ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಸೋಲಿಗೆ ಕಾರಣನಾದ ದ.ಆಫ್ರಿಕಾದ ಈ ಆಟಗಾರನನ್ನು ಕನ್ನಡಿಗನಿಗೆ ಹೋಲಿಸಿ ಹೊಗಳಿದ ರವಿಶಾಸ್ತ್ರಿ

Ravi Shastri appreciates Keagan Petersen for his heroic performance in the test series against India

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಜನವರಿ 14ರಂದು ಮುಕ್ತಾಯವಾಗಿದ್ದು, ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 2-1 ಅಂತರದಲ್ಲಿ ಗೆದ್ದು ಬೀಗಿದೆ. ಈ ಹಿಂದೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಾಗ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲಿದೆ ಎಂದು ಹಲವಾರು ಕ್ರಿಕೆಟ್ ಪಂಡಿತರು ಊಹೆ ಮಾಡಿದ್ದರು. ಆದರೆ ಈ ಊಹೆಗಳನ್ನೆಲ್ಲಾ ಹುಸಿಗೊಳಿಸಿರುವ ದಕ್ಷಿಣ ಆಫ್ರಿಕಾ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಸೋಲಿಸಿ ಸರಣಿ ಕೈ ವಶ ಪಡಿಸಿಕೊಂಡಿದೆ.

ಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರುಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರು

ಮೊದಲಿಗೆ ಇತ್ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಸೋಲನ್ನು ಅನುಭವಿಸಿದ್ದ ದಕ್ಷಿಣ ಆಫ್ರಿಕಾ ನಂತರ ನಡೆದ ದ್ವಿತೀಯ ಹಾಗೂ ತೃತೀಯ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ಸೋಲುಣಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತು. ದ್ವಿತೀಯ ಹಾಗೂ ತೃತೀಯ ಟೆಸ್ಟ್ ಪಂದ್ಯಗಳಲ್ಲಿ ಬಲಿಷ್ಠ ಟೀಮ್ ಇಂಡಿಯಾಗೆ ದಕ್ಷಿಣ ಆಫ್ರಿಕಾ ಸೋಲುಣಿಸಿದ್ದರ ಹಿಂದೆ ದಕ್ಷಿಣ ಆಫ್ರಿಕಾದ ಯುವ ಕ್ರಿಕೆಟಿಗ ಕೀಗನ್ ಪೀಟರ್ಸನ್ ಮಹತ್ವದ ಪಾತ್ರವನ್ನು ನಿರ್ವಹಿಸಿದರು.

ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ವಿದಾಯ: ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದೆಷ್ಟು, ಸೋತಿದ್ದೆಷ್ಟು?ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ವಿದಾಯ: ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದೆಷ್ಟು, ಸೋತಿದ್ದೆಷ್ಟು?

ಭಾರತದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 62 ರನ್ ಬಾರಿಸುವ ಮೂಲಕ ಹರಿಣಗಳಿಗೆ ಆಪದ್ಬಾಂಧವನಾಗಿದ್ದ ಕೀಗನ್ ಪೀಟರ್ಸನ್ ತೃತೀಯ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕಗಳನ್ನು ಬಾರಿಸುವುದರ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗೆ ದಕ್ಷಿಣ ಆಫ್ರಿಕಾ ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೀಗನ್ ಪೀಟರ್ಸನ್ ತೃತೀಯ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಷ್ಟೇ ಅಲ್ಲದೆ ವಿಶ್ವದ ಹಲವಾರು ಮಾಜಿ ಕ್ರಿಕೆಟಿಗರ ಪ್ರಶಂಸೆಗಳಿಗೂ ಕೂಡ ಕೀಗನ್ ಪೀಟರ್ಸನ್ ಪಾತ್ರರಾದರು. ಹೀಗೆ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿರುವ ದಕ್ಷಿಣ ಆಫ್ರಿಕಾದ ಕೀಗನ್ ಪೀಟರ್ಸನ್ ಕುರಿತು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ನನ್ನ ಬಾಲ್ಯದ ನಾಯಕನನ್ನು ನೆನಪಿಸಿದ ಕೀಗನ್ ಪೀಟರ್ಸನ್ ಎಂದ ರವಿಶಾಸ್ತ್ರಿ

