ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ಆಂಧ್ರ ಮಣಿಸಿ ಸೆಮಿಫೈಲ್‌ ಪ್ರವೇಶಿಸಿದ ಹಾಲಿ ಚಾಂಪಿಯನ್ ಮಧ್ಯಪ್ರದೇಶ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ಪ್ರದೇಶದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಹಾಲಿ ಚಾಂಪಿಯನ್ ಮಧ್ಯಪ್ರದೇಶ ಸೆಮಿಫೈನಲ್‌ ಪ್ರವೇಶಿಸಿದೆ.

ನಾಯಕ ಹನುಮ ವಿಹಾರಿ ಗಾಯಗೊಂಡಿದ್ದು ಆಂಧ್ರ ಪ್ರದೇಶ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಎರಡೂ ಇನ್ನಿಂಗ್ಸ್‌ನಲ್ಲಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದರೂ ನಾಯಕ ಹನುಮ ವಿಹಾರಿಗೆ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್‌ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್‌ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ

ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್‌ ಗಳಿಸಿದ್ದ ಆಂಧ್ರಪ್ರದೇಶ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 93 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿದ್ದ ಮಧ್ಯಪ್ರದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳ ಗುರಿಯನ್ನು 5 ವಿಕೆಟ್‌ ಕಳೆದುಕೊಂಡು ಬೆನ್ನತ್ತುವ ಮೂಲಕ 5 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಮಧ್ಯ ಪ್ರದೇಶ ತಂಡಕ್ಕೆ ಆಂಧ್ರ ಬ್ಯಾಟರ್ ಗಳು ಕಠಿನ ಸವಾಲು ಒಡ್ಡಿದರು. ರಿಕಿ ಭುಯಿ ಮತ್ತು ಕರಣ್ ಶಿಂಧೆ ಶತಕ ಗಳಿಸುವ ಮೂಲಕ ಆಂಧ್ರ ಪ್ರದೇಶ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು. ರಿಕಿ ಭುಯಿ 149 ರನ್ ಗಳಸಿದರೆ, ಕರಣ್ ಶಿಂಧೆ 110 ರನ್ ಗಳಿಸಿದರು.

Ranji Trophy: Madhya Pradesh Won By 5 wickets Against Andhra Enters Semi Final

ಗಾಯಗೊಂಡರು ಹನುಮ ವಿಹಾರಿ ಬ್ಯಾಟಿಂಗ್

ಆವೇಶ್ ಖಾನ್ ಬೌಲಿಂಗ್‌ನಲ್ಲಿ ಬಲಗೈಗೆ ಏಟು ತಿಂದು ಗಾಯಗೊಂಡಿದ್ದರು. ಎಡಗೈ ಬ್ಯಾಟರ್ ಆಗಿ ಬದಲಾದ ಹನುಮ ವಿಹಾರಿ ಒಂದೇ ಕೈನಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಂಧ್ರ ಪ್ರದೇಶ 379 ರನ್‌ಗಳಿಗೆ ಆಲೌಟ್ ಆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ 228 ರನ್‌ಗಳಿಗೆ ಆಲೌಟ್ ಆಗುವ ಮೂಲಕ 151 ರನ್‌ಗಳ ಹಿನ್ನಡೆ ಅನುಭವಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಂಧ್ರ ಪ್ರದೇಶ ಕಳಪೆ ಆಟವಾಡಿತು.

ಮಧ್ಯಪ್ರದೇಶ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಆಂಧ್ರಪ್ರದೇಶ 93 ರನ್‌ಗಳಿಗೆ ಆಲೌಟ್ ಆಗುವ ಮೂಲಕ 244 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಆವೇಶ್ ಖಾನ್ 4 ವಿಕೆಟ್ ಪಡೆದು ಮಿಂಚಿದರು. ಗೌರವ್ ಯಾದವ್ 3 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ 2 ವಿಕೆಟ್ ಪಡೆದರು.

Ranji Trophy: Madhya Pradesh Won By 5 wickets Against Andhra Enters Semi Final

ಮಧ್ಯಪ್ರದೇಶ ಉತ್ತಮ ಬ್ಯಾಟಿಂಗ್

ಗೆಲುವಿಗಾಗಿ 245 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಧ್ಯಪ್ರದೇಶ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಯಶ್ ದುಬೆ 58 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು. ಹಿಮಾಂಶು ಮಂತ್ರಿ 31, ಶುಭಮ್ ಶರ್ಮಾ 40 ರನ್, ರಜತ್ ಪಟಿದಾರ್ 55 ರನ್, ಸರಂಶ್ ಜೈನ್ 28 ರನ್ ಗಳಿಸಿ ಮಧ್ಯಪ್ರದೇಶದ ಚೇಸಿಂಗ್‌ಗೆ ಸಹಾಯ ಮಾಡಿದರು.

ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿದ ಮಧ್ಯಪ್ರದೇಶ 5 ವಿಕೆಟ್‌ಗಳ ಜಯದೊಂದಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕರ್ನಾಟಕ, ಮಧ್ಯಪ್ರದೇಶ, ಬೆಂಗಾಲ್ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು. ಪಂಜಾಬ್ ಮತ್ತು ಸೌರಾಷ್ಟ್ರ ತಂಡಗಳು ಉಳಿದ ಒಂದು ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ.

Story first published: Friday, February 3, 2023, 16:58 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X