ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರನ್ ದಾಖಲಿಸಿದ ಪೃಥ್ವಿ ಶಾ

Ranji Trophy 2022-23: Mumbai Batter Prithvi Shaw Scored 2nd Highest Runs In Ranji Trophy History

ಮುಂಬೈ ಮತ್ತು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಣಜಿ ಟ್ರೋಫಿಯಲ್ಲಿ 400 ರನ್ ಗಳಿಸಿದ ಏಕೈಕ ಭಾರತೀಯ ಕ್ರಿಕೆಟಿಗನಾಗಲು ಕೇವಲ 21 ರನ್‌ಗಳಿಂದ ಹಿಂದೆ ಬಿದ್ದರು. ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದ 2ನೇ ದಿನದಂದು ಪೃಥ್ವಿ ಶಾ 379 ರನ್ ಗಳಿಸಿ ಔಟಾಗುವ ಮೊದಲು, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ 377 ರನ್ ದಾಖಲೆ ಮುರಿದು, ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು.

Ranji Trophy 2022-23: ರಣಜಿ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೈದಾನಕ್ಕಿಳಿದ ಮಹಿಳಾ ಅಂಪೈರ್‌ಗಳುRanji Trophy 2022-23: ರಣಜಿ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೈದಾನಕ್ಕಿಳಿದ ಮಹಿಳಾ ಅಂಪೈರ್‌ಗಳು

1948-49ರ ರಣಜಿ ಟ್ರೋಫಿ ಋತುವಿನಲ್ಲಿ ಸೌರಾಷ್ಟ್ರ ವಿರುದ್ಧ ಮಹಾರಾಷ್ಟ್ರ ತಂಡದ ಪರವಾಗಿ ಬಿಬಿ ನಿಂಬಾಳ್ಕರ್ ಅವರು ಅಜೇಯ 443 ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿ ಉಳಿದಿದೆ.

23 ವರ್ಷ ವಯಸ್ಸಿನ ಪೃಥ್ವಿ ಶಾ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ದಾರಿಯಲ್ಲಿ ಹಲವಾರು ದಾಖಲೆಗಳನ್ನು ಮುರಿದರು. 379 ರನ್‌ಗಳ ಗಳಿಸಿ, ರಣಜಿ ಕ್ರಿಕೆಟ್‌ನಲ್ಲಿ ಕೆಲವು ದಿಗ್ಗಜ ಆಟಗಾರರ ವೈಯಕ್ತಿಕ ಸ್ಕೋರ್‌ಗಳನ್ನು ಮೀರಿಸಿರುವುದು ವಿಶೇಷವಾಗಿದೆ.

383 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 49 ಬೌಂಡರಿಗಳ ಸಮೇತ 379 ರನ್

383 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 49 ಬೌಂಡರಿಗಳ ಸಮೇತ 379 ರನ್

1990-91ರ ರಣಜಿ ಟ್ರೋಫಿ ಋತುವಿನಲ್ಲಿ ಸಂಜಯ್ ಮಂಜ್ರೇಕರ್ ಹೈದರಾಬಾದ್ ವಿರುದ್ಧ 377 ರನ್ ಗಳಿಸಿದ್ದರು. ಇದೀಗ ಮುಂಬೈ ಬ್ಯಾಟರ್ ಪೃಥ್ವಿ ಶಾ 33 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.

ಮುಂಬೈ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅಂತಿಮವಾಗಿ ಅಸ್ಸಾಂ ಆಲ್‌ರೌಂಡರ್ ರಿಯಾನ್ ಪರಾಗ್ ಅವರ ಎಸೆತದಲ್ಲಿ ಔಟಾಗುವ ಮುನ್ನ ಕೇವಲ 383 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು 49 ಬೌಂಡರಿಗಳ ಸಮೇತ 379 ರನ್ ಬಾರಿಸಿದರು.

