ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ: ಗಂಗೂಲಿ ಹೆಸರು ಬಿಟ್ಟ ರವಿಶಾಸ್ತ್ರಿ

ಕೊರೊನಾ ನಡುವೆಯೂ ಐಪಿಎಲ್ 2020 ಯಾವುದೇ ಸಮಸ್ಯೆಗಳಿಲ್ಲದೆ, ಬಹುತೇಕ ಸಫಲವಾಗಿ ಮುಗಿದಿದೆ.

ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಪ್ರಾರಂಭವಾದಾಗ ಕೊರೊನಾ ದ ಭಯ ವಿಪರೀತವಾಗಿಯೇ ಇತ್ತು, ಆ ಸಮಯದಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವುದು ಬಿಸಿಸಿಐಗೆ ಬಹಳ ಸವಾಲಿನ ಕೆಲಸವಾಗಿತ್ತು.

ಐಪಿಎಲ್ ನಡೆಯದೆ 2020 ಮುಗಿಯಲು ಬಯಸಲ್ಲ: ಸೌರವ್ ಗಂಗೂಲಿಐಪಿಎಲ್ ನಡೆಯದೆ 2020 ಮುಗಿಯಲು ಬಯಸಲ್ಲ: ಸೌರವ್ ಗಂಗೂಲಿ

ಆದರೆ ಆಟಗಾರರ, ಸಿಬ್ಬಂದಿಯ, ಅತಿಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಹಲವಾರು ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಂಡು ಅಂತೂ ಐಪಿಎಲ್ 2020 ಟೂರ್ನಿಯನ್ನು ಯಶಸ್ವಿಯಾಗಿಯೇ ಮುಗಿಸಿದೆ. ಐಪಿಎಲ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಬಿಸಿಸಿಐಗೆ, ಟೂರ್ನಿ ಆಯೋಜನೆ ಹಿಂದೆ ಕೆಲಸ ಮಾಡಿದವರಿಗೆ ಅಭಿನಂದನೆಗಳನ್ನು ಅರ್ಪಿಸಲಾಗುತ್ತಿದೆ.

ಉದ್ದೇಶಪೂರ್ವಕವಾಗಿ ಹೆಸರು ಬಿಟ್ಟರೆ ರವಿಶಾಸ್ತ್ರಿ?

ಉದ್ದೇಶಪೂರ್ವಕವಾಗಿ ಹೆಸರು ಬಿಟ್ಟರೆ ರವಿಶಾಸ್ತ್ರಿ?

ಭಾರತ ತಂಡದ ಕೋಚ್ ರವಿಶಾಸ್ತ್ರಿ ಸಹ ಬಿಸಿಸಿಐ ಹಾಗೂ ಇತರ ಪ್ರಮುಖರಿಗೆ ಟ್ವಿಟ್ಟರ್‌ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಸರನ್ನು ಕೈಬಿಟ್ಟಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಜಯ್ ಶಾ, ಬ್ರಿಜೆಶ್ ಪಟೇಲ್‌ಗೆ ಅಭಿನಂದನೆ

ಜಯ್ ಶಾ, ಬ್ರಿಜೆಶ್ ಪಟೇಲ್‌ಗೆ ಅಭಿನಂದನೆ

ರವಿಶಾಸ್ತ್ರಿ ತಮ್ಮ ಟ್ವೀಟ್‌ನಲ್ಲಿ, ಬಿಸಿಸಿಐ ಕಾರ್ಯದರ್ಶಿ, ಜಯ್ ಶಾ, ಬಿಸಿಸಿಐನ ಮಧ್ಯಂತರ ಸಿಇಒ ಹೇಮಂಗ್ ಅಮಿನ್, ಬ್ರಿಜೆಶ್ ಪಟೇಲ್‌ ಮತ್ತು ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಹೇಳಿದ್ದಾರೆ. ಐಪಿಎಲ್ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗಂಗೂಲಿ ಹೆಸರು ಕೈಬಿಟ್ಟಿದ್ದಾರೆ ರವಿಶಾಸ್ತ್ರಿ.

ಉದ್ದೇಶಪೂರ್ವಕವಾಗಿ ಹೆಸರು ಕೈಬಿಟ್ಟಿದ್ದೀರೆಂದು ಆಕ್ಷೇಪ

ಉದ್ದೇಶಪೂರ್ವಕವಾಗಿ ಹೆಸರು ಕೈಬಿಟ್ಟಿದ್ದೀರೆಂದು ಆಕ್ಷೇಪ

ರವಿಶಾಸ್ತ್ರಿ ಯ ಈ ವರ್ತನೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಆಯೋಜನೆಯಲ್ಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪಾತ್ರ ದೊಡ್ಡದಿದೆ. ಆದರೆ ನೀವು ಉದ್ದೇಶಪೂರ್ವಕವಾಗಿ ಅವರ ಹೆಸರು ಕೈಬಿಟ್ಟು, ನಿಮ್ಮ ಮೇಲಿನ ಗೌರವ ಕಡಿಮೆ ಆಗುವಂತೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಗಂಗೂಲಿಗೆ ಶೇನ್ ವಾರ್ನ್‌ ಅಭಿನಂದನೆ

ಗಂಗೂಲಿಗೆ ಶೇನ್ ವಾರ್ನ್‌ ಅಭಿನಂದನೆ

ವಿಶ್ವದ ಹಲವು ಕ್ರಿಕೆಟಿಗರು, ಐಪಿಎಲ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಗಂಗೂಲಿ ಹಾಗೂ ಬಿಸಿಸಿಐ ಅನ್ನು ಹೊಗಳಿದ್ದಾರೆ. ಶೇನ್ ವಾರ್ನ್, ವೀರೇಂದ್ರ ಸೆಹ್ವಾಗ್, ಬ್ರಿಯನ್ ಲಾರಾ ಇನ್ನೂ ಹಲವರು ಧನ್ಯವಾದ ತಿಳಿಸಿದ್ದಾರೆ.

Story first published: Wednesday, November 11, 2020, 14:42 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X