ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಂಗಾಳ ಮಣಿಸಿ ಹೊಸ ಇತಿಹಾಸ ಸೃಷ್ಟಿಸಿದ ಕರ್ನಾಟಕ

By Mahesh

ಕೋಲ್ಕತ್ತಾ, ಡಿ.17: ಬೆಂಗಾಳ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಈಡೆನ್ ಗಾರ್ಡನ್ ಮೈದಾನದಲ್ಲಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಹೊಸ ಇತಿಹಾಸ ಸೃಷ್ಟಿಸಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಗೆಲ್ಲಲು ಬೇಕಿದ್ದ 71ರನ್ ಗಳನ್ನು ಒಂದು ವಿಕೆಟ್ ಕಳೆದುಕೊಂಡು ಸಾಧಿಸಿದ ಕರ್ನಾಟಕ ಗೆಲುವಿನ ನಗೆ ಬೀರಿತು. ಆದರೆ, ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ಮುಟ್ಟಿದ್ದರೆ ಕರ್ನಾಟಕಕ್ಕೆ ಬೋನಸ್ ಅಂಕ ಸಿಗುತ್ತಿತ್ತು.

71ರನ್ ಬೆನ್ನು ಹತ್ತಿದ್ದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಕ್ಕಿತು. ಬಿರುಸಿನ ಹೊಡೆತದಿಂದ ಗಮನ ಸೆಳೆದು ಆಡುತ್ತಿದ್ದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಆಯತಪ್ಪಿ ಸ್ಟಂಪ್ ಔಟ್ ಆದರು. ರಾಬಿನ್ 36 ಎಸೆತಗಳಲ್ಲಿ 54 ರನ್ (10 ಬೌಂಡರಿ, 1 ಸಿಕ್ಸರ್) ಹೊಡೆದರೆ, ಮಾಯಾಂಕ್ ಅಗರವಾಲ್ 17 ರನ್ ಗಳಿಸಿ ಔಟಾಗದೆ ಉಳಿದು ಗೆಲುವಿನ ದಡ ಮುಟ್ಟಿದರು.

Karnataka defeat Bengal by 9 wickets

ಗೆಲುವಿಗೆ ಕಾರಣರಾದವರು: ಕರ್ನಾಟಕದ ಮೊದಲ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 145 (197 ಎ, 19 ಬೌಂ, 1ಸಿಕ್ಸ್ ) ಬೆಂಗಾಳ ಎರಡನೇ ಇನ್ನಿಂಗ್ಸ್ ಬೆನ್ನಲುಬು ಮುರಿದ ವಿನಯ್ ಕುಮಾರ್ 34/6 ವಿಕೆಟ್ ಕಿತ್ತು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 15ನೇ ಬಾರಿಗೆ ಐದು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಕಿತ್ತ ಬೌಲರ್ ಎನಿಸಿದರು.

ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವ ಮನೋಜ್ ತಿವಾರಿ ಹೆಲ್ಮೆಟ್ ಗೆ ಚೆಂಡು ಬಡಿದಿದ್ದರಿಂದಲೋ ಏನೋ ಅವರ ಆಟ ಮಂಕಾಯಿತು.

Karnataka defeat Bengal by 9 wickets2

ಸಂಕ್ಷಿಪ್ತ ಸ್ಕೋರ್:
ಮೊದಲ ಇನ್ನಿಂಗ್ಸ್ :
ಕರ್ನಾಟಕ : 408 ಆಲೌಟ್ (ಶ್ರೇಯಸ್ ಗೋಪಾಲ್ 145, ಸಿಎಂ ಗೌತಮ್ 63, ವಿನಯ್ ಕುಮಾರ್ 42, ಅಶೋಕ್ ದಿಂಡಾ 87/7, ವಿಪಿ ಸಿಂಗ್ 98/3)
ಬೆಂಗಾಳ: 251 (ಶ್ರೀವತ್ಸ್ ಗೋಸ್ವಾಮಿ 68, ಸುದೀಪ್ತ್ ಚಟರ್ಜಿ57, ರೋಹನ್ ಬ್ಯಾನರ್ಜಿ 46, ವಿನಯ್ ಕುಮಾರ್ 56/3, ಅರವಿಂದ್ ಶ್ರೀನಾಥ್ 31/3)

ಎರಡನೇ ಇನ್ನಿಂಗ್ಸ್:
ಬೆಂಗಾಳ : 227ಕ್ಕೆ ಆಲೌಟ್ (ಸುದೀಪ್ತ್ ಚಟರ್ಜಿ 59, ಲಕ್ಷ್ಮಿ ಶುಕ್ಲಾ 57, ವಿನಯ್ ಕುಮಾರ್ 34/6, ಅರವಿಂದ್ ಶ್ರೀನಾಥ್ 54/2)
ಕರ್ನಾಟಕ : 71 (ರಾಬಿನ್ ಉತ್ತಪ್ಪ 54)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X