
ಮಹಿಪಾಲ್ ಲೊಮ್ರೋರ್ ಹೋರಾಟ ವ್ಯರ್ಥ
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ಅತ್ಯುತ್ತಮ ಆರಂಭ ಪಡೆದುಕೊಂಡಿತು. ಆರ್ ಸಿಬಿ ಆಟಗಾರ ಮಹಿಪಾಲ್ ಲೊಮ್ರೋರ್ 83 ಎಸೆತಗಳಲ್ಲಿ 11 ಬೌಂಡರಿ 6 ಭರ್ಜರಿ ಸಿಕ್ಸರ್ ನೆರವಿನಿಂದ 99 ರನ್ ಗಳಿಸಿ ಕೇವಲ 1 ರನ್‌ನಿಂದ ಶತಕ ವಂಚಿತರಾದರು.
ಆದಿತ್ಯ ಗರ್ಹ್ವಾಲ್ 66 ರನ್, ಎಸ್‌ವಿ ಜೋಷಿ 63 ರನ್ ಗಳಿಸಿ ಉತ್ತಮ ಹೋರಾಟ ನೀಡಿದರು. ಮಹಿಪಾಲ್ ಲೋಮ್ರರ್ ಮತ್ತು ಆದಿತ್ಯ ಗರ್ಹ್ವಾಲ್ ಔಟಾಗುತ್ತಿದ್ದಂತೆ ರಾಜಸ್ಥಾನದ ಬ್ಯಾಟಿಂಗ್ ಕುಸಿತ ಕಂಡಿತು, ಅಂತಿಮವಾಗಿ 330 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೇವಲ 14 ರನ್‌ಗಳ ಮುನ್ನಡೆ ಪಡೆದುಕೊಂಡಿತು.
ವಾಸುಕಿ ಕೌಶಿಕ್ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ 4 ವಿಕೆಟ್ ಪಡೆದು ಮಿಂಚಿದರೆ, ಕೃಷ್ಣಪ್ಪ ಗೌತಮ್ 3 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಸಮರ್ಥ್ ಅಜೇಯ 5 ಮತ್ತು ಮಯಾಂಕ್ ಅಗರ್ವಾಲ್ ಅಜೇಯ 10 ರನ್ ಗಳಿಸಿ ಕರ್ನಾಟಕ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು. ಶತಕ ಗಳಿಸಿ ಮಿಂಚಿದ ಮನೀಶ್ ಪಾಂಡೆ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.
ಉಪನಾಯಕನನ್ನೇ ಪ್ಲೇಯಿಂಗ್ XI ನಿಂದ ಹೊರಗಿಟ್ಟ ಪಾಕ್ ವರ್ತನೆಗೆ ರಮೀಝ್ ರಾಜಾ ಕಿಡಿ

ಅಗ್ರಸ್ಥಾನದಲ್ಲಿ ಕರ್ನಾಟಕ
ರಾಜಸ್ಥಾನದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಟಕ ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ. 5 ಪಂದ್ಯಗಳಲ್ಲಿ 3 ಜಯ, 2 ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ 26 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಕೇರಳದ ವಿರುದ್ಧ ಆಡಲಿದೆ. ಜನವರಿ 17 ರಂದು ಈ ಪಂದ್ಯ ಆರಂಭವಾಗಲಿದ್ದು, ತಿರುವನಂತಪುರದ ಸೆಂಟ್ ಸೇವಿಯರ್ ಕಾಲೇಜು ಆವರಣದಲ್ಲಿ ನಡೆಯಲಿದೆ.

ಉಭಯ ತಂಡಗಳ ಪ್ಲೇಯಿಂಗ್ XI
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ್ ಪಡಿಕ್ಕಲ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ
ರಾಜಸ್ಥಾನ: ಯಶ್ ಕೊಠಾರಿ, ಕುನಾಲ್ ಸಿಂಗ್ ರಾಥೋಡ್, ಮಹಿಪಾಲ್ ಲೊಮ್ರೋರ್, ಮಾನವ್ ಸುತಾರ್, ಸಮರ್ಪಿತ್ ಜೋಶಿ, ಕರಣ್ ಲಂಬಾ, ಅರಾಫತ್ ಖಾನ್, ಅಶೋಕ್ ಮೆನಾರಿಯಾ (ನಾಯಕ), ರಿತುರಾಜ್ ಸಿಂಗ್, ಅನಿಕೇತ್ ಚೌಧರಿ, ಆದಿತ್ಯ ಗರ್ವಾಲ್