ಪೃಥ್ವಿ ಶಾ ಔಟಾಗುತ್ತಿದ್ದಂತೆಯೇ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಮೂರನೇ ವಿಕೆಟ್‌ಗೆ 401 ರನ್‌ಗಳ ಜೊತೆಯಾಟ ಕೊನೆಗೊಂಡಿತು. ಪೃಥ್ವಿ ಶಾ 107 ಎಸೆತಗಳಲ್ಲಿ ಶತಕ, 235 ಎಸೆತಗಳಲ್ಲಿ ದ್ವಿಶತಕ ಮತ್ತು 326 ಎಸೆತಗಳಲ್ಲಿ ತ್ರಿಶತಕ ಪೂರೈಸಿದ್ದರು.

ಸುನಿಲ್ ಗವಾಸ್ಕರ್ ಅವರ 340 ರನ್‌ಗಳ ದಾಖಲೆ ಮುರಿದ ಪೃಥ್ವಿ ಶಾ

ಸುನಿಲ್ ಗವಾಸ್ಕರ್ ಅವರ 340 ರನ್‌ಗಳ ದಾಖಲೆ ಮುರಿದ ಪೃಥ್ವಿ ಶಾ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಮುಂಬೈ ಪರ ಸುನಿಲ್ ಗವಾಸ್ಕರ್ ಅವರ 340 ರನ್‌ಗಳ ದಾಖಲೆಯನ್ನು ಪೃಥ್ವಿ ಶಾ ಮೊದಲು ಮುರಿದರು. ನಂತರ ಚೇತೇಶ್ವರ ಪೂಜಾರ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನೂ ಮೀರಿಸಿದರು.

2012-13ರ ರಣಜಿ ಟ್ರೋಫಿ ಋತುವಿನಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ತಂಡದ ಪರ ಚೇತೇಶ್ವರ ಪೂಜಾರ 352 ರನ್ ಗಳಿಸಿದ್ದರು. ಇನ್ನು 1999-2000 ಋತುವಿನಲ್ಲಿ ಹೈದರಾಬಾದ್ ತಂಡದ ಪರ ಕರ್ನಾಟಕ ವಿರುದ್ಧ ವಿವಿಎಸ್ ಲಕ್ಷ್ಮಣ್ ಗಳಿಸಿದ 353 ರನ್‌ಗಳ ದಾಖಲೆಯನ್ನು ಬುಧವಾರ ಮುಂಬೈ ಆಟಗಾರ ಪೃಥ್ವಿ ಶಾ ಬ್ರೇಕ್ ಮಾಡಿದರು.

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರ ಪಟ್ಟಿ

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರ ಪಟ್ಟಿ

1. ಬಿಬಿ ನಿಂಬಾಳ್ಕರ್ (ಮಹಾರಾಷ್ಟ್ರ) - ಸೌರಾಷ್ಟ್ರ ತಂಡದ ವಿರುದ್ಧ ಅಜೇಯ 443 ರನ್ (1948-49)

2. ಪೃಥ್ವಿ ಶಾ (ಮುಂಬೈ) - ಅಸ್ಸಾಂ ವಿರುದ್ಧ 379 ರನ್ (2022-23)

3. ಸಂಜಯ್ ಮಂಜ್ರೇಕರ್ (ಮುಂಬೈ) - ಹೈದರಾಬಾದ್ ವಿರುದ್ಧ 377 ರನ್ (1990-91)

4. ಎಂವಿ ಶ್ರೀಧರ್ (ಹೈದರಾಬಾದ್) - ಆಂಧ್ರಪ್ರದೇಶ ವಿರುದ್ಧ 366 ರನ್ (1993-94)

5. ವಿಜಯ್ ಮರ್ಚೆಂಟ್ (ಮುಂಬೈ) - ಮಹಾರಾಷ್ಟ್ರ ವಿರುದ್ಧ ಅಜೇಯ 359 ರನ್ (1943-44)

ರಣಜಿ ಟ್ರೋಫಿಯ ಐದನೇ ಸುತ್ತಿನ ಪಂದ್ಯದಲ್ಲಿ ಮುಂಬೈ ಪ್ರಸ್ತುತ ಮೂರು ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿದೆ ಮತ್ತು ನಾಯಕ ಅಜಿಂಕ್ಯ ರಹಾನೆ 259 ಎಸೆತಗಳಲ್ಲಿ 139 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಹಾನೆ ಅವರ ಇನ್ನಿಂಗ್ಸ್ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿದೆ.

Story first published: Wednesday, January 11, 2023, 13:15 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X