ನನ್ನ ಬಾಲ್ಯದ ನಾಯಕನನ್ನು ನೆನಪಿಸಿದ ಕೀಗನ್ ಪೀಟರ್ಸನ್ ಎಂದ ರವಿಶಾಸ್ತ್ರಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ದಕ್ಷಿಣ ಆಫ್ರಿಕಾದ ಕೀಗನ್ ಪೀಟರ್ಸನ್ ಅವರ ಕುರಿತಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರವಿಶಾಸ್ತ್ರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ಕೀಗನ್ ಪೀಟರ್ಸನ್ ಅತ್ಯುತ್ತಮ ಆಟದ ಮೂಲಕ ಶುಭಾರಂಭವನ್ನು ಮಾಡಿದ್ದಾರೆ. ವಿಶ್ವದ ಅತ್ಯುತ್ತಮ ಆಟಗಾರ ತಯಾರಾಗುತ್ತಿದ್ದಾನೆ. ಈತನ ಆಟವನ್ನು ನೋಡಿ ನನ್ನ ಬಾಲ್ಯದ ನಾಯಕ ಗುಂಡಪ್ಪ ವಿಶ್ವನಾಥ್ ನೆನಪಾಗಿ ಬಿಟ್ಟರು' ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

ಕನ್ನಡಿಗ ಗುಂಡಪ್ಪ ವಿಶ್ವನಾಥ್ ಜತೆ ಕೀಗನ್ ಪೀಟರ್ಸನ್ ಹೋಲಿಸಿದ ರವಿಶಾಸ್ತ್ರಿ

ಕನ್ನಡಿಗ ಗುಂಡಪ್ಪ ವಿಶ್ವನಾಥ್ ಜತೆ ಕೀಗನ್ ಪೀಟರ್ಸನ್ ಹೋಲಿಸಿದ ರವಿಶಾಸ್ತ್ರಿ

ಕೀಗನ್ ಪೀಟರ್ಸನ್ ಅವರ ಆಟವನ್ನು ನೋಡುತ್ತಿದ್ದರೆ ಗುಂಡಪ್ಪ ವಿಶ್ವನಾಥ್ ಆಟ ನೆನಪಾಯ್ತು ಎಂದಿರುವ ರವಿಶಾಸ್ತ್ರಿ ಗುಂಡಪ್ಪ ಅವರ ಉತ್ತಮ ಪ್ರದರ್ಶನದ ಜೊತೆ ಕೀಗನ್ ಪೀಟರ್ಸನ್ ಅವರ ಉತ್ತಮ ಪ್ರದರ್ಶನವನ್ನು ಹೋಲಿಸಿ ಟ್ವೀಟ್ ಮಾಡಿದ್ದಾರೆ. ಆಗಿನ ದಿನಗಳಲ್ಲಿ ಗುಂಡಪ್ಪ ವಿಶ್ವನಾಥ್ ಅನಿವಾರ್ಯ ಟೆಸ್ಟ್ ಪಂದ್ಯಗಳಲ್ಲಿ ಈ ರೀತಿಯ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದರು, ಅದೇ ರೀತಿ ಈಗ ಕೀಗನ್ ಪೀಟರ್ಸನ್ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂಬರ್ಥದಲ್ಲಿ ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada
ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಕೀಗನ್ ಪೀಟರ್ಸನ್

ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಕೀಗನ್ ಪೀಟರ್ಸನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೀಗನ್ ಪೀಟರ್ಸನ್ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಪತ್ಬಾಂಧವರಾದರು. ಹಾಗೂ ತೃತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 72 ರನ್ ಗಳಿಸಿ ಮಿಂಚಿದ್ದ ಈಗನ್ ಪೀಟರ್ಸನ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 83 ರನ್ ಗಳಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗೆ ಒಟ್ಟು 6 ಇನ್ನಿಂಗ್ಸ್‌ನಲ್ಲಿ ಕೀಗನ್ ಪೀಟರ್ಸನ್ 276 ರನ್ ಕಲೆ ಹಾಕುವುದರ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Story first published: Saturday, January 15, 2022, 23:41 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X