಂತರ ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಪರ ವೈಭವ್ ರಾಹುಲ್ 114 ರನ್ ಗಳಿಸಿದರೆ, ಹಿಮ್ಮತ್ ಸಿಂಗ್ 85 ರನ್ ಬಾರಿಸಿ ಮುಂಬೈಗೆ ಪ್ರತಿರೋಧ ಒಡ್ಡಿದರು. ಇವರು ದೆಹಲಿ ತಂಡದ ಪರ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದವರಾಗಿದ್ದಾರೆ.

ಅಂತಿಮವಾಗಿ ಆತಿಥೇಯ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 369 ರನ್ ಗಳಿಸಿ, 76 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರು. ನಂತರ ಮುಂಬೈ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಕಳಪೆ ಬ್ಯಾಟಿಂಗ್ ಮಾಡಿ, ಕೇವಲ 170 ರನ್‌ಗಳಿಗೆ ಆಲೌಟ್ ಆಯಿತು.

ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡ ದೆಹಲಿ

ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡ ದೆಹಲಿ

94 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ದೆಹಲಿ 8 ವಿಕೆಟ್‌ಗಳು ಬಾಕಿ ಇರುವಂತೆಯೇ ಬೆನ್ನತ್ತಿ, ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡಿತು.

ಮುಂಬೈ ನಾಯಕ ಅಜಿಂಕ್ಯಾ ರಹಾನೆಗೆ ಇದು ವ್ಯತಿರಿಕ್ತ ಜನವರಿ ತಿಂಗಳಾಗಿದೆ. ಸರಿಯಾಗಿ ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ನಾಯಕರಾಗಿದ್ದರು. ಆದರೆ, ಅದೇ ಎರಡು ವರ್ಷಗಳ ನಂತರ, ತನ್ನ ನಾಯಕತ್ವದಲ್ಲಿ ಮುಂಬೈ 43 ವರ್ಷಗಳ ನಂತರ ಮೊದಲ ಬಾರಿಗೆ ದೆಹಲಿ ತಂಡಕ್ಕೆ ಶರಣಾಗಿರುವುದು ರಹಾನೆಗೆ ಸಿಹಿ-ಕಹಿ ದೊರೆತಿದೆ.

Story first published: Friday, January 20, 2023, 14:16 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X