ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy 2022-23: ನಾಕೌಟ್ ರೇಸ್‌ಗಾಗಿ ಕೇರಳ vs ಕರ್ನಾಟಕ ಸೆಣಸಾಟ; ಸಂಭಾವ್ಯ 11ರ ಬಳಗ, ಪಂದ್ಯದ ವಿವರ

Ranji Trophy 2022-23: Kerala vs Karnataka Probable Playing 11 And Match Details

ರಣಜಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾಗಿರುವ ಕರ್ನಾಟಕ, 2022-23ರ ರಣಜಿ ಟ್ರೋಫಿ ಋತುವಿನಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದೆ.

ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವು ಪ್ರಸ್ತುತ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇನ್ನು ಕೇರಳ ತಂಡ ಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ರಣಜಿ ಟ್ರೋಫಿಯಲ್ಲಿ ಬಲಿಷ್ಠ ಕೇರಳ ತಂಡವನ್ನು ಎದುರಿಸಲು ಸಜ್ಜಾಗಿರುವ ಕರ್ನಾಟಕವು ಈಗ ತಮ್ಮ ಅಜೇಯ ಗೆಲುವಿನ ನಾಗಾಲೋಟವನ್ನು ಆರು ಪಂದ್ಯಗಳಿಗೆ ವಿಸ್ತರಿಸಲು ಎದುರು ನೋಡುತ್ತಿದೆ.

U-19 Women's World Cup 2023: ಶಫಾಲಿ, ಶ್ವೇತಾ ಭರ್ಜರಿ ಬ್ಯಾಟಿಂಗ್; ಯುಎಇ ಮಣಿಸಿದ ಭಾರತU-19 Women's World Cup 2023: ಶಫಾಲಿ, ಶ್ವೇತಾ ಭರ್ಜರಿ ಬ್ಯಾಟಿಂಗ್; ಯುಎಇ ಮಣಿಸಿದ ಭಾರತ

ಆರನೇ ಸುತ್ತಿನ ಕೇರಳ ಮತ್ತು ಕರ್ನಾಟಕ ನಡುವಿನ ಪಂದ್ಯವು ಮಂಗಳವಾರ, ಜನವರಿ 17ರಂದು ಕೇರಳದ ತುಂಬಾದಲ್ಲಿರುವ ಸೇಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಇದೇ ವೇಳೆ ಈ ಋತುವಿನ ರಣಜಿ ಟ್ರೋಫಿಯಲ್ಲಿ ಕೇರಳ ಕೇವಲ ಒಂದು ಬಾರಿ ಸೋತಿದೆ.

ರಣಜಿ ಟ್ರೋಫಿ ಪಂದ್ಯಗಳಲ್ಲಿ ಕೇರಳದ ವಿರುದ್ಧ ಇದುವರೆಗೆ ಸೋಲನುಭವಿಸದ ಕರ್ನಾಟಕಕ್ಕೆ ಇತಿಹಾಸ ಮತ್ತು ಸದ್ಯದ ಫಾರ್ಮ್ ಪ್ಲಸ್ ಪಾಯಿಂಟ್ ಆಗಿದೆ. ಮಯಾಂಕ್ ಅಗರ್ವಾಲ್, ದೇವ್‌ದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್ ಮತ್ತು ಮನೀಶ್ ಪಾಂಡೆ ಅವರ ಉಪಸ್ಥಿತಿ ಕರ್ನಾಟಕ ಬ್ಯಾಟಿಂಗ್ ಉತ್ತಮ ಸ್ಥಿತಿಯಲ್ಲಿದೆ.

