ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ಅಸ್ಸಾಂ ವಿರುದ್ಧ ಅಜೇಯ 240 ರನ್ ಚಚ್ಚಿದ ಪೃಥ್ವಿ ಶಾ

Ranji Trophy: Prithvi Shaw Smashes Unbeaten 240 Runs Against Assam

ಕಳೆದ ಒಂದೂವರೆ ವರ್ಷದಿಂದ ಭಾರತ ತಂಡಕ್ಕೆ ಆಯ್ಕೆಯಾಗದೆ ಪದೇ ಪದೇ ನಿರ್ಲಕ್ಷಿಸಲ್ಪಟ್ಟರು ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದಾರೆ.

ಅಸ್ಸಾಂ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಪೃಥ್ವಿ ಶಾ ದ್ವಿಶತಕ ಗಳಿಸುವ ಮೂಲಕ ಮಿಂಚಿದ್ದಾರೆ. 240 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಎರಡನೇ ದಿನ ತ್ರಿಶತಕ ಗಳಿಸುವತ್ತ ಕಣ್ಣಿಟ್ಟಿದ್ದಾರೆ. ಪೃಥ್ವಿ ಶಾ ಅಜೇಯ ದ್ವಿಶತಕದ ನೆರವಿನೊಂದಿಗೆ ಮುಂಬೈ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 397 ರನ್ ಗಳಿಸಿದೆ.

ಗುವಾಹಟಿಯ ಅಮಿಂಗಾನ್ ಕ್ರಿಕೆಟ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪೃಥ್ವಿ ಶಾ ಅಬ್ಬರಿಸಿದರು. ಗುವಾಹಟಿಯ ಮತ್ತೊಂದು ಬರ್ಸಾಪರ ಅಂಗಳದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಿದರೆ, ಇನ್ನೊಂದು ಕ್ರೀಡಾಂಗಣದಲ್ಲಿ ಪೃಥ್ವಿ ಶಾ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.

ಟಾಸ್ ಗೆದ್ದ ಅಸ್ಸಾಂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಆದರೆ ತಮ್ಮ ನಿರ್ಧಾರ ತಪ್ಪೆಂದು ಅವರಿಗೆ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಮುನ್ಷೀರ್ ಖಾನ್ ಮೊದಲನೇ ವಿಕೆಟ್‌ಗೆ 123 ರನ್ ಕಲೆಹಾಕಿ ಉತ್ತಮ ಅಡಿಪಾಯ ಹಾಕಿದರು.

ಮುನ್ಷೀರ್ ಖಾನ್ 42 ರನ್ ಗಳಿಸಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಅರ್ಮಾನ್ ಜಾಫರ್ 27 ರನ್ ಗಳಿಸಿ ಪೃಥ್ವಿ ಶಾಗೆ ಸಾಥ್ ನೀಡಿದರು. ಈ ಜೊಡಿ ಎರಡನೇ ವಿಕೆಟ್‌ಗೆ 74 ರನ್ ಗಳಿಸಿದರು.

IND vs SL 1st ODI : ನಾಯಕ ದಸುನ್ ಶನಕ ಹೋರಾಟ ವ್ಯರ್ಥ, 67 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾIND vs SL 1st ODI : ನಾಯಕ ದಸುನ್ ಶನಕ ಹೋರಾಟ ವ್ಯರ್ಥ, 67 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ

ನಂತರ ಪೃಥ್ವಿ ಶಾ ಜೊತೆಯಾದ ನಾಯಕ ಅಜಿಂಕ್ಯ ರಹಾನೆ ದಿನವಿಡೀ ಅಸ್ಸಾಂ ಬೌಲರ್ ಗಳನ್ನು ಕಾಡಿದರು. ಈ ಜೋಡಿ 3ನೇ ವಿಕೆಟ್‌ಗೆ ಅಜೇಯ 200 ರನ್ ಕಲೆಹಾಕಿದ್ದು, ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದೆ. ಅಜಿಂಕ್ಯ ರಹಾನೆ ಅಜೇಯ 73 ರನ್ ಗಳಿಸಿದ್ದು ಎರಡನೇ ದಿನ ಶತಕ ಗಳಿಸುವ ಯೋಜನೆಯಲ್ಲಿದ್ದಾರೆ.

Ranji Trophy: Prithvi Shaw Smashes Unbeaten 240 Runs Against Assam

ಪೃಥ್ವಿ ಶಾ ಅತ್ಯಧಿಕ ವೈಯಕ್ತಿ ಸ್ಕೋರ್

ಅಸ್ಸಾಂ ವಿರುದ್ಧ ಅಜೇಯ 240 ರನ್ ಗಳಿಸುವ ಮೂಲಕ ಪೃಥ್ವಿ ಶಾ ತಮ್ಮ ಅತ್ಯಧಿಕ ವೈಯಕ್ತಿಕ ರನ್ ದಾಖಲಸಿದ್ದಾರೆ. ಪ್ರಥಮ ದರ್ಜೆ ಪಂದ್ಯದಲ್ಲಿ 202 ರನ್ ಅವರು ಇದುವರೆಗು ಗಳಿಸಿದ ಅತ್ಯಧಿಕ ವೈಯಕ್ತಿಕ ರನ್ ಆಗಿತ್ತು. ಎರಡನೇ ದಿನ ಅವರಿಗೆ ತ್ರಿಶತಕ ಗಳಿಸುವ ಅವಕಾಶವಿದೆ.

ಕಳೆದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲನುಭವಿಸುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಬೋನಸ್ ಅಂಕಗಳೊಂದಿಗೆ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಕಾತರದಲ್ಲಿದೆ ಮುಂಬೈ ತಂಡ.

Story first published: Tuesday, January 10, 2023, 23:02 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X