ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy 2022-23: ಮಯಾಂಕ್ ಅಗರ್ವಾಲ್ ದ್ವಿಶತಕ; ಕರ್ನಾಟಕ vs ಕೇರಳ ಅಂತಿಮ ಫಲಿತಾಂಶ

Ranji Trophy 2022-23: Karnataka team got 3 points after their Ranji Trophy Group C match against Kerala ended in a draw.

ಶುಕ್ರವಾರ, ಜನವರಿ 20ರಂದು ತಿರುವನಂತಪುರಂನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ದಿನದಂದು ಕೇರಳ ವಿರುದ್ಧದ ರಣಜಿ ಟ್ರೋಫಿಯ ಸಿ ಗುಂಪಿನ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ನಂತರ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡ ಮೂರು ಅಂಕಗಳನ್ನು ಗಳಿಸಿತು.

ಇದೇ ವೇಳೆ ಸಿ ಗುಂಪಿನಲ್ಲಿ ಮೂರು ಗೆಲುವು, ಮೂರು ಡ್ರಾಗಳೊಂದಿಗೆ 29 ಅಂಕಗಳೊಂದಿಗೆ ಕರ್ನಾಟಕ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಕೇರಳ ತಂಡ 3 ಗೆಲುವು ಮತ್ತು ಒಂದು ಸೋಲಿನೊಂದಿಗೆ 20 ಅಂಕಗಳನ್ನು ಕಲೆಹಾಕಿ ಮೂರನೇ ಸ್ಥಾನದಲ್ಲಿದೆ.

ಪ್ರವಾಸಿ ಕರ್ನಾಟಕ ತಂಡವು ನಾಲ್ಕನೇ ದಿನದಂದು 6 ವಿಕೆಟ್‌ಗೆ 410 ರನ್‌ಗಳಿಗೆ 75 ರನ್‌ಗಳನ್ನು ಸೇರಿಸುವ ಮೂಲಕ ತನ್ನ ಮುನ್ನಡೆಯನ್ನು 143 ರನ್‌ಗಳಿಗೆ ವಿಸ್ತರಿಸಿತು.

IPL 2023: ಈ ದಿನದಂದು 16ನೇ ಐಪಿಎಲ್ ಆವೃತ್ತಿ ಆರಂಭ ಸಾಧ್ಯತೆ!IPL 2023: ಈ ದಿನದಂದು 16ನೇ ಐಪಿಎಲ್ ಆವೃತ್ತಿ ಆರಂಭ ಸಾಧ್ಯತೆ!

ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ 360 ಎಸೆತಗಳಲ್ಲಿ 17 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಮೇತ 208 ರನ್‌ಗಳ ಅಮೋಘ ದ್ವಿಶತಕ ನೆರವಿನಿಂದ ಕರ್ನಾಟಕ ಒಟ್ಟು 9 ವಿಕೆಟ್‌ಗೆ 485 ರನ್‌ಗಳಿಗೆ ಡಿಕ್ಲೇರ್ಡ್ ಮಾಡಿಕೊಂಡಿತು.

143 ರನ್‌ಗಳ ಹಿನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಬಿಸಿದ ಕೇರಳದ ತಂಡ 51 ಓವರ್‌ಗಳಲ್ಲಿ 4 ವಿಕೆಟ್‌ಗೆ 96 ರನ್ ಗಳಿಸಿದಾಗ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು ಮತ್ತು ಕೇರಳ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಗೆಲುವಿಗೆ ಅಡ್ಡಗಾಲಾದರು. ಇದರಿಂದಾಗಿ ಕರ್ನಾಟಕ ಮೂರು ಅಂಕಗಳಿಗೆ ತೃಪ್ತಿಪಡಬೇಕಾಯಿತು.

ಇದಕ್ಕೂ ಮೊದಲು ಕರ್ನಾಟಕ ತಂಡದ ಪರ ಬಿಆರ್ ಶರತ್ 101 ಎಸೆತಗಳಲ್ಲಿ 5 ಬೌಂಡರಿ ಸಹಿತ 53 ರನ್ ಮತ್ತು ಶುಭಾಂಗ್ ಹೆಗ್ಡೆ 138 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ ಅಜೇಯ 50 ರನ್‌ಗಳನ್ನು ಬಾರಿಸಿದ್ದರ ಸಹಾಯದಿಂದ ಕರ್ನಾಟಕ ತಂಡ ಮುನ್ನಡೆಯನ್ನು ವಿಸ್ತರಿಸಲು ಪ್ರಯತ್ನಿಸಿದರು.

IND vs NZ: ಮೊದಲ ODI ಪಂದ್ಯ ಗೆದ್ದರೂ ಶೇ.60ರಷ್ಟು ದಂಡ ಕಟ್ಟಿದ ರೋಹಿತ್ ಶರ್ಮಾ ಪಡೆIND vs NZ: ಮೊದಲ ODI ಪಂದ್ಯ ಗೆದ್ದರೂ ಶೇ.60ರಷ್ಟು ದಂಡ ಕಟ್ಟಿದ ರೋಹಿತ್ ಶರ್ಮಾ ಪಡೆ

ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಶುಭಾಂಗ್ ಹೆಗ್ಡೆ ಅವರು ಒಂಬತ್ತನೇ ವಿಕೆಟ್‌ಗೆ ವಿ ವೈಶಾಕ್ (17 ರನ್) ಅವರೊಂದಿಗೆ 53 ರನ್ ಸೇರಿಸಿದ ನಂತರ ಸಿಜೋಮನ್ ಜೋಸೆಫ್ ಅವರ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಇನ್ನು ಆತಿಥೇಯ ಕೇರಳ ತಂಡದ ಪರವಾಗಿ ಆಫ್ ಸ್ಪಿನ್ನರ್ ವೈಶಾಖ್ ಚಂದ್ರನ್ ಅತ್ಯುತ್ತಮ ಬೌಲರ್ ಆಗಿದ್ದು 117 ರನ್‌ಗಳಿಗೆ 3 ವಿಕೆಟ್ ಕಬಳಿಸಿದರೆ, ಎಂಡಿ ನಿಧೀಶ್ ಮತ್ತು ಜಲಜ್ ಸಕ್ಸೇನಾ ತಲಾ ಎರಡು ವಿಕೆಟ್ ಪಡೆದರು.

ಇತರ ಫಲಿತಾಂಶಗಳು
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2022-23ರ ರಣಜಿ ಟ್ರೋಫಿ ಋತುವಿನ ಪಂದ್ಯದಲ್ಲಿ ದೆಹಲಿ ತಂಡವು 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿತು.

ಇನ್ನು ಉಳಿದ ಪಂದ್ಯಗಳನ್ನು ನೋಡುವುದಾದರೆ, ಜೋಧ್‌ಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡವು ಛತ್ತೀಸ್‌ಗಢವನ್ನು 167 ರನ್‌ಗಳಿಂದ ಸೋಲಿಸಿತು. ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಗೋವಾ ಅತ್ಯುತ್ತಮವಾಗಿ ಆಡಿ ಇನ್ನಿಂಗ್ಸ್ ಗೆಲುವು ದಾಖಲಿಸಿತು.

ಪುದುಚೇರಿಯಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್ ತಂಡ 27ನೇ ಓವರ್‌ನಲ್ಲಿ 70 ರನ್‌ಗಳ ಗುರಿಯನ್ನು ಮುಟ್ಟುವ ಮೂಲಕ ಆತಿಥೇಯ ಪುದುಚೇರಿ ತಂಡದ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿತು.

Story first published: Friday, January 20, 2023, 21:10 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X