ಭಾರತ ತಂಡಕ್ಕೆ ಹಿಂದಿರುಗಿದ ನಂತರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರವೀಂದ್ರ ಜಡೇಜಾಭಾರತ ತಂಡಕ್ಕೆ ಹಿಂದಿರುಗಿದ ನಂತರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರವೀಂದ್ರ ಜಡೇಜಾ

ಕರ್ನಾಟಕ ತಂಡವು ತನ್ನ ಬೌಲಿಂಗ್ ದಾಳಿಯಲ್ಲಿಯೂ ಬಲಿಷ್ಠವಾಗಿದೆ ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಸಹಾಯವಾಗುವ ಮೈದಾನವಾಗಿದ್ದರೆ, ಅದನ್ನು ಬಳಸಿಕೊಳ್ಳಲು ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್‌ನಂತಹ ಇಬ್ಬರು ಗುಣಮಟ್ಟದ ಸ್ಪಿನ್ನರ್‌ಗಳು ಸಜ್ಜಾಗಿದ್ದಾರೆ.

ಇನ್ನು ಕೇರಳ ತನ್ನ ಕೊನೆಯ ರಣಜಿ ಟ್ರೋಫಿ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ 204 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಜಲಜ್ ಸಕ್ಸೇನಾ ಈ ಋತುವಿನಲ್ಲಿ ಕೇರಳದ ಅತ್ಯುತ್ತಮ ಬೌಲರ್ ಆಗಿದ್ದಾರೆ.

ಈ ಆಫ್-ಸ್ಪಿನ್ನರ್‌ ಕಳೆದ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ 36 ರನ್‌ಗೆ 8 ವಿಕೆಟ್ ಪಡೆದರು ಮತ್ತು ಕರ್ನಾಟಕದ ವಿರುದ್ಧ ಕೇರಳ ತಂಡಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಸರ್ವಿಸಸ್ ವಿರುದ್ಧ, ಜಲಜ್ ತನ್ನ ಸಹ ಸ್ಪಿನ್ನರ್‌ಗಳಿಂದ ಬೆಂಬಲವನ್ನು ಕಂಡುಕೊಂಡರು ಮತ್ತು ಅವರು ಒಂದು ಘಟಕವಾಗಿ ಉತ್ತಮವಾಗಿ ಬೌಲ್ ಮಾಡಿದರು.

ಕೇರಳದ ಕೋಚ್ ಟಿನು ಯೋಹನ್ನನ್ ಅವರು ಕರ್ನಾಟಕದ ತಂಡದ ಸಾಮರ್ಥ್ಯವನ್ನು ಒಪ್ಪಿಕೊಂಡರು ಮತ್ತು ಈ ಮುಖಾಮುಖಿಯಲ್ಲಿ ಪಂದ್ಯವನ್ನು ಗೆಲ್ಲಲು ಕೇರಳ ತಂಡವು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾಗುತ್ತದೆ ಎಂದು ಹೇಳಿದರು.

"ನಾವು ನಮ್ಮ ಆಟದ ಮೇಲೆ ಗಮನವಿರಿಸಬೇಕು ಮತ್ತು ಎದುರಾಳಿಗಳ ಬಗ್ಗೆ ಚಿಂತಿಸಬಾರದು. ಕರ್ನಾಟಕದ ಮೇಲೆ ಒತ್ತಡ ಹೇರಲು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕು," ಎಂದು ತಿಳಿಸಿದರು.

ಕರ್ನಾಟಕ vs ಕೇರಳ ತಂಡಗಳು ಸಂಭಾವ್ಯ ಆಡುವ 11ರ ಬಳಗ
ಕೇರಳ: ಪೊನ್ನನ್ ರಾಹುಲ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ರೋಹನ್ ಪ್ರೇಮ್, ಸಚಿನ್ ಬೇಬಿ, ವತ್ಶಾಲ್ ಗೋವಿಂದ್, ಸಲ್ಮಾನ್ ನಿಜಾರ್, ಅಕ್ಷಯ್ ಚಂದ್ರನ್, ಸಿಜೋಮನ್ ಜೋಸೆಫ್ (ನಾಯಕ), ವೈಶಾಖ್ ಚಂದ್ರನ್, ಬೆಸಿಲ್ ಥಂಪಿ, ಎಂಡಿ ನಿಧೀಶ್.

ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ದೇವ್‌ದತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಎಸ್ ಶರತ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ವಿಜಯ್ ಕುಮಾರ್ ವೈಶಾಕ್, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್.

Story first published: Tuesday, January 17, 2023, 5:50 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X