ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅವನ ಆಟ ನೋಡಿ ಜನ ಸಚಿನ್‌ನ ಮರೀತಾರೆ' ಎಂದಿದ್ದರಂತೆ ಪಾಕ್ ಕ್ರಿಕೆಟಿಗ!

Rashid Latif explains how former Pakistan bowler introduced MS Dhoni to him

ಬೆಂಗಳೂರು: ಭಾರತದ ದಂತಕತೆ ಸಚಿನ್‌ ತೆಂಡೂಲ್ಕರ್‌ಗೆ ಸರಿಸಾಟಿಯಿಲ್ಲ. ಇದೇ ಕಾರಣಕ್ಕೆ ಸಚಿನ್‌ಗೆ 'ಕ್ರಿಕೆಟ್ ದೇವರು' ಅನ್ನೋ ಹೆಸರಿದೆ. ಶತಕದ ಶತಕ ಬಾರಿಸಿದ ವಿಶ್ವದ ಏಕಮಾತ್ರ ಆಟಗಾರ ಸಚಿನ್. ಕ್ರಿಕೆಟ್‌ ರಂಗದಲ್ಲಿ ಸಚಿನ್ ಮಾಡಿರದ ಬ್ಯಾಟಿಂಗ್ ದಾಖಲೆಯೇ ಕಡಿಮೆ. ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ, ಸಚಿನ್ ಅವರ ಹಲವಾರು ದಾಖಲೆಗಳನ್ನು ಮುರಿಯುತ್ತಾ ಬರುತ್ತಿದ್ದಾರೆ ನಿಜ. ಆದರೆ ಕೊಹ್ಲಿ ಯಾವತ್ತಿಗೂ ಕ್ರಿಕೆಟ್ ದೇವರು ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ರಂಗಕ್ಕೆ ಒಬ್ಬರೇ ದೇವರು. ಅದು ಭಾರತದ ಹೆಮ್ಮೆಯ ಸಚಿನ್.

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

ಸಚಿನ್ ತೆಂಡೂಲ್ಕರ್ ಆಟ ನೋಡಲು ಚಂದ. ಕೌಶಲಭರಿತ ಬ್ಯಾಟಿಂಗ್‌ನಿಂದ ಸಚಿನ್ ವಿಶ್ವಶ್ರೇಷ್ಠ ಬೌಲರ್‌ಗಳನ್ನು ಬೆವರಳಿಸಿದ್ದಿದೆ. ಇಂಥ ಸಚಿನ್‌ನನ್ನು ಮರೆಸಬಲ್ಲ ಬ್ಯಾಟ್ಸ್‌ಮನ್ ಭಾರತದಲ್ಲಿ ಮತ್ತೊಬ್ಬರಿದ್ದಾರೆಯೇ?

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

'ಆತನ ಆಟ ನೋಡಿದರೆ ಜನ ಸಚಿನ್‌ನನ್ನೇ ಮರೆತುಬಿಡುತ್ತಾರೆ' ಅಂತ ಪಾಕಿಸ್ತಾನದ ಮಾಜಿ ವೇಗಿಯೊಬ್ಬರು ಭಾರತದ ಆಟಗಾರನನ್ನು ತನ್ನ ಸಹ ಆಟಗಾರನಿಗೆ ಪರಿಚಯಿಸಿದ್ದರಂತೆ.

ಭಾರತದ ಪ್ರತಿಭಾನ್ವಿತ ಆಟಗಾರ

ಭಾರತದ ಪ್ರತಿಭಾನ್ವಿತ ಆಟಗಾರ

ಯೂಟ್ಯೂಬ್ ಶೋ ಕಾಟ್ ಬಿಹೈಂಡ್ ನಲ್ಲಿ ಮಾತನಾಡಿದ ಪಾಕಿಸ್ತಾನ ಮಾಜಿ ನಾಯಕ ರಶೀದ್ ಲತೀಫ್, ತಂಡದ ವೇಗಿ ತನ್ವೀರ್ ಅಹ್ಮದ್ ಅವರು ಭಾರತದ ಮಾಜಿ ನಾಯಕ ಎಂಎಸ್ ಧೋನಿಯನ್ನು ಪರಿಚಯಿಸಿದ ಬಗೆ ವಿವರಿಸಿದರು. ಫೋನ್ ಕಾಲ್‌ನಲ್ಲಿ ತನ್ವೀರ್ ಅವರು ಧೋನಿ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ.

ಕ್ಷಣ ಸ್ಮರಿಸಿದ ರಶೀದ್

ಕ್ಷಣ ಸ್ಮರಿಸಿದ ರಶೀದ್

'2004ರ ಕೀನ್ಯಾ ಪ್ರವಾಸಕ್ಕೆ ಹೋಗಿದ್ದ ತನ್ವೀರ್ ನನಗೆ ಫೋನ್ ಮಾಡಿದರು. ನಾನಾಗ ಇಂಗ್ಲೆಂಡ್‌ನಲ್ಲಿದ್ದೆ. ಆಗ ತನ್ವೀರ್ ನನ್ನ ಬಳಿ, ಸಚಿನ್ ಅವರನ್ನು ಜನ ಮರೆಯಬಲ್ಲ ಆಟಗಾರ ಭಾರತದಲ್ಲಿದ್ದಾರೆ. ಧೋನಿ ಅವರ ಹೆಸರು,' ಎಂದಿದ್ದರು ಎಂದು ತನ್ವೀರ್ ಅವರು ಧೋನಿಯನ್ನು ಪರಿಚಯಿಸಿದ ಕ್ಷಣವನ್ನು ರಶೀದ್ ಸ್ಮರಿಸಿಕೊಂಡರು (ಚಿತ್ರದಲ್ಲಿ ಲತೀಫ್).

ಸಚಿನ್‌ಗೆ ಸಚಿನೇ ಸಾಟಿ

ಸಚಿನ್‌ಗೆ ಸಚಿನೇ ಸಾಟಿ

ಮಾತು ಮುಂದುವರೆಸಿದ ಲತೀಫ್, 'ಅದು ಸಾಧ್ಯವಿಲ್ಲ. ಸಚಿನ್‌ಗೆ ಸಚಿನೇ ಸಾಟಿ. ನೀನು ಅದು ಹೇಗೆ ಧೋನಿಯನ್ನು ಸಚಿನ್‌ಗೆ ಹೋಲಿಸುತ್ತೀಯ ಎಂದು ಲತೀಪ್‌ಗೆ ಆವತ್ತು ಪ್ರಶ್ನಿಸಿದ್ದೆ. ಆದರೆ ಧೋನಿ ತನ್ನ ವೃತ್ತಿ ಬದುಕು ಮತ್ತು ಬ್ರ್ಯಾಂಡ್‌ ಮೌಲ್ಯದ ವಿಚಾರದಲ್ಲಿ ಸಚಿನ್‌ಗೆ ತೀರಾ ಹತ್ತಿರ ಬಂದಿದ್ದಾರೆ,' ಎಂದರು.

ಅಪರೂಪದ ದಾಖಲೆಗಳು

ಅಪರೂಪದ ದಾಖಲೆಗಳು

ಧೋನಿ ಹೆಸರಿನಲ್ಲಿ ಅಪರೂಪದ ದಾಖಲೆಗಳಿವೆ. ಟೀಮ್ ಇಂಡಿಯಾಕ್ಕೆ ಐಸಿಸಿ ಪ್ರಮುಖ ಟ್ರೋಫಿಗಳನ್ನು (ಏಕದಿನ, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ) ಗೆಲ್ಲಿಸಿಕೊಟ್ಟ ಒಬ್ಬನೇ ಒಬ್ಬ ನಾಯಕ ಧೋನಿ. ವಿಶ್ವದಲ್ಲಿ ಈ ದಾಖಲೆಯಿರುವುದು ಧೋನಿ ಹೆಸರಲ್ಲಿ ಮಾತ್ರ. ಅಷ್ಟೇ ಅಲ್ಲ, 2009ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಬಾರಿ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಗಳಿಸಿತ್ತು.

Story first published: Wednesday, September 9, 2020, 14:18 [IST]
Other articles published on Sep